ಆಲಿಯಾ ಕೈ ಹಿಡಿಯುವ ಮುನ್ನ ರಣಬೀರ್ ಕಪೂರ್ ಜೀವನದಲ್ಲಿ ಬಂದು ಹೋದ ಬೆಡಗಿಯರು ಇವರು
ಬಾಲಿವುಡ್ ನಲ್ಲಿ ಸದ್ಯಕ್ಕೆ ಯಾವುದೇ ಹೊಸ ಸಿನಿಮಾದ ಕುರಿತಾದ ದೊಡ್ಡ ಸುದ್ದಿ ಇಲ್ಲವಾದರೂ, ಕ್ಯೂಟ್ ಕಪಲ್ ಎಂದು ಅಲ್ಲಿನ ಜನರಿಂದ ಕರೆಯಲ್ಪಡುವ ನಟ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ವಿವಾಹದ ಸುದ್ದಿಗಳೇ ಈಗ ಪ್ರಮುಖ ಸುದ್ದಿಗಳಾಗಿ ಸಖತ್ ಸದ್ದನ್ನು ಮಾಡುತ್ತಿವೆ. ತಮ್ಮ ಬಹುದಿನಗಳ ಪ್ರೇಮಕ್ಕೆ ವಿವಾಹದ ಮುದ್ರೆಯನ್ನು ಒತ್ತುತ್ತಿರುವ ಈ ಜೋಡಿಯು ಸತಿ ಪತಿಯಾಗುತ್ತಿದ್ದು ಅವರ ಮದುವೆಯ ಸಂಭ್ರಮಾಚರಣೆಗಳು ಬಹಳ ಜೋರಾಗಿ ನಡೆಯುತ್ತಿದ್ದು, ಮದುವೆಯ ವಿವಿಧ ಸಂಪ್ರದಾಯಗಳು ಭರ್ಜರಿಯಾಗಿ ನಡೆದಿದ್ದು, ಬೆರಳೆಣಿಕೆಯಷ್ಟು ಅತಿಥಿಗಳಿಗೆ ಮಾತ್ರವೇ ಆಹ್ವಾನವನ್ನು ನೀಡಿರುವುದು ವಿಶೇಷವಾಗಿದೆ.
ಆದರೆ ರಣಬೀರ್ ಕಪೂರ್ ಜೀವನದಲ್ಲಿ ಆಲಿಯಾ ಮೊದಲ ಡೇಟ್ ಅಲ್ಲ. ಆಲಿಯಾ ಭಟ್ ಗಿಂತಲೂ ಮೊದಲು ಕೆಲವು ನಟಿಯರ ಜೊತೆಗೆ ರಣಬೀರ್ ಕಪೂರ್ ಡೇಟಿಂಗ್ ಮಾಡಿದ್ದ ವಿಚಾರ ರಹಸ್ಯವಾಗಿ ಖಂಡಿತ ಉಳಿದಿಲ್ಲ. ಈಗ ಸಪ್ತಪದಿಯನ್ನು ಆಲಿಯಾ ಭಟ್ ಜೊತೆಗೆ ತಿಳಿಯುತ್ತಿರುವ ರಣಬೀರ್ ಕಪೂರ್ ಜೀವನದಲ್ಲಿ ಈ ಹಿಂದೆ ಬಂದ ಹುಡುಗಿಯರು ಅಥವಾ ನಟಿಯರು ಯಾರು ಯಾರು? ಎನ್ನುವುದು ಅಂದರೆ ರಣಬೀರ್ ಕಪೂರ್ ನ ಪ್ರೇಮ ಕಹಾನಿಯ ಮಾಹಿತಿ ಇಲ್ಲಿದೆ ನೋಡಿ.
ಆವಂತಿಕಾ ಮಲಿಕ್: ಕಾಲೇಜು ದಿನಗಳಲ್ಲಿ ರಣಬೀರ್ ಡೇಟಿಂಗ್ ಮಾಡಿದ್ದು ಆವಂತಿಕಾ ಮಲಿಕ್ ಜೊತೆ. ಆದರೆ ಇವರ ಪ್ರೇಮ ಕಹಾನಿ ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ. ಆವಂತಿಕಾ ಜೊತೆಗೆ ಕೆಲವು ಕಾರಣಗಳಿಂದ ಬ್ರೇಕಪ್ ಆಯಿತು. ಅನಂತರ ಸಿನಿ ರಂಗಕ್ಕೆ ಎಂಟ್ರಿ ನೀಡಿದ ರಣಬೀರ್ ಕಪೂರ್ ತಮ್ಮ ವೃತ್ತಿಯ ಕಡೆಗೆ ಹೆಚ್ಚಿನ ಗಮನವನ್ನು ನೀಡಿದರು.
ನಂದಿತಾ ಮೆಹ್ತಾನಿ: ಕರಿಷ್ಮಾ ಕಪೂರ್ ಅವರ ಮಾಜಿ ಪತಿ ಸಂಜಯ್ ಕಪೂರ್ ಅವರ ಮೊದಲ ಪತ್ನಿ ನಂದಿತಾ ಮೆಹ್ತಾನಿ ಜೊತೆಗೆ ರಣಬೀರ್ ಕಪೂರ್ ಕೆಲವು ಕಾಲ ಡೇಟಿಂಗ್ ಮಾಡಿದ್ದ ಸುದ್ದಿ ಬಹಳ ಸದ್ದು ಮಾಡಿತ್ತು. ಏಕೆಂದರೆ ಇಬ್ಬರ ವಯಸ್ಸಿನ ನಡುವೆ ಇದ್ದ ಅಂತರವು ಚರ್ಚೆಗೆ ಕಾರಣವಾಗಿತ್ತು. ರಣಬೀರ್ ಹಾಗೂ ನಂದಿತಾ ಸಂಬಂಧ ಸಹಾ ಹೆಚ್ಚು ದಿನ ನಡೆಯಲಿಲ್ಲ.
ಸೋನಂ ಕಪೂರ್ : ನಟ ರಣಬೀರ್ ಕಪೂರ್ ಹಾಗೂ ಸೋನಂ ಕಪೂರ್ ಒಟ್ಟಿಗೆ ಸಾವರಿಯಾ ಸಿನಿಮಾ ಮೂಲಕ ಸಿನಿ ರಂಗಕ್ಕೆ ಅಡಿಯಿಟ್ಟರು. ಸಿನಿಮಾ ಮೂಲಕ ಒಂದಾದ ಈ ಜೋಡಿಯ ನಡುವೆ ಏನೋ ಇದೆ ಎನ್ನುವ ಸುದ್ದಿಗಳಾದವು. ಆದರೆ ಎಷ್ಟು ಬೇಗ ವಿಷಯ ಸುದ್ದಿಯಾಯಿತೋ ಅಷ್ಟೇ ಬೇಗ ಅದು ಮುಗಿದು ಹೋಗಿದ್ದು ಸಹಾ ವಾಸ್ತವ.
ದೀಪಿಕಾ ಪಡುಕೋಣೆ : ರಣಬೀರ್ ಹಾಗೂ ದೀಪಿಕಾ ನಡುವಿನ ಪ್ರೇಮ ಕಹಾನಿ ಮಾದ್ಯಮಗಳ ಪ್ರಮುಖ ಸುದ್ದಿಗಳಲ್ಲಿ ಒಂದಾಗಿರುತ್ತಿತ್ತು. ಇಬ್ಬರು ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಪ್ರೀತಿಯ ಸಂಕೇತವಾಗಿ ದೀಪಿಕಾ ಆರ್ ಕೆ ಎಂದು ಟ್ಯಾಟೂ ಹಾಕಿಸಿಕೊಂಡಿದ್ದು ಉಂಟು. ಆದರೆ ಅನಂತರ ವೈಯಕ್ತಿಕ ಕಾರಣಗಳಿಂದ ಈ ಜೋಡಿಯ ನಡುವೆ ಬ್ರೇಕಪ್ ಆಗಿ ಇಬ್ಬರೂ ದೂರವಾದರು.
ನರ್ಗಿಸ್ ಫಕ್ರಿ: ರಣಬೀರ್ ಅಭಿನಯದ ರಾಕ್ ಸ್ಟಾರ್ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ನರ್ಗಿಸ್ ಫಕ್ರಿ ಹಾಗೂ ರಣಬೀರ್ ನಡುವೆ ಪ್ರೇಮ ಚಿಗುರಿದೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಅವರ ಡೇಟಿಂಗ್ ವಿಷಯ ಸುದ್ದಿಗಳಾದವೇ ಹೊರತು ಈ ಕುರಿತಾಗಿ ಈ ಜೋಡಿ ಎಲ್ಲೂ ಮಾತನಾಡಲಿಲ್ಲ.
ಕತ್ರಿನಾ ಕೈಫ್ : ಸಿನಿಮಾವೊಂದರ ಮೂಲಕ ಆದ ರಣಬೀರ್ ಹಾಗೂ ಕತ್ರಿನಾ ಪರಿಚಯ ಪ್ರೀತಿಯಾಗಿ ಅರಳಿತ್ತು. ಕತ್ರಿನಾ ಕಪೂರ್ ಕುಟುಂಬದ ಜೊತೆಗೂ ಕಾಣಿಸಿಕೊಂಡಿದ್ದರು, ಅಲ್ಲದೇ ರಣಬೀರ್ ಮತ್ತು ಕತ್ರಿನಾ ಬೀಚ್ ಫೋಟೋಗಳು ವೈರಲ್ ಆಗಿದ್ದವು. ಇಬ್ಬರ ಮದುವೆ ಖಚಿತ ಎನ್ನುವಷ್ಟು ಸುದ್ದಿಗಳಾದವು. ಆದರೆ ಎಂದಿನಂತೆ ವೈಯಕ್ತಿಕ ಕಾರಣಗಳಿಂದ ಬ್ರೇಕಪ್ ಆಯಿತು.
ಇವೆಲ್ಲವುಗಳಲ್ಲದೇ ರಣಬೀರ್ ಹೆಸರು ಏಂಜಲಾ ಜಾನ್ಸನ್ ಮತ್ತು ಪಾಕಿಸ್ತಾನಿ ನಟಿ ಮಹಿರಾ ಖಾನ್ ಜೊತೆಗೆ ತಳಕು ಹಾಕಿಕೊಂಡಿತ್ತು. ಆದರೆ ಈಗ ಎಲ್ಲಾ ಪ್ರೇಮ ಕಹಾನಿಗಳ ನಂತರ ಆಲಿಯಾ ಭಟ್ ಪ್ರೇಮದಲ್ಲಿ ಬಿದ್ದ ರಣಬೀರ್ ಕಪೂರ್ ಇದೀಗ ಆಕೆಯೊಡನೆ ಏಳು ಸುತ್ತು ( ಸಾತ್ ಫೇರೆ ) ಸುತ್ತಿ ತನ್ನ ವೈವಾಹಿಕ ಜೀವನವನ್ನು ನಡೆಸಲು ಸಜ್ಜಾಗಿದ್ದು, ಅವರ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.