ಆರ್ಯವರ್ಧನ್ ಪಾತ್ರಕ್ಕೆ ಜನಪ್ರಿಯ ನಟನ ಎಂಟ್ರಿ ಆಗೋಯ್ತಾ? ಇಷ್ಟಕ್ಕೂ ಯಾರು ಆ ನಟ?

Written by Soma Shekar

Published on:

---Join Our Channel---

ಕನ್ನಡ ಕಿರುತೆರೆಯಲ್ಲಿ ಕಳೆದೆರಡು ದಿನಗಳಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಹಾಗೂ ತೀವ್ರವಾದ ಚರ್ಚೆಗಳನ್ನು ಹುಟ್ಟು ಹಾಕಿರುವ ವಿಷಯ ಏನು ಎನ್ನುವುದಾದರೆ ಅದು ನಟ ಅನಿರುದ್ಧ್ ಅವರ ವಿ ರು ದ್ಧ ಜೊತೆ ಜೊತೆಯಲಿ ಸೀರಿಯಲ್ ತಂಡವು ಮಾಡಿರುವ ಆ ರೋ ಪಗಳು ಹಾಗೂ ಅವರ ದೂರಿನ ಅನ್ವಯ ನಿರ್ಮಾಪಕರ ಸಂಘ ತೆಗೆದುಕೊಂಡಿರುವ ಕಠಿಣ ನಿರ್ಧಾರವಾಗಿದೆ. ಹೌದು, ನಿರ್ಮಾಪಕರ ಸಂಘವು ಅನಿರುದ್ಧ್ ಅವರನ್ನು ಯಾವುದೇ ಧಾರಾವಾಹಿ, ರಿಯಾಲಿಟಿ ಶೋ ಗಳಿಗೂ ಸಹಾ ಆಯ್ಕೆ ಮಾಡಿಕೊಳ್ಳುಬಾರದು ಎನ್ನುವ ಸ್ಪಷ್ಟವಾದ ನಿಲುವನ್ನು ವ್ಯಕ್ತಪಡಿಸಿರುವುದು ಮಾತ್ರವೇ ಅಲ್ಲದೇ ವಾಹಿನಿ ಸಹಾ ಇನ್ಮುಂದೆ ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಅನಿರುದ್ಧ್ ಅವರು ಇರುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ ಎನ್ನಲಾಗಿದೆ.‌

ವಾಹಿನಿ ಮತ್ತು ಸೀರಿಯಲ್ ತಂಡವು ಒಪ್ಪಿದರೆ ನಾನು ನಟಿಸುತ್ತೇನೆ ಎಂದು ನಟ ಅನಿರುದ್ಧ್ ಅವರು ಹೇಳಿದರಾದರೂ, ಅದಕ್ಕೆ ವಾಹಿನಿ ಅಥವಾ ಸೀರಿಯಲ್ ತಂಡ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿಲ್ಲ ಎನ್ನುವ ಸುದ್ದಿಯೂ ಸಹಾ ಹರಿದಾಡಿದೆ. ಈಗ ಇವೆಲ್ಲವುಗಳ ಬೆನ್ನಲ್ಲೇ ಹೊಸ ಚರ್ಚೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿದೆ. ಒಂದು ಕಡೆ ಅನಿರುದ್ಧ್ ಅವರ ಅಭಿಮಾನಿಗಳು ಆರ್ಯವರ್ಧನ್ ಪಾತ್ರದಲ್ಲಿ ಅನಿರುದ್ಧ್ ಅವರು ನಟಿಸದೇ ಹೋದಲ್ಲಿ ನಾವು ಸೀರಿಯಲ್ ನೋಡುವುದಿಲ್ಲ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ.

ಇನ್ನೊಂದು ಕಡೆ ಅನಿರುದ್ಧ್ ಅವರು ಈ ಸೀರಿಯಲ್ ನಲ್ಲಿ ಇನ್ನು ಮುಂದೆ ನಟಿಸುವುದಿಲ್ಲ ಎನ್ನುವುದಾದರೆ ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಬಹುಮುಖ್ಯ ಪಾತ್ರ ಎನಿಸಿರುವ ಆರ್ಯವರ್ಧನ್ ಪಾತ್ರವನ್ನು ಯಾರು ಮುಂದುವರೆಸಲಿದ್ದಾರೆ ಎನ್ನುವ ಚರ್ಚೆ ಸಹಾ ಆರಂಭವಾಗಿದೆ. ಏಕೆಂದರೆ ಜೊತೆ ಜೊತೆಯಲಿ ಧಾರಾವಾಹಿ ಆರಂಭದಿಂದಲೂ ಆರ್ಯವರ್ಧನ್ ಪಾತ್ರದಲ್ಲಿ ಪ್ರೇಕ್ಷಕರು ನೋಡಿರುವುದು ನಟ ಅನಿರುದ್ದ್ ಅವರನ್ನು. ಅವರು ಸಹಾ ಆರ್ಯವರ್ಧನ್ ಪಾತ್ರಕ್ಕೆ ತಕ್ಕಂತೆ ಗಾಂಭೀರ್ಯವನ್ನು ಪ್ರದರ್ಶಿಸುತ್ತಾ, ಪಾತ್ರಕ್ಕೆ ಜೀವ ತುಂಬಿ, ಆರ್ಯವರ್ಧನ್ ಪಾತ್ರದಿಂದಲೇ ಅಪಾರ ಜನರ ಮನಸ್ಸನ್ನು ಗೆದ್ದಿದ್ದರು.

ಇಂತಹುದೊಂದು ಪ್ರಮುಖ ಪಾತ್ರ, ಈಗಾಗಲೇ ಅಪಾರ ಜನ ಮನ್ನಣೆ ಪಡೆದಿರುವ ಪಾತ್ರಕ್ಕೆ ಯಾವ ನಟ ಬರುತ್ತಾರೆ ಎನ್ನುವ ಕುತೂಹಲ ಹುಟ್ಟಿಕೊಂಡಿರುವ ಈ ಸಮಯದಲ್ಲಿ ಹೊಸ ಸುದ್ದಿಯೊಂದು ಹರಿದಾಡಿದ್ದು, ಆರ್ಯವರ್ಧನ್ ಪಾತ್ರಕ್ಕೆ ಕನ್ನಡ ಕಿರುತೆರೆ ಹಾಗೂ ಬೆಳ್ಳಿ ತೆರೆ ಮಾತ್ರವೇ ಅಲ್ಲದೇ, ಹಿಂದಿ ಕಿರುತೆರೆಯಲ್ಲಿ ಸಹಾ ರಾವಣನ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಪ್ರತಿಭಾವಂತ ನಟ, ಅಗ್ನಿ ಸಾಕ್ಷಿ ಖ್ಯಾತಿಯ ಕಾರ್ತಿಕ್ ಜಯರಾಂ ಅವರನ್ನು ಆರ್ಯವರ್ಧನ್ ಪಾತ್ರಕ್ಕೆ ಕರೆ ತರಲಾಗುವುದು ಎನ್ನುವ ಸುದ್ದಿಯೊಂದು ಈಗ ಹರಿದಾಡಿದೆ.

ಜೆಕೆ ಎಂದೇ ಚಿರಪರಿಚಿತ ಆಗಿರುವ ಕಾರ್ತಿಕ್ ಜಯರಾಂ ಅವರು ಕಿರುತೆರೆ ಹಾಗೂ ಬೆಳ್ಳಿ ತೆರೆಯ ಪ್ರೇಕ್ಷಕರಿಗೆ ಚಿರ ಪರಿಚಿತವಾದ ಮುಖವಾಗಿದ್ದಾರೆ. ತಮ್ಮ ಅಭಿನಯ ಕೌಶಲ್ಯದ ಮೂಲಕ ದೊಡ್ಡ ಸಂಖ್ಯೆಯ ಅಭಿಮಾನ ಬಳಗವನ್ನು ಸಹಾ ಅವರು ಹೊಂದಿದ್ದಾರೆ. ಆರ್ಯವರ್ಧನ್ ಪಾತ್ರಕ್ಕೆ ಅವರು ಸೂಟ್ ಆಗುತ್ತಾರೆ ಎನ್ನುವುದು ನೆಟ್ಟಿಗರ ಅಭಿಪ್ರಾಯವಾಗಿದೆ. ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಹೊರ ಬಂದಿಲ್ಲವಾದರೂ ಸದ್ಯಕ್ಕೆ ಕಾರ್ತಿಕ್ ಜಯರಾಂ ಅವರ ಹೆಸರು ಆರ್ಯವರ್ಧನ್ ಪಾತ್ರದ ವಿಚಾರದಲ್ಲಿ ಹರಿದಾಡಿ ಗಮನವನ್ನು ಸೆಳೆಯುತ್ತಿದೆ.

Leave a Comment