ನಟ ಅನಿರುದ್ಧ ಅವರು ಜೊತೆ ಜೊತೆಯಲಿ ಸೀರಿಯಲ್ ನಿಂದ ಹೊರ ಬಂದ ಮೇಲೆ ಸಹಜವಾಗಿಯೇ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಜನ ಸೀರಿಯಲ್ ಅಭಿಮಾನಿಗಳು ತಮ್ಮ ಬೇಸರ ಮತ್ತು ಅಸಹನೆಯನ್ನು ಹೊರ ಹಾಕಿದ್ದರು. ನಾವು ಇನ್ನು ಜೊತೆ ಜೊತೆಯಲಿ ಸೀರಿಯಲ್ ಅನ್ನು ನೋಡುವುದೇ ಇಲ್ಲ ಎನ್ನುವಂತೆ ಕಾಮೆಂಟ್ ಗಳನ್ನು ಮಾಡಿದ್ದರು. ಆದರೂ ನಾಯಕನಾಗಿಂತ ಕಥೆಯೇ ಮುಖ್ಯ ಎನ್ನುವ ಉದ್ದೇಶದೊಂದಿಗೆ ನಿರ್ದೇಶಕರು ಕಥೆಯಲ್ಲಿ ಹೊಸ ಹೊಸ ಟ್ವಿಸ್ಟ್ ಗಳನ್ನು ನೀಡುವ ಮೂಲಕ ಜೊತೆ ಜೊತೆಯಲಿ ಸೀರಿಯಲ್ ಅನ್ನು ಮುಂದುವರೆಸುತ್ತಾ, ಪ್ರೇಕ್ಷಕರನ್ನು ಹಿಡಿದಿಡುವ ಎಲ್ಲಾ ಪ್ರಯತ್ನವನ್ನು ಮಾಡುತ್ತಿದ್ದಾರೆ. ಪ್ರೇಕ್ಷಕರು ಸೀರಿಯಲ್ ಕಥೆಯನ್ನು ಮೆಚ್ಚುವಂತೆ ಮಾಡಲು ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಸೀರಿಯಲ್ ನಲ್ಲಿ ನಾಯಕನ ಪಾತ್ರಕ್ಕೆ ಅ ಪ ಘಾತ ಮಾಡಿಸಿದ್ದಾಗಿದೆ.
ಇತ್ತೀಚಿಗೆ ಹೊಸ ಎಂಟ್ರಿ ನೀಡಿದ ಹರೀಶ್ ರಾಜ್ ಅವರ ವಿಶ್ವಾಸ್ ದೇಸಾಯಿ ಪಾತ್ರವನ್ನು ಸಾಯಿಸಿಯಾಗಿದೆ. ಆ ಮುಖವನ್ನು ಆರ್ಯವರ್ಧನ್ ಗೆ ನೀಡಿ, ಆತ ಹಿಂದಿನದೆಲ್ಲಾ ಮರೆತಿರುವ ಹಾಗೆ ಕಥೆಯನ್ನು ಹೆಣೆಯಲಾಗಿದ್ದು, ಈಗ ಇವೆಲ್ಲವುಗಳ ನಡುವೆಯೇ ಪ್ರೇಕ್ಷಕರಿಗೆ ಶಾ ಕ್ ನೀಡುವಂತಹ ಹೊಸ ಟ್ವಿಸ್ಟ್ ಒಂದನ್ನು ನೀಡಿದ್ದಾರೆ ನಿರ್ದೇಶಕರು. ಹೌದು, ಸೀರಿಯಲ್ ನಲ್ಲಿ ಆರ್ಯವರ್ಧನ್ ಗೆ ಅಪಘಾತ ಆಗಿದ್ದು ಸಹಜವಲ್ಲ, ಅದೊಂದು ಕೊ ಲೆ ಪ್ರಯತ್ನ ಎನ್ನುವ ಅನುಮಾನ ಮೂಡಿಸಲಾಗಿದ್ದು, ಈಗ ಅದಕ್ಕೆ ಅನುನೇ ಕಾರಣ ಎನ್ನುವಂತೆ ಹೊಸ ಟ್ವಿಸ್ಟ್ ಒಂದನ್ನು ನೀಡಲಾಗಿದ್ದು, ಪ್ರೇಕ್ಷಕರು ಹೊಸ ತಿರುವನ್ನು ನೋಡಿ ಖಂಡಿತ ಅಚ್ಚರಿ ಪಡುವಂತಾಗಿದೆ.
ಆರ್ಯವರ್ಧನ್ ದೇಹಕ್ಕೆ ವಿಶ್ವಾಸ್ ದೇಸಾಯಿ ಮುಖವನ್ನು ನೀಡಲಾಗಿದೆ. ಇನ್ನೊಂದು ಕಡೆ ವಿಶ್ವಾಸ್ ದೇಹಕ್ಕೆ ಆರ್ಯವರ್ಧನ್ ಹೆಸರಿನಲ್ಲಿ ಅಂತಿಮ ಸಂಸ್ಕಾರವನ್ನು ಮಾಡಲಾಗುತ್ತಿದೆ. ಈ ವೇಳೆಯಲ್ಲೇ ಹೊಸ ಮೆಗಾ ಟ್ಚಿಸ್ಟ್ ನೀಡಲಾಗಿದೆ. ಹೌದು, ಆರ್ಯವರ್ಧನ್ ಕೊ ಲೆ ಮಾಡಲು ನಾಯಕಿ ಅನು ಸಂಚು ರೂಪಿಸಿದ್ದಳು ಎನ್ನುವ ಕಾರಣವನ್ನು ನೀಡುವ ಮೂಲಕ ಅನುವನ್ನು ಪೋಲಿಸರು ಬಂಧಿಸಲು ಮುಂದಾಗಿದ್ದಾರೆ. ಪೋಲಿಸರು ಅನುವನ್ನು ಬಂಧಿಸಿ ಸ್ಮಶಾನದಿಂದಲೇ ಕರೆದುಕೊಂಡು ಹೋಗಲಾಗಿದೆ. ಈ ಮೂಲಕ ಅನು ಮತ್ತು ಆರ್ಯವರ್ಧನ್ ಪಾತ್ರಗಳ ಸುತ್ತ ಇನ್ನಷ್ಟು ಹೊಸ ವಿಚಾರಗಳು ಹೆಣೆದುಕೊಳ್ಳಲಿದೆ ಎನ್ನಲಾಗಿದೆ.
ಆರ್ಯನ ಕೊ ಲೆ ಯ ಸಂಚನ್ನು ರೂಪಿಸಿರುವುದು, ಕೊ ಲೆ ಗೆ ಕಾರಣವಾಗಿರುವುದು ಅನು ಎಂದು ಆ ರೋ ಪ ಮಾಡಿರುವ ಪೋಲಿಸರು ಅನುವನ್ನು ಬಂ ಧಿ ಸಿದ್ದಾರೆ. ಹಾಗಾದರೆ ಅನು ಜೈಲಿಗೆ ಹೋದರೆ ಆಕೆಯನ್ನು ನಿರಪರಾಧಿ ಎಂದು ಸಾಬೀತು ಮಾಡಲು ಆರ್ಯವರ್ಧನ್ ಮರಳಿ ಬರಲೇಬೇಕು, ಇಲ್ಲವಾದರೆ ಅನು ಕೊ ಲೆ ಮಾಡಲು ಪ್ರಯತ್ನ ಮಾಡಲಿಲ್ಲ ಎನ್ನುವುದನ್ನು ಸಾಬೀತು ಮಾಡುವುದು ಈಗ ಅನಿವಾರ್ಯವಾಗಿದೆ. ಹಾಗಾದರೆ ನಾಯಕನಿಗಿಂತ ಕಥೆ ಮುಖ್ಯ ಎಂದು ಸಾಗಿರುವ ಸೀರಿಯಲ್ ಪ್ರೇಕ್ಷಕರ ಮನಸ್ಸನ್ನು ಸೂರೆಗೊಳ್ಳುವುದು ಹೇಗೆ ? ಕಾದು ನೋಡಬೇಕಾಗಿದೆ.