ಆರ್ಯನ ಶತೃ ಜಲಂಧರ್ ನ ತನ್ನ ಅಸ್ತ್ರ ಮಾಡಿಕೊಂಡ ಅನು: ನಿಜ ತಿಳಿದರೆ ಆರ್ಯ ಸುಮ್ಮನೆ ಇರ್ತಾನಾ??

0 3

ಕನ್ನಡ ಕಿರುತೆರೆಯಲ್ಲಿ ಮನರಂಜನೆ ವಿಚಾರ ಬಂದಾಗ ಅಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವುದು ಸೀರಿಯಲ್ ಗಳು.‌ ವೈವಿದ್ಯಮಯ ಶೋ ಗಳು ಪ್ರಸಾರವಾಗುತ್ತವೆಯಾದರೂ ಸೀರಿಯಲ್ ಗಳನ್ನು ಮೆಚ್ಚಿ ನೋಡುವ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಹೀಗೆ ಜನರ ಅಪಾರವಾದ ಅಭಿಮಾನವನ್ನು ಪಡೆದ ಟಾಪ್ ಸೀರಿಯಲ್ ಗಳಲ್ಲಿ ಜೊತೆ ಜೊತೆಯಲಿ ಯಶಸ್ಸಿನ ನಾಗಾಲೋಟವನ್ನು ಮಾಡುತ್ತಿರುವ ಸೀರಿಯಲ್ ಆಗಿದೆ. ಜೊತೆ ಜೊತೆಯಲಿ ಆರಂಭದಿಂದಲೂ ಸಹಾ ಜನರ ಗಮನವನ್ನು ಸೆಳೆದು ಕುತೂಹಲವನ್ನು ಕೆರಳಿಸಿರುವ ಸೀರಿಯಲ್ ಆಗಿದೆ.

ದಿನ ಕಳೆದಂತೆ ಇನ್ನಷ್ಟು ರೋಚಕವಾಗುತ್ತಾ ಸಾಗಿರುವ ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ನಾಯಕಿ ಅನು ಸಿರಿಮನೆಗೆ ತಾನೇ ರಾಜನಂದಿನಿ ಎಂದು ತಿಳಿದ ಮೇಲೆ ಆಕೆ ನಾಯಕ ಆರ್ಯವರ್ಧನ್ ಮತ್ತು ಕೇಶವ್ ಜೇಂಡೆಯ ಒಳ್ಳೆಯತನ ಎಂಬ ಮುಖವಾಡವನ್ನು ಕಳಚಲು ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದಾಳೆ. ಅದರ ಭಾಗವಾಗಿಯೇ ತನ್ನ ಪಾಲಿನ ಆಸ್ತಿಯನ್ನು ಅನು ಪಡೆದಿದ್ದಾಳೆ. ಆರ್ಯ ಮತ್ತು ಜೇಂಡೆಯಿಂದ ಮೋಸ ಹೋದ, ಅವರ ಪಾಲಿಗೆ ಸತ್ತೇ ಹೋಗಿರುವ ಜಲಂಧರ್ ನನ್ನು ಅನು ಮತ್ತೆ ಭೇಟಿಯಾಗಿದ್ದಾಳೆ.

ಅನು ಜಲಂಧರನ ಬಳಿ ಆರ್ಯನ ವಿ ರು ದ್ಧ ತನಗೆ ಬೇಕಿದ್ದ ಸಾಕ್ಷ್ಯಗಳನ್ನು ಸಂಗ್ರಹ ಮಾಡಿದ್ದಾಳೆ. ಜಲಂಧರ್ ಕೂಡಾ ತಾನು ಇದೆಲ್ಲಾ ಯಾವಾಗಲೋ ಕೊಡಬೇಕು ಅಂತಿದ್ದೆ ಆದರೆ ನೀನೆ ಅದನ್ನೆಲ್ಲ ತಗೊಂಡ್ ಇರ್ಲಿಲ್ಲ ಎನ್ನುವ ಮಾತನ್ನು ಹೇಳುತ್ತಾ, ಆರ್ಯನ ಅಸಲಿಯತ್ತನ್ನು ತಿಳಿಸುವ ದಾಖಲೆಗಳನ್ನು ಅನು ಕೈಗೆ ನೀಡಿದ್ದಾನೆ. ಸಾಲದಕ್ಕೆ ಆರ್ಯ ಮಾಡಿದ್ದ ಮೋಸದ ಕುರಿತಾಗಿ ದೂರನ್ನು ನೀಡಿದ್ದರೂ ಸಹಾ ಅದರ ಬಗ್ಗೆ ಯಾವುದೇ ಕ್ರಮವನ್ನೂ ಕೈಗೊಂಡಿರಲಿಲ್ಲ ಎನ್ನುವ ವಿಚಾರವನ್ನು ಕೂಡಾ ತಿಳಿಸಿದ್ದಾನೆ.

ಮತ್ತೊಂದು ಕಡೆ ಅನು ಮತ್ತು ಮೀರಾ ಆಸ್ತಿ ಪತ್ರಗಳಲ್ಲಿ ಆರ್ಯನಿಗೆ ತಿಳಿಯದಂತೆ ಮಾಡಿಸಿರುವ ಪತ್ರಗಳ ವಿಚಾರವು ಕೂಡಾ ಹೊರ ಬರುವ ಸಾಧ್ಯತೆಗಳು ಕಾಣುತ್ತಿದೆ.‌‌ ಪತ್ರಗಳು ಸರಿಯಾಗಿ ಇದೆಯೋ ಇಲ್ಲವೋ ಎಂದು ತಿಳಿಯಲು ಆರ್ಯ ಆಸ್ತಿ ಪತ್ರಗಳನ್ನು ವಕೀಲರಿಗೆ ನೀಡಿ ಎಲ್ಲವೂ ಸರಿಯಾಗಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳುವ ಕಡೆ ಗಮನ ನೀಡಿದ್ದಾನೆ. ಒಂದು ವೇಳೆ ಅವು ನಕಲಿ ಪತ್ರಗಳು ಎಂದು ತಿಳಿದರೆ ಆರ್ಯ ಮೇಲೆ ಆರ್ಯ ಇಟ್ಟಿರುವ ನಂಬಿಕೆ ಸುಳ್ಳಾಗುತ್ತದೆ.

ಆ ರೀತಿ ಆದರೆ ಆರ್ಯ ಅನು ವಿಚಾರವಾಗಿ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾನೆ ಎನ್ನುವುದು ಕುತೂಹಲ ಮೂಡಿಸಿದೆ. ಎಲ್ಲೋ ಒಂದು ಕಡೆ ಒಂದಷ್ಟು ವಿಚಾರಗಳು ಆರ್ಯನಿಗೆ ತಿಳಿಯದೆ ನಡೆದಿದೆ ಎನ್ನುವ ಸುಳಿವುಗಳನ್ನು ಸಹಾ ನೀಡಲಾಗಿದ್ದು ಆರ್ಯ ಸಂಪೂರ್ಣವಾಗಿ ಖಳನಾಯಕನೋ, ಅಲ್ಲವೋ ಎನ್ನುವ ಅನುಮಾನವನ್ನು ಕೂಡಾ ಕೆಲವೊಂದು ಸನ್ನಿವೇಶಗಳು ಹುಟ್ಟುಹಾಕಿದೆ. ಅನು ಗರ್ಭದಲ್ಲಿ ಆರ್ಯನ ಪ್ರೀತಿಯ ಕಾಣಿಕೆಯಾಗಿ ಮಗು ಬೆಳೆಯುತ್ತಿದೆ. ಇಂತಹ ಸಂದರ್ಭದಲ್ಲಿ ಅನು ಮುಂದಿನ ನಿರ್ಧಾರ ಹೇಗಿರುತ್ತದೆ ಎಂಬುದನ್ನು ತಿಳಿಯಲು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.

Leave A Reply

Your email address will not be published.