ಆರ್ಯನ್ ಖಾನ್ ಬಂಧನ: ಸರಣಿ ಟ್ವೀಟ್ ನಲ್ಲಿ ವ್ಯಂಗ್ಯವಾಡಿ ರಾಮ್ ಗೋಪಾಲ್ ವರ್ಮಾ ಹೇಳಿದ್ದೇನು??

Entertainment Featured-Articles News
84 Views

ತನ್ನ ವಿಶಿಷ್ಟ ಹಾಗೂ ವಿಭಿನ್ನ ರೀತಿಯ ಸಿನಿಮಾಗಳಿಂದ ಜನಪ್ರಿಯತೆ ಪಡೆದಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಇತ್ತೀಚನ ದಿನಗಳಲ್ಲಿ ವಿವಾದಗಳನ್ನು ಹುಟ್ಟು ಹಾಕುವುದರಲ್ಲಿ ಕೂಡಾ ಹೆಸರಾಗಿದ್ದಾರೆ. ಒಂದಲ್ಲಾ ಒಂದು ವಿಷಯದಿಂದ ಅಥವಾ ನೀಡುವ ಹೇಳಿಕೆಗಳಿಂದ ಅವರು ಸುದ್ದಿಯಾಗುತ್ತಾರೆ. ಇತ್ತೀಚಿಗೆ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ನನ್ನು ಎನ್ ಸಿ ಬಿ ಡ್ರ ಗ್ಸ್ ಪ್ರಕರಣದಲ್ಲಿ ಬಂಧಿಸಿರುವುದು ದೇಶ ವ್ಯಾಪಿ ದೊಡ್ಡ ಸುದ್ದಿಯಾಗಿದೆ. ಎನ್ ಸಿ ಬಿ ಆರ್ಯನ್ ಖಾನ್ ನನ್ನು ಬಂಧಿಸಿದ ನಂತರ ಇದು ಸಿನಿಮಾ ರಂಗಕ್ಕೆ ಒಂದು ಶಾ ಕ್ ಆಗಿತ್ತು. ಆದರೆ ಇದೇ ವಿಷಯವನ್ನು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಮ್ಮದೇ ಆದ ಸ್ಟೈಲ್ ನಲ್ಲಿ ವಿಶ್ಲೇಷಣೆ ಮಾಡಿ ಸದ್ದು ಮಾಡಿದ್ದಾರೆ.

ಆರ್ಯನ್ ಖಾನ್ ಬಂಧನದ ವಿಷಯವಾಗಿ ಸರಣಿ ಟ್ವೀಟ್ ಗಳನ್ನು ಮಾಡಿರುವ ರಾಮ್ ಗೋಪಾಲ್ ವರ್ಮಾ, ಟ್ವೀಟ್ ಗಳಲ್ಲಿ ನೀಡಿರುವ ವಿಶ್ಲೇಷಣೆ ನಿಜಕ್ಕೂ ವಿಶೇಷವಾಗಿದೆ. ರಾಮ್ ಗೋಪಾಲ್ ವರ್ಮಾ ಟ್ವೀಟ್ ನಲ್ಲಿ, ನಾನು ಸವಾಲು ಹಾಕುತ್ತೇನೆ. ಜೈಲಿನಿಂದ ಹೊರ ಬಂದ ಮೇಲೆ ಆರ್ಯನ್ ಖಾನ್ ತಾನು ಜೀವನದ ಅನೇಕ ಪಾಠಗಳನ್ನು ಜೈಲಿನಲ್ಲಿ ಕಲಿತುಕೊಂಡೆ, ಎನ್ ಸಿ ಬಿ ಅಧಿಕಾರಿಗಳಿಂದ ಸಹಾ ಕಲಿತುಕೊಂಡೆ ಎಂದು ಹೇಳದಿದ್ದರೆ ಕೇಳಿ ಎಂದು ಹೇಳಿದ್ದಾರೆ. ಶಾರೂಖ್ ಖಾನ್ ಪುತ್ರನಿಗೆ ಎನ್ ಸಿ ಬಿ ಸೂಪರ್ ಸ್ಟಾರ್ ಪಟ್ಟ ತಂದು ಕೊಟ್ಟಿದೆ ಎಂದಿದ್ದಾರೆ.

ಶಾರೂಖ್ ಅವರ ಕಟ್ಟಾ ಅಭಿಮಾನಿಗಳು ಎನ್ ಸಿ ಬಿ ಗೆ ಧನ್ಯವಾದಗಳನ್ನು ಹೇಳಬೇಕಾಗಿದೆ. ಸೂಪರ್ ಸ್ಟಾರ್ ನ‌ ಮಗನನ್ನು ಸೂಪರ್ ಡೂಪರ್ ಸ್ಟಾರ್ ಆಗಿ ಮಾಡಿದ ಎನ್ ಸಿ ಬಿ ಗೆ ಜೈ ಎನ್ನಬೇಕು ಎಂದು ಒಂದು ಟ್ವೀಟ್ ನಲ್ಲಿ ಹೇಳಿದ್ದಾರೆ. ಸೂಪರ್ ಸ್ಟಾರ್ ಮಗನನ್ನು ಬಹಳ ಅದ್ಭುತವಾಗಿ ಲಾಂಚ್ ಮಾಡಲಾಗಿದೆ ಎಂದು ಹೇಳಿರುವ ಅವರ ಮಾತನ್ನು ವ್ಯಂಗ್ಯ ಎನ್ನಬೇಕೋ ಅಥವಾ ಟೀಕೆ ಎನ್ನಬೇಕೋ ತಿಳಿಯದು. ಆದರೆ ಅವರ ಈ ಸರಣಿ ಟ್ವೀಟ್ ಗಳು ಮಾತ್ರ ಸಖತ್ ಸದ್ದು ಮಾಡಿದೆ. ಇನ್ನೊಂದು ಟ್ವೀಟ್ ಇನ್ನೂ ಹೆಚ್ಚು ಆಸಕ್ತಿಕರವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು.

ಶಾರೂಖ್ ಖಾನ್ ಅವರ ಮಗನ ಪ್ರಚಾರದಲ್ಲಿ 4 ಹಂತಗಳನ್ನು ಹೊಂದಿದೆ, ಮೊದಲನೆಯದು ಶಾರೂಖ್ ಖಾನ್ ಅವರ ಮಗನಂತೆ, ತನ್ನ ಮೊದಲ ಚಲನಚಿತ್ರವನ್ನು ಮಾಡುವ ನಿರ್ದೇಶಕ, ನಂತರ NCB ಮತ್ತು ತನ್ನ ತಂದೆ ಗಿಂತ ಮೊದಲೇ ಇಂತಹ ಲಾಂಚರ್ ನೀಡಿದ ಮಾಧ್ಯಮ, ಆದರೆ ಎಲ್ಲದ್ದಕ್ಕಿಂತ NCB ಅಗ್ರಸ್ಥಾನದಲ್ಲಿದೆ ಎಂದು ಬರೆದುಕೊಂಡಿದ್ದಾರೆ. ಒಟ್ಟಾರೆ ರಾಮ್ ಗೋಪಾಲ್ ವರ್ಮಾ ಯಾವ ಅರ್ಥದಿಂದ ಬರೆದಿದ್ದಾರೋ ಗೊತ್ತಿಲ್ಲ ಆದರೆ ಆರ್ಯನ್ ಖಾನ್ ಸೂಪರ್ ಸ್ಟಾರ್ ಆಗಿದ್ದಾ‌ನೆ ಈ ಪ್ರಕರಣದಿಂದ ಎಂದಿರುವುದು ನಿಜ.

Leave a Reply

Your email address will not be published. Required fields are marked *