ಆರೋಪಿ ಜೊತೆ ನಟಿ ರೊಮ್ಯಾನ್ಸ್: ಮಾದ್ಯಮ ಮಿತ್ರರೇ ನನ್ನ ಖಾಸಗೀತನಕ್ಕೆ ಸ್ಪೇಸ್ ನೀಡಿ ಎಂದ ನಟಿ

Written by Soma Shekar

Published on:

---Join Our Channel---

ಬಾಲಿವುಡ್ ನಟಿ ಜಾಕ್ವೆಲಿನಾ ಫರ್ನಾಂಡೀಸ್ ಇತ್ತೀಚಿನ ದಿನಗಳಲ್ಲಿ ತಮ್ಮ ಹೊಸ ಸಿನಿಮಾಗಳಿಗಿಂತ ಹೆಚ್ಚಾಗಿ ಕೋಟಿ ಕೋಟಿ ವಂಚಕನಾದ ಸುಖೇಖ್ ಚಂದ್ರಶೇಖರ್ ಜೊತೆಗಿನ ಒಡನಾಟದ ಕಾರಣದಿಂದ ಸಖತ್ ಸುದ್ದಿಯಾಗಿದ್ದಾರೆ. ಸುಖೇಶ್ ಚಂದ್ರಶೇಖರ್ ಜೊತೆಗೆ ಜಾಕ್ವಿಲಿನಾ ನಿಕಟವಾಗಿರುವ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ ಅಲ್ಲದೇ ಮಾದ್ಯಮಗಳಲ್ಲಿ ಪ್ರಮುಖ ಸುದ್ದಿಯಾಗಿದೆ‌. ಅದು ಸಾಲದೆಂಬಂತೆ ಸುಖೇಶ್ ಜೊತೆಗಿನ ಸಂಬಂಧದ ಒಡನಾಟದ ಕಾರಣದಿಂದ ಇಡಿ ವಿಚಾರಣೆಗೆ ಕೂಡಾ ನಟಿ ಒಳಗಾಗಿದ್ದರು.

ಇವೆಲ್ಲವುಗಳ ನಡುವೆ ಮತ್ತೊಂದು ಹೊಸ ಫೋಟೋ ಒಂದು ಸೋಶಿಯಲ್ ಮೀಡಿಯಾಗಳಲ್ಲಿ ಹಾಗೂ ಮಾದ್ಯಮ ಸುದ್ದಿಗಳಲ್ಲಿ ವೈರಲ್ ಆಗಿದೆ. ಸುಖೇಶ್ ಜೊತೆ ಜಾಕ್ವೇಲಿನಾ ಕಳೆದಿರುವ ಕೆಲವು ಖಾಸಗಿ ಕ್ಷಣಗಳ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಯಾವಾಗ ಈ ಫೋಟೋ ಹರಿದಾಡಿ ಎಲ್ಲೆಡೆ ಸುದ್ದಿಯಾಯಿತೋ ಕೂಡಲೇ ನಟಿ ಜಾಕ್ವಿಲಿನಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ.

ನಟಿ ಜಾಕ್ವೆಲಿನಾ ತಮ್ಮ ಪೋಸ್ಟ್ ನಲ್ಲಿ, ಈ ದೇಶ ಮತ್ತು ಅದರ ಜನರು ಯಾವಾಗಲೂ ನನಗೆ ಅಪಾರ ಪ್ರೀತಿ ಮತ್ತು ಗೌರವವನ್ನು ನೀಡಿದ್ದಾರೆ. ಇದರಲ್ಲಿ ಮಾಧ್ಯಮದ ನನ್ನ ಸ್ನೇಹಿತರೂ ಸಹಾ ಸೇರಿದ್ದಾರೆ, ಅವರಿಂದ ನಾನು ಬಹಳಷ್ಟು ಕಲಿತಿದ್ದೇನೆ. ನಾನು ಪ್ರಸ್ತುತ ನಾನು ಕಷ್ಟದ ಪರಿಸ್ಥಿತಿಯ ಮೂಲಕ ಸಾಗುತ್ತಿದ್ದೇನೆ. ನನ್ನ ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಇದನ್ನು ನೋಡಿ, ಅರಿತಿದ್ದಾರೆ ಎಂದು ನನಗೆ ಖಾತ್ರಿಯಿದೆ. ನನ್ನ ಗೌಪ್ಯತೆ ಮತ್ತು ವೈಯಕ್ತಿಕ ಸ್ಪೇಸ್ ಗೆ ಸಂಬಂಧಿಸಿದ್ದಾಗಿದೆ.

ಇಂತಹ ಫೋಟೋಗಳನ್ನು ಪ್ರಸಾರ ಮಾಡದಂತೆ ನಾನು ನನ್ನ ಮಾಧ್ಯಮ ಸ್ನೇಹಿತರನ್ನು ವಿನಂತಿಸುತ್ತೇನೆ ಎಂದು ಈ ನಂಬಿಕೆಯೊಂದಿಗೆ, ನಿಮ್ಮ ಸ್ವಂತ ಪ್ರೀತಿ ಪಾತ್ರರಿಗೆ ನೀವು ಇದನ್ನು ಮಾಡುವುದಿಲ್ಲ,ನೀವು ನನಗೂ ಇದನ್ನು ಮಾಡುವುದಿಲ್ಲ ಎಂದು ನನಗೆ ಖಾತ್ರಿಯಿದೆ. ನ್ಯಾಯ ಮತ್ತು ಒಳ್ಳೆಯ ಪ್ರಜ್ಞೆಯು ಮೇಲುಗೈ ಸಾಧಿಸುತ್ತದೆ ಎಂದು ಆಶಿಸುತ್ತೇವೆ, ಧನ್ಯವಾದಗಳು ಎಂದು ಪೋಸ್ಟ್ ಮಾಡಿದ್ದಾರೆ.

Leave a Comment