ಆರಂಭದಿಂದಲೇ ಅಬ್ಬರಿಸಿದ್ದ ಪುಟ್ಟಕ್ಕನ ಮಕ್ಕಳು ಸೀರಿಯಲ್ ಗೆ ಇದೇನಾಯ್ತು?? ಪ್ರೇಕ್ಷಕರು ಇದನ್ನು ಊಹಿಸಿರಲೇ ಇಲ್ಲ!!

Entertainment Featured-Articles News

ಕನ್ನಡ ಕಿರುತೆರೆ ಎಂದ ಕೂಡಲೇ ತಟ್ಟನೆ ಪ್ರೇಕ್ಷಕರಿಗೆ ನೆನಪಾಗುವುದು ಅಲ್ಲಿ ಪ್ರಸಾರವಾಗುವ ಧಾರಾವಾಹಿಗಳು. ಕನ್ನಡದ ಖಾಸಗಿ ವಾಹಿನಿಗಳಲ್ಲಿ ಹತ್ತು ಹಲವು ಧಾರಾವಾಹಿಗಳು ಪ್ರಸಾರವಾಗುತ್ತಿವೆ. ವಿಶೇಷ ಏನೆಂದರೆ ಈ ಧಾರಾವಾಹಿಗಳು ಕಿರುತೆರೆಯಲ್ಲಿ ಮನರಂಜನೆಯ ಪ್ರಮುಖ ಮೂಲವಾಗಿದೆ. ಧಾರಾವಾಹಿಗಳ ಸಂಖ್ಯೆ ಹೆಚ್ಚಿದ್ದರೂ ಸಹಾ ಇವುಗಳಲ್ಲಿ ಕೆಲವು ಧಾರಾವಾಹಿಗಳು ಮಾತ್ರ ಅಪಾರವಾದ ಜನಮನ್ನಣೆಯನ್ನು ಪಡೆದುಕೊಳ್ಳುವಲ್ಲಿ ಯಶಸ್ಸನ್ನು ಪಡೆದುಕೊಂಡಿವೆ. ಆದ್ದರಿಂದಲೇ ಈ ಧಾರಾವಾಹಿಗಳು ಟಾಪ್ ಸೀರಿಯಲ್ ಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡು, ಯಶಸ್ಸಿನ ಮಿಂಚಿನ ಓಟವನ್ನು ನಡೆಸುತ್ತಿವೆ‌.

ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿ, ಹಿರಿಯ ನಟಿ ಉಮಾಶ್ರೀ ಹಾಗೂ ಮತ್ತೊಬ್ಬ ಪ್ರತಿಭಾವಂತ ನಟಿ ಮಂಜು ಭಾಷಿಣಿಯವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಕೆಲವೇ ತಿಂಗಳುಗಳ ಹಿಂದೆ ಕಿರುತೆರೆಯಲ್ಲಿ ತನ್ನ ಪ್ರಸಾರವನ್ನು ಆರಂಭಿಸಿದೆ. ಈ ಧಾರಾವಾಹಿ ಪ್ರಸಾರ ಆರಂಭಿಸಿದ ಮೊದಲನೇ ವಾರದಲ್ಲೇ ಪ್ರೇಕ್ಷಕರ ಅಪಾರವಾದ ಮೆಚ್ಚುಗೆಯನ್ನು ಪಡೆದುಕೊಂಡು, ಅತ್ಯುತ್ತಮ ರೇಟಿಂಗ್ ಪಡೆಯುವ ಮೂಲಕ ದಾಖಲೆಯನ್ನು ಮಾಡಿ, ನಂಬರ್ ಒನ್ ಸ್ಥಾನಕ್ಕೆ ಲಗ್ಗೆ ಹಾಕಿತ್ತು.

ಅದಾದ ನಂತರ ಪ್ರತಿವಾರ ಟಾಪ್ 5 ಧಾರಾವಾಹಿಗಳ ಪಟ್ಟಿ ಬಿಡುಗಡೆಯಾದಾಗ ಸದಾ ಮೊದಲನೇ ಸ್ಥಾನವನ್ನು ಅಲಂಕರಿಸುತ್ತಾ ಬಂದಿತ್ತು ಪುಟ್ಟಕ್ಕನ ಮಕ್ಕಳು ಧಾರಾವಾಹಿ. ಇದು ಈ ಧಾರಾವಾಹಿಯ ಯಶಸ್ಸು ಮತ್ತು ಜನಪ್ರಿಯತೆ ಯಾವ ಮಟ್ಟದಲ್ಲಿದೆ ಎನ್ನುವುದನ್ನು ತೋರಿಸುವುದಕ್ಕೆ ಸಾಕ್ಷಿಯಾಗಿತ್ತು. ಸೀರಿಯಲ್ ನ ಪ್ರತಿಯೊಬ್ಬ ಕಲಾವಿದರ ಪಾತ್ರ ಹಾಗೂ ನಟನೆ ಜನ ಮನ್ನಣೆಯನ್ನು ಪಡೆದುಕೊಂಡಿದೆ. ಹೀಗೆ ಜನಪ್ರಿಯತೆಯ ನಾಗಾಲೋಟವನ್ನು ಮಾಡುತ್ತಿದ್ದಾ ಧಾರಾವಾಹಿ ಇದ್ದಕ್ಕಿದ್ದಂತೆ ತನ್ನ ಸ್ಥಾನವನ್ನು ಕಳೆದುಕೊಂಡಿದೆ.

ಹೌದು, ಕಳೆದ ವಾರ ಬಿಡುಗಡೆಯಾದ ರೇಟಿಂಗ್ ಪಟ್ಟಿಯ ಪ್ರಕಾರ ಗಟ್ಟಿಮೇಳ ಧಾರಾವಾಹಿ ಮತ್ತೊಮ್ಮೆ ಮೊದಲ ಸ್ಥಾನವನ್ನು ಪಡೆದುಕೊಂಡ ಕಾರಣ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಎರಡನೇ ಸ್ಥಾನಕ್ಕೆ ಕುಸಿದಿದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿ ಬರುವುದಕ್ಕಿಂತ ಮೊದಲು ಗಟ್ಟಿಮೇಳ ಧಾರಾವಾಹಿ ಮೊದಲನೇ ಸ್ಥಾನದಲ್ಲಿತ್ತಾದರೂ, ಅನಂತರ ಅದು ಬದಲಾವಣೆ ಆಗಿತ್ತು. ಗಟ್ಟಿಮೇಳ ಎರಡನೇ ಸ್ಥಾನದಲ್ಲಿ ತನ್ನ ಪಯಣವನ್ನು ಮುಂದುವರೆಸಿತ್ತು. ಜೊತೆ ಜೊತೆಯಲಿ ಸೀರಿಯಲ್ ನಂಬರ್ ಒನ್ ಸ್ಥಾನದಿಂದ ಕೆಳಗೆ ಬಂದ ಮೇಲೆ ಗಟ್ಟಿಮೇಳವೇ ನಂಬರ್ ಒನ್ ಆಗಿತ್ತು.

ಇನ್ನು ಪುಟ್ಟಕ್ಕನ ಮಕ್ಕಳು ಬಂದ ಮೇಲೆ ಅದರ ಗಟ್ಟಿಮೇಳ ವನ್ನು ಹಿಂದಿಕ್ಕಿ ಮುಂದೆ ಹೋಗಿತ್ತು. ಆದರೆ ಗಟ್ಟಿಮೇಳ ಧಾರಾವಾಹಿಯಲ್ಲಿ ಇತ್ತೀಚಿಗೆ ಮೂಡಿಬರುತ್ತಿರುವ ಹೊಸ ತಿರುವುಗಳು ಪ್ರೇಕ್ಷಕರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ನಂಬರ್ ಒನ್ ಸ್ಥಾನವನ್ನು ಮತ್ತೆ ಪಡೆಯುವಲ್ಲಿ ಗಟ್ಟಿಮೇಳ ಯಶಸ್ಸನ್ನು ಪಡೆದಿದೆ. ಇನ್ನು ಈ ವಾರ ಕಳೆಯುತ್ತಲಿದ್ದು, ಹೊಸ ರೈಟಿಂಗ್ ಪಟ್ಟಿ ಹೊರ ಬಂದ ಮೇಲೆ ಪುಟ್ಟಕ್ಕನ ಮಕ್ಕಳು ಈ ವಾರ ಮತ್ತೊಮ್ಮೆ ಮೊದಲನೇ ಸ್ಥಾನವನ್ನು ಪಡೆಯಲಿದೆಯಾ? ಕಾದು ನೋಡಬೇಕಾಗಿದೆ.

Leave a Reply

Your email address will not be published.