ಆಫೀಸಿನಲ್ಲಿ ಫೋನ್ ಚಾರ್ಜ್ ಮಾಡುವುದು ವಿದ್ಯುತ್ ಕಳ್ಳತನ ಮಾಡಿದಂತೆ: ಉದ್ಯೋಗಿಗಳು ಶಾಕ್

Written by Soma Shekar

Published on:

---Join Our Channel---

ಸ್ಮಾರ್ಟ್ ಫೋನ್ ಪ್ರಸ್ತುತ ಮನುಷ್ಯನ ಜೀವನದಲ್ಲಿ ನಿತ್ಯ ಅಗತ್ಯದ ವಸ್ತುಗಳಲ್ಲಿ ಒಂದು ಎನ್ನುವ ಸ್ಥಾನವನ್ನು ಪಡೆದುಕೊಂಡಾಗಿದೆ. ಕಾಲ ಹೇಗಿದೆಯೆಂದರೆ ಯಾರ ಮನೆಗಾದರೂ ಹೋದರೆ ಕುಡಿಯಲು ನೀರು ಕೇಳುವುದಕ್ಕಿಂತ ಮೊದಲೇ ಅಲ್ಲಿ ನಮ್ಮ ಫೋನ್ ಚಾರ್ಜಿಂಗ್ ಹಾಕಲು ಅಗತ್ಯವಿರುವ ಚಾರ್ಜರ್ ಇದೆಯಾ ಎಂದು ಕೇಳುವವರು ಕೂಡಾ ಕಡಿಮೆಯೇನಿಲ್ಲ. ಏಕೆಂದರೆ ಸ್ಮಾರ್ಟ್ ಫೋನ್ ಇಲ್ಲದೇ ಸಮಯವನ್ನು ಕಳೆಯುವುದು ಸಾಧ್ಯವಿಲ್ಲ ಹಾಗೂ ಫೋನ್ ಆಫ್ ಆದರೆ ಜಗತ್ತು ಮುಳುಗಿತೇನೋ ಎನ್ನುವಂತೆ ಫೀಲ್ ಆಗುವವರ ಸಂಖ್ಯೆ ಕೂಡಾ ಹೆಚ್ಚಿದೆ.

ಇನ್ನು ಸ್ಮಾರ್ಟ್ ಫೋನ್ ನ ದೊಡ್ಡ ಶ ತೃ ಯಾರು ಎನ್ನುವುದಾದರೆ ಚಾರ್ಜಿಂಗ್. ಎಂತಹ ಉತ್ತಮ ಸ್ಮಾರ್ಟ್ ಫೋನ್ ಆದರೂ ಸರಿ, ಇಂಟರ್ನೆಟ್ ಬಳಕೆ ಹಾಗೂ ಹಾಡುಗಳನ್ನು ಕೇಳಲು, ವೀಡಿಯೋ ನೋಡಲು ಬಳಸಿದಾಗ ಬೇಗ ಬ್ಯಾಟರಿ ಖಾಲಿಯಾಗುತ್ತದೆ. ಆದ್ದರಿಂದಲೇ ದಿನದಲ್ಲಿ ಎರಡು ಬಾರಿಯಾದರೂ ಚಾರ್ಜ್ ಹಾಕಲೇಬೇಕು. ಇನ್ನು ದಿನದಲ್ಲಿ ಎಂಟರಿಂದ ಹತ್ತು ಗಂಟೆಗಳ ಕಾಲ ಕಳೆಯುವ ಆಫೀಸ್ ನಲ್ಲಿ ಚಾರ್ಜರ್ ಇಲ್ಲದೇ ಇದ್ರೆ ಹೇಗೆ?? ಹೇಳಿ.

ಇತ್ತೀಚಿನ ದಿನಗಳಲ್ಲಿ ಕೆಲಸಗಳಿಗೆ ಹೋಗುವವರು ಆಫೀಸ್ ಗೆ ಚಾರ್ಜರ್ ಕೂಡಾ ತೆಗೆದು ಕೊಂಡು ಹೋಗಿ ಅಲ್ಲಿ ಚಾರ್ಜಿಂಗ್ ಹಾಕುವುದು ಸಾಮಾನ್ಯ. ಆದರೆ ಕಛೇರಿಯೊಂದರಲ್ಲಿ ಹಾಕಿದ ನೋಟೀಸ್ ಕಂಡು ಅಲ್ಲಿನ ಉದ್ಯೋಗಿಗಳು ಕಂಗಲಾಗಿದ್ದಾರೆ. ಏಕೆಂದರೆ ನೋಟೀಸ್ ನಲ್ಲಿ ಆಫೀಸಿನಲ್ಲಿ ಮೊಬೈಲ್ ಅಥವಾ ಇನ್ನಾವುದೇ ಪರಿಕರಗಳನ್ನು ಚಾರ್ಜಿಂಗ್ ಮಾಡುವುದು ಖಂಡಿತ ವಿದ್ಯುತ್ ಕಳ್ಳತನವೇ ಆಗಿದೆ. ಒಂದು ವೇಳೆ ಚಾರ್ಜಿಂಗ್ ಮಾಡಿದರೆ ಅವರಿಗೆ ಸಂಬಳ ಕತ್ತರಿಸಲಾಗುವುದು ಹಾಗೂ ಮೊಬೈಲ್‌ ಸ್ವಿಚ್ ಆಫ್ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.

ವೈರಲ್ ಆಗಿರುವ ಈ ನೋಟೀಸ್ ಎಲ್ಲಿನದ್ದು, ಯಾವ ಕಛೇರಿಯದ್ದು ಎನ್ನುವ ವಿಷಯ ಸ್ಪಷ್ಟವಾಗಿ ತಿಳಿದು ಬಂದಿಲ್ಲವಾದರೂ ಸೋಶಿಯಲ್ ಮೀಡಿಯಾಗಳಲ್ಲಿ ಮಾತ್ರ ಈ ಫೋಟೋ ಎಲ್ಲರ ಗಮನ ಸೆಳೆಯುತ್ತಾ ಸಾಗಿದ್ದು, ಕೆಲವರು ಹೌದು ಇದು ಸರಿಯಾಗಿದೆ ಎಂದರೆ ಇನ್ನೂ ಕೆಲವರು ಇದು ಸರಿಯಲ್ಲ ಎನ್ನುತ್ತಾ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಕೆಲಸದ ವೇಳೆ ಫೋನ್ ಏಕೆ?? ಎಂದರೆ ಇನ್ನೂ ಕೆಲವರು ತುರ್ತು ಅಗತ್ಯಗಳಿಗೆ ಫೋನ್ ಬೇಕು ಎಂದಿದ್ದಾರೆ.

Leave a Comment