ಆದಿಪುರುಷ್: ನಡೆದೇ ಹೋಯ್ತು ದೊಡ್ಡ ಗಲಾಟೆ! ನಿರ್ದೇಶಕನ ಮೇಲೆ ಪ್ರಭಾಸ್ ಆಕ್ರೋಶ? ವೈರಲ್ ವೀಡಿಯೋ

Entertainment Featured-Articles Movies News Viral Video

ಬಾಹುಬಲಿ ಸಿನಿಮಾದ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ನಟ ಪ್ರಭಾಸ್ ಅವರಿಗೆ ಹಿಂದೆಂದಿಗಿಂತಲೂ ಹೆಚ್ಚು ಜನಪ್ರಿಯತೆ ದಕ್ಕಿದೆ. ಆದರೆ ಬಾಹುಬಲಿ ನಂತರ ಅವರು ನಟಿಸಿದ ಸಿನಿಮಾಗಳು ಮಾತ್ರ ನಿರೀಕ್ಷಿತ ಮಟ್ಟದ ಯಶಸ್ಸನ್ನು ಪಡೆಯುವಲ್ಲಿ ವಿಫಲವಾಗಿದೆ. ಆದ್ದರಿಂದಲೇ ನಟ ಪ್ರಭಾಸ್ ಅವರು ಶ್ರೀರಾಮನಾಗಿ ಕಾಣಿಸಿಕೊಳ್ಳುತ್ತಿರುವ ಆದಿಪುರುಷ್ ಸಿನಿಮಾದ ಮೇಲೆ ಅಭಿಮಾನಿಗಳು ಹಾಗೂ ಸಿನಿ ಪ್ರೇಮಿಗಳಿಗೆ ದೊಡ್ಡ ಮಟ್ಟದಲ್ಲಿ ನಿರೀಕ್ಷೆಗಳಿದ್ದವು. ಸಿನಿಮಾದ ಕುರಿತಾಗಿ ತಿಳಿದುಕೊಳ್ಳಲು ಸಾಕಷ್ಟು ಆಸಕ್ತಿಯನ್ನು ತೋರಿಸುತ್ತಿದ್ದರು. ಕೆಲವೇ ದಿನಗಳ ಹಿಂದೆ ಆದಿಪುರುಷ್ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಆದರೆ ಟೀಸರ್ ನೋಡಿದ ನಂತರ ನಟ ಪ್ರಭಾಸ್ ಅವರ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ, ಟೀಸರ್ ಅವರಿಗೆ ಭ್ರಮನಿರಸನ ಉಂಟುಮಾಡಿದೆ.

ಭಾನುವಾರ ಅಯೋಧ್ಯೆಯಲ್ಲಿ ಅದ್ದೂರಿ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಿ ಸಿನಿಮಾ ಟೀಸರ್ ಬಿಡುಗಡೆ ಮಾಡಲಾಗಿದೆ. ರಾಮಾಯಣ ಮಹಾಕಾವ್ಯದ ಕಥೆಯನ್ನು ಆಧರಿಸಿ ಮೋಷನ್ ಕ್ಯಾಪ್ಚರ್ ಅನಿಮೇಶನ್ ಸಿನಿಮಾವನ್ನು ಪ್ರೇಕ್ಷಕರ ಮುಂದೆ ಇಡುವ ಪ್ರಯತ್ನವನ್ನು ಮಾಡಿದೆ ಚಿತ್ರತಂಡ. ಆದರೆ ಟೀಸರ್ ನೋಡಿದ ನಂತರ ಪ್ರಭಾಸ್ ಅಭಿಮಾನಿಗಳಿಗೆ ನಿರ್ದೇಶಕ ಓಂ ರಾವತ್ ಮೇಲೆ ಅಸಮಾಧಾನ ಉಂಟಾಗಿದೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾದ ಟೀಸರ್ ಕುರಿತಾಗಿ ಸಾಕಷ್ಟು ಟ್ರೋಲ್ ಮಾಡಲಾಗುತ್ತಿದೆ. ಅನೇಕರು ಇದು ರಾಮಾಯಣವಲ್ಲ ಬದಲಾಗಿ ಕಾರ್ಟೂನ್ ಸಿನಿಮಾ ಎಂದು ವ್ಯಂಗ್ಯವನ್ನು ಮಾಡುತ್ತಿದ್ದಾರೆ.

ಈಗ ಇವೆಲ್ಲವುಗಳ ಬೆನ್ನಲ್ಲೇ ಹೊಸ ಸುದ್ದಿಯೊಂದು ಹೊರ ಬಂದಿದೆ. ಟೀಸರ್ ಕಾರ್ಯಕ್ರಮ ಮುಗಿದ ನಂತರ ಚಿತ್ರತಂಡ ಉಳಿದುಕೊಂಡಿದ್ದ ಹೋಟೆಲ್ ನಲ್ಲಿ ದೊಡ್ಡ ಗಲಾಟೆಯೇ ನಡೆದಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಸ್ವತಃ ನಟ ಪ್ರಭಾಸ್ ಅವರೇ ಆದಿಪುರಷ್ ಸಿನಿಮಾದ ನಿರ್ಮಾಣದ ಗುಣಮಟ್ಟದ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಾರೆ ಸಿಟ್ಟಿನಿಂದ ಮಾತನಾಡಿದ್ದಾರೆ ಎನ್ನುವ ಸುದ್ದಿಯೊಂದು ಕೇಳಿಬರುತ್ತಿದೆ. ಅಲ್ಲದೇ ನಟ ನಿರ್ದೇಶಕರ ಜೊತೆ ಸಹಾ ಆ ಕ್ರೋ ಶ ದಿಂದ ಮಾತನಾಡಿದ್ದಾರೆ ಎನ್ನಲಾಗಿದೆ.

ಟೀಸರ್ ಬಿಡುಗಡೆ ಕಾರ್ಯಕ್ರಮದ ನಂತರ ನಡೆದಿದ್ದೇನು? ಎನ್ನುವುದು ಸ್ಪಷ್ಟವಾಗಿ ಇನ್ಮು ಹೊರ ಬಂದಿಲ್ಲವಾದರೂ, ಚಿತ್ರತಂಡ ಉಳಿದುಕೊಂಡಿದ್ದ ಹೋಟೆಲ್ ನಲ್ಲಿ ಪ್ರಭಾಸ್ ಅವರು ತಮ್ಮ ಕೋಣೆಯ ಬಳಿ ಸಿಟ್ಟಿನಿಂದ ಮಾತನಾಡಿರುವುದು ಮಾತ್ರ ನಿಜ ಎನ್ನಲಾಗಿದೆ. ನಟ ತಮ್ಮ ಕೈ ಬೆರಳನ್ನು ನಿರ್ದೇಶಕನ ಕಡೆಗೆ ತೋರಿಸುತ್ತಾ, ತನ್ನ ಕೋಣೆಗೆ ಬರುವಂತೆ ಸಿಟ್ಟಿನಿಂದ ಕರೆದಿದ್ದಾರೆ ಎಂದು ಹೇಳಲಾಗಿದೆ. ಈ ಸುದ್ದಿ ಹೊರ ಬಂದ ಮೇಲೆ ನೆಟ್ಟಿಗರು ಮತ್ತೊಮ್ಮೆ ಕಾಮೆಂಟ್ಗಳನ್ನು ಮಾಡಿ ಅಸಮಾಧಾನ ಹೊರ ಹಾಕಿರುವುದು ಮಾತ್ರವೇ ಅಲ್ಲದೇ ಇದರ ಬಗ್ಗೆಯೂ ಸಹ ಟ್ರೋಲ್ ಮಾಡಲಾಗುತ್ತಿದೆ.

Leave a Reply

Your email address will not be published.