ಆತ ನನ್ನೊಡನೆ ಲಿಮಿಟ್ ಕ್ರಾಸ್ ಮಾಡಿದ್ದ, ಶೋ ನಲ್ಲೇ ಶಾಕಿಂಗ್ ಆರೋಪ ಮಾಡಿದ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ
ಅ ಶ್ಲೀ ಲ ಸಿನಿಮಾಗಳ ನಿರ್ಮಾಣ ಮತ್ತು ಹಂಚಿಕೆ ವಿಚಾರದಲ್ಲಿ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಬಂ ಧ ನಕ್ಕೆ ಒಳಗಾಗಿ ದಿನಗಳೇ ಕಳೆದಿದೆ. ವಿಚಾರಣೆ ಹಾಗೂ ತನಿಖೆ ಮುಂದುವರೆದಂತೆ ದಿನ ದಿನಕ್ಕೂ ಹೊಸ ಹೊಸ ವಿಷಯಗಳು ಹೊರಗೆ ಬರುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಕೆಲವು ನಟಿಯರ ಹೆಸರು ಈ ಪ್ರಕರಣದಲ್ಲಿ ತಳಕು ಹಾಕಿಕೊಂಡಿದೆ.. ಒಂದೆಡೆ ಪತಿ ಜೈ ಲು ಸೇರಿದ ಮೇಲೆ ಕೋರ್ಟ್ ಕೂಡಾ ಜಾಮೀನು ನಿರಾಕರಣೆ ಮಾಡಿರುವುದರಿಂದ ನಟಿ ಶಿಲ್ಪಾ ಶೆಟ್ಟಿ ಕೂಡಾ ಮುಜುಗರ ಪಡುವಂತಾಗಿದೆ. ಶಿಲ್ಪಾ ಶೆಟ್ಟಿ ಈಗಾಗಲೇ ಕೆಲವು ಶೋ ಗಳಿಂದ ಹೊರಗೆ ಸಹಾ ಬಂದಿದ್ದಾರೆ. ಆದರೆ ಇವೆಲ್ಲವುಗಳ ನಡುವೆಯೇ ನಟಿ ಶಿಲ್ಪಾ ಶೆಟ್ಟಿ ಅವರ ಸಹೋದರಿ ಈ ಬಾರಿ ಮೊಟ್ಟ ಮೊದಲ ಬಾರಿಗೆ ಓಟಿಟಿ ನಲ್ಲಿ ಆರಂಭವಾಗಿರುವ ಬಿಗ್ ಬಾಸ್ ಶೋ ಗೆ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯನ್ನು ಪ್ರವೇಶ ಮಾಡಿದ್ದಾರೆ. ಶಮಿತಾ ಓಟಿಟಿ ಪ್ಲಾಟ್ ಫಾರಂ ನ ಬಿಗ್ ಬಾಸ್ ಗೆ ಹೆಜ್ಜೆ ಇಟ್ಟಿರುವ ಕುರಿತಾಗಿ ಹೊರಗೆ ಪರ ಹಾಗೂ ವಿರೋಧ ಪ್ರತಿಕ್ರಿಯೆಗಳು ಹರಿದು ಬರುತ್ತಿವೆ..
ಓಟಿಟಿ ಯಲ್ಲಿ ಕಳೆದ ವಾರದಷ್ಟೇ ಪ್ರಸಾರ ಆರಂಭಿಸಿರುವ ಬಿಗ್ ಬಾಸ್ ಸಾಕಷ್ಟು ವಿ ವಾ ದಾತ್ಮಕ ಬಿಗ್ ಬಾಸ್ ಎನಿಸಿದೆ. ಈ ಕಾರ್ಯಕ್ರಮವನ್ನು ಕರಣ್ ಜೋಹರ್ ನಿರೂಪಣೆ ಮಾಡುತ್ತಿರುವುದು ಮತ್ತೊಂದು ವಿಶೇಷವಾಗಿದೆ. ಅಲ್ಲದೇ ಇದರಲ್ಲಿ ಬಹಳಷ್ಟು ಜನ ಸೆಲೆಬ್ರಿಟಿಗಳು ಸ್ಪರ್ಧಿಗಳಾಗಿ ಮನೆಯನ್ನು ಪ್ರವೇಶ ಮಾಡಿದ್ದಾರೆ. ಅದರಲ್ಲೂ ಹೊರಗೆ ಕೆಲವು ಸೂಕ್ಷ್ಮ ವಿಚಾರಗಳಿಂದ ವಿ ವಾ ದಗಳನ್ನೇ ಎಬ್ಬಿಸಿದ್ದರು ಓಟಿಟಿ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗೆ ಬಿಗ್ ಬಾಸ್ ನ ಈ ಓಟಿಟಿ ಸರಣಿಯ ಸ್ಪರ್ಧಿಗಳಲ್ಲಿ ಜನಪ್ರಿಯ ನೃತ್ಯ ನಿರ್ದೇಶಕ ನಿಶಾಂತ್ ಭಟ್ ಕೂಡಾ ಇದ್ದಾರೆ.
ಮನೆಯಲ್ಲಿ ನಟಿ ಶಮಿತಾ ಶೆಟ್ಟಿ ನಿಶಾಂತ್ ಭಟ್ ಅವರಿಂದ ಆದಷ್ಟು ಅಂತರವನ್ನು ಕಾಯ್ದು ಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣವೂ ಇದ್ದು ಸ್ವತಃ ಶಮಿತಾ ಶೆಟ್ಟಿ ಅವರೇ ತಮ್ಮ ಸಹ ಸ್ಪರ್ಧಿಯಾಗಿರುವ ದಿವ್ಯ ಅಗರ್ವಾಲ್ ಬಳಿ ಆ ಕಾರಣ ಏನು ಎನ್ನುವ ವಿಷಯವನ್ನು ಹಂಚಿಕೊಂಡಿದ್ದಾರೆ. ಒಂದು ಶೋ ನಲ್ಲಿ ನಾವಿಬ್ಬರೂ ಜೊತೆಯಾಗಿ ಕೆಲಸ ಮಾಡಿದ್ದೆವು. ಆ ವೇಳೆಯಲ್ಲಿ ನಿಶಾಂತ್ ಭಟ್ ನನ್ನೊಂದಿಗೆ ನಿಯಂತ್ರಣ ಕ್ರಾಸ್ ಮಾಡಿದ್ದ, ಅದರಿಂದ ನನಗೆ ಬಹಳ ಕಿರಿಕಿರಿಯಾಗಿತ್ತು. ಆದ್ದರಿಂದಲೇ ನಾನು ಅವನಿಂದ ಅಂತರವನ್ನು ಕಾಯ್ದುಕೊಳ್ಳುವ ನಿರ್ಧಾರವನ್ನು ಮಾಡಿದೆ ಎಂದು ಶಮಿತಾ ತನ್ನ ಮತ್ತು ನಿಶಾಂತ್ ಭಟ್ ನಡುವಿನ ಸಮಸ್ಯೆಗೆ ಕಾರಣ ತಿಳಿಸಿದ್ದಾರೆ.
ಅಲ್ಲದೇ ಶಮಿತಾ ಆ ಘಟನೆ ಯಾವುದು ಎಂದು ಹೇಳುವುದಕ್ಕೆ ತನಗೆ ಇಷ್ಟವಿಲ್ಲ ಎಂದಿದ್ದಾರೆ. ಆದರೆ ಆತ ಅಂದು ಮಿತಿ ಮೀರಿ ವರ್ತಿಸಿದ್ದ. ಅದು ನನಗೆ ಇಷ್ಟವಾಗಲಿಲ್ಲ. ಅಂದಿನಿಂದ ನಾನು ಆತನ ಜೊತೆ ಮಾತನಾಡುವುದಿಲ್ಲ. ಅದನ್ನು ನೆನಪಿಸಿಕೊಳ್ಳುವುದು ನನಗೆ ಇಷ್ಟವಿಲ್ಲ ಎಂದಿದ್ದಾರೆ ಶಮಿತಾ ಶೆಟ್ಟಿ. ಇನ್ನು ಶಮಿತಾ ಹೇಳಿದ ಈ ಮಾತು ಸೋಶಿಯಲ್ ಮೀಡಿಯಾಗಳಲ್ಲಿ ಒಂದು ಚರ್ಚೆಯನ್ನು ಹುಟ್ಟು ಹಾಕಿದೆ. ಶಮಿತಾ ಮಾಡಿರುವ ಆರೋಪದ ಬಗ್ಗೆ ತಿಳಿದರೆ ನಿಶಾಂತ್ ಭಟ್ ಅವರ ಪ್ರತಿಕ್ರಿಯೆ ಏನಾಗಲಿದೆ ಎನ್ನುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.