ಆಗ ತಾತ್ಸಾರ ಮಾಡಿ, ಈಗ ತೇಪೆ ಹಾಕೋ ಪ್ರಯತ್ನ ಯಾಕೆ?? ನಟಿ ರಶ್ಮಿಕಾಗೆ ನೆಟ್ಟಿಗರ ಪ್ರಶ್ನೆ

0 5

ಸಿನಿಮಾಗಳ ವಿಚಾರ ಬಂದಾಗ ಸದ್ಯಕ್ಕೆ ಸಿಕ್ಕಾಪಟ್ಟೆ ಟ್ರೋಲಾಗುತ್ತಿರುವ ಅದರಲ್ಲೂ ವಿಶೇಷವಾಗಿ ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿ, ಕರ್ನಾಟಕದಲ್ಲೇ ಅತಿ ಹೆಚ್ಚಾಗಿ ಟ್ರೋಲ್ ಆಗುತ್ತಿರುವ ನಟಿ ಅಂದರೆ ಅನುಮಾನವೇ ಇಲ್ಲದೇ ಅದು ರಶ್ಮಿಕಾ ಮಂದಣ್ಣ ಎಂದು ನಾವು ಹೇಳಬಹುದು. ಕನ್ನಡ ಸರಿಯಾಗಿ ಮಾತನಾಡದೇ, ಕನ್ನಡದಲ್ಲಿ ಡಬ್ ಮಾಡೋದಿಕ್ಕೆ ಟೈಮ್ ಇಲ್ಲ ಎಂದ ವಿಚಾರದಲ್ಲಿ ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ರಶ್ಮಿಕಾ ಟ್ರೋಲ್ ಆಗಿದ್ದಾರೆ. ಇದೆಲ್ಲವುಗಳಿಗಿಂತಲೂ ಹೆಚ್ಚು ಕನ್ನಡಿಗರ ಕೋ ಪ ಕ್ಕೆ ಕಾರಣವಾಗಿದ್ದು ರಶ್ಮಿಕಾ ಅಪ್ಪು ಅವರ ನಿಧನದ ವೇಳೆ ತೋರಿದ ವರ್ತನೆ.

ಹೌದು, ಪುನೀತ್ ರಾಜ್‍ಕುಮಾರ್ ಅವರ ಅಗಲಿಕೆ ಇಡೀ ಕರ್ನಾಟಕದ ಜನತೆಗೆ ನೋವನ್ನು ನೀಡಿದಂತಹ ಘಟನೆ, ಪುನೀತ್ ಅವರು ಎಲ್ಲರನ್ನು ಅಗಲಿ ಎರಡು ತಿಂಗಳು ಕಳೆದರೂ ಸಹಾ ಜನರು ಆ ನೋವಿನಿಂದ ಹೊರ ಬರುವುದು ಸಾಧ್ಯವಾಗಿಲ್ಲ, ಸೋಶಿಯಲ್ ಮೀಡಿಯಾಗಳಲ್ಲಿ ಅನೇಕರು ಅಪ್ಪು ಅವರನ್ನು ಸ್ಮರಿಸುತ್ತಲೇ ಇದ್ದಾರೆ. ಇನ್ನು ಅವರ ನಿಧನರಾದಾಗ ಕನ್ನಡ ಮಾತ್ರವೇ ಅಲ್ಲದೇ ಅನ್ಯ ಭಾಷೆಗಳ ಕಲಾವಿದರು ಕೂಡಾ ಅಪ್ಪು ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಿದರು. ಕನ್ನಡದ ಅನೇಕ ಕಲಾವಿದರು ಅವರ ಅಂತಿಮ ದರ್ಶನ ಪಡೆದರು.

ಸಾಕಷ್ಟು ಬಾರಿ ಟೀಕೆಗಳಿಗೆ ಒಳಗಾಗಿದ್ದ ನಟಿ ರಮ್ಯ ಕೂಡಾ ಅಪ್ಪು ಅವರ ಅಂತಿಮ ದರ್ಶನ ಮಾಡಿದ್ದರು, ನಟಿ ರಾಧಿಕಾ ಪಂಡಿತ್ ಕೂಡಾ ಮಾದ್ಯಮಗಳ ಮುಂದೆ ಮಾತನಾಡದೇ ಅಂತಿಮ ದರ್ಶನ ಪಡೆದು ಮೌನವಾಗಿ ಹೊರಟು ಹೋಗಿದ್ದರು. ಆದರೆ ಕನ್ನಡದಿಂದಲೇ ಸ್ಟಾರ್ ಆಗಿ, ಅಪ್ಪು ಅವರ ಜೊತೆ ಸಿನಿಮಾದಲ್ಲಿ ನಟಿಸಿದ್ದ ರಶ್ಮಿಕಾ ಮಾತ್ರ ಪುನೀತ್ ಅವರಿಗೆ ಕೊನೆಯದಾಗಿ ಒಂದು ಗೌರವ ನೀಡುವ, ಶ್ರದ್ಧಾಂಜಲಿ ಅರ್ಪಿಸುವ ಅಥವಾ ಅವರ ಬಗ್ಗೆ ಒಂದು ಮಾತನಾಡುವ ಗೋಜಿಗೆ ಹೋಗಲೇ ಇಲ್ಲ.

ಇದಾದ ನಂತರ ಕನ್ನಡಿಗರು ಸೋಶಿಯಲ್ ಮೀಡಿಯಾಗಳಲ್ಲಿ ನಟಿಯನ್ನು ತರಾಟೆಗೆ ತೆಗೆದುಕೊಂಡರು, ಟ್ರೋಲ್ ಮಾಡಿದ್ರು ಆದರೂ ರಶ್ಮಿಕಾ ಗೆ ಮಾತ್ರ ಅಗಲಿದ ನಟನಿಗೆ ಒಂದು ಸಣ್ಣ ಶ್ರದ್ಧಾಂಜಲಿ ನೀಡೋಕೆ, ಸಂತಾಪ ಸೂಚಿಸೋಕೆ ಕೂಡಾ ಸಮಯ ಸಿಕ್ಕಿರಲಿಲ್ಲ. ಆದ್ರೆ ಇವೆಲ್ಲವುಗಳ ನಡುವೆ ಇದ್ದಕ್ಕಿದ್ದ ಹಾಗೆ ರಶ್ಮಿಕಾ ಅಂಜನಿ ಪುತ್ರ ಸಿನಿಮಾದಲ್ಲಿ ಅಪ್ಪು ಅವರ ಜೊತೆಗಿರುವ ಒಂದು ಫೋಟೋವನ್ನು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡ್ಕೊಂಡು ಹಾರ್ಟ್ ಸಿಂಬಲ್ ಹಾಕಿದ್ದಾರೆ. ಈಗ ಅಪ್ಪು ಅವರ ನೆನಪಾಗಿದ್ದು ವಿಪರ್ಯಾಸ.

ನಟಿ ರಶ್ಮಿಕಾ ಅವರ ಮನಸ್ಥಿತಿಯನ್ನು ಯಾರೂ ಅರ್ಥ ಮಾಡಿಕೊಳ್ಳೋಕೆ ಸಾಧ್ಯವೇ ಇಲ್ಲ ಅನ್ನೋತರ ಇದೆ ನಟಿಯ ವರ್ತನೆ. ಎಷ್ಟೇ ಟ್ರೋಲ್ ಆದ್ರೂ ತಾನು ಮಾತ್ರ ತಲೆ ಕೆಡಿಸಿಕೊಳ್ಳದೇ ತನ್ನ ಕೆಲಸದ ಕಡೆ ಗಮನ ನೀಡೋ ಈ ನಟಿ ಸದ್ಯಕಂತೂ ಸಿಕ್ಕಾಪಟ್ಟೆ ಬ್ಯುಸಿ ಅನ್ನೋದು ನಿಜ. ದಕ್ಷಿಣ ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ತೊಡಗಿಕೊಂಡಿರುವ ಈ ನಟಿ ಟ್ರೋಲ್ ಆಗೋದ್ರಲ್ಲೂ ಎಲ್ಲರಿಗಿಂತ ಮುಂದೆ ಇದ್ದಾರೆ.

Leave A Reply

Your email address will not be published.