ಆಗ ಅನಿವಾರ್ಯವಾಗಿತ್ತು ಎಂದು ತಾನು ಬುರ್ಖಾ‌ ಧರಿಸುತ್ತಿದ್ದ ವಿಷಯ ಒಪ್ಪಿಕೊಂಡ ದೀಪಿಕಾ ಪಡುಕೋಣೆ

Written by Soma Shekar

Published on:

---Join Our Channel---

ಬಾಲಿವುಡ್ ನಲ್ಲಿ ದೊಡ್ಡ ಜನಪ್ರಿಯತೆ ಪಡೆದಿರುವ ನಟಿ ದೀಪಿಕಾ ಪಡುಕೋಣೆ. ವಿಶ್ವ ಪ್ರಸಿದ್ಧ ಬ್ರಾಂಡ್ ಗಳ ರಾಯಭಾರಿ ಹಾಗೂ ಹಾಲಿವುಡ್ ನಲ್ಲಿ ಸಹಾ ಸಿನಿಮಾ ಮಾಡಿರುವ ನಟಿಯಾಗಿರುವ ದೀಪಿಕಾ ಪಡುಕೋಣೆ ಬಾಲಿವುಡ್ ಸ್ಟಾರ್ ನಟಿ ಎನ್ನುವದರಲ್ಲಿ ಅನುಮಾನವೇ ಇಲ್ಲ. ಕನ್ನಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಅಡಿಯಿಟ್ಟು, ಅನಂತರ ಶಾರೂಖ್ ಖಾನ್ ಜೊತೆಯಲ್ಲಿ ಓಂ‌ ಶಾಂತಿ ಓಂ ಸಿನಿಮಾದ ಮೂಲಕ ಬಾಲಿವುಡ್ ಗೆ ಭರ್ಜರಿ ಎಂಟ್ರಿ ನೀಡಿದ ದೀಪಿಕಾ ಸ್ಟಾರ್ ನಟಿಯಾಗಿ ಬೆಳೆದಿದ್ದು ಈಗ ಹಳೆಯ ವಿಷಯವಾದರೂ, ಇಂದು ಬಾಲಿವುಡ್ ನಲ್ಲಿ ಬಹು ಬೇಡಿಕೆಯ ನಟಿಯಾಗಿದ್ದಾರೆ ದೀಪಿಕಾ.

ಇಂತಹ ದೊಡ್ಡ ಸ್ಟಾರ್ ನಟಿಯು ತಾನು ಮದುವೆಗಿಂತ ಮೊದಲು ಬುರ್ಖಾ ಹಾಕಿಕೊಂಡು ಹೊರಗೆ ಸುತ್ತಾಡಬೇಕಾಗಿ ಬಂದ ಅನಿವಾರ್ಯತೆಯನ್ನು ಇದೇ ಮೊದಲ ಬಾರಿಗೆ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ. ಹಾಗಾದ್ರೆ ದೀಪಿಕಾ ಬುರ್ಖಾ ಧರಿಸಿದ್ದಾದ್ರೂ ಯಾಕೆ ಎನ್ನೋ ಕುತೂಹಲಕಾರಿ ವಿಷಯ ತಿಳಿಯೋಣ ಬನ್ನಿ. ನಟಿ ದೀಪಿಕಾ ರಣವೀರ್ ಸಿಂಗ್ ಜೊತೆ ಪ್ರೇಮದಲ್ಲಿ ಬಿದ್ದು, ಅನಂತರ ಅವರ ಮದುವೆ ವಿಷಯ ಹೊರ ಬಂದ ಮೇಲೆ ಅದು ಮಾದ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು.

ಇದಾದ ನಂತರ ಮಾದ್ಯಮಗಳ ಕಣ್ಣು ದೀಪಿಕಾ ಮೇಲೆ‌ ಮೊದಲಿಗಿಂತ ಹೆಚ್ಚಾಯಿತು. ದೀಪಿಕಾ ಹೊರಗೆ ಕಾಣಿಸಿಕೊಂಡಾಗಲೆಲ್ಲಾ ಮದುವೆ ವಿಚಾರಗಳನ್ನು ಕೇಳಲಾರಂಭಿಸಿದರು. ಅಲ್ಲದೇ ದೀಪಿಕಾ ತಮ್ಮ ಮದುವೆಗಾಗಿ ಎಲ್ಲಿ ಆಭರಣ, ಡ್ರೆಸ್ ಇತ್ಯಾದಿಗಳನ್ನು ಶಾಪಿಂಗ್ ಮಾಡ್ತಾರೆ ಅಂತ ತಿಳಿಯೋದಿಕ್ಕೆ ಮಾದ್ಯಮಗಳು ಮುಂದಾಗಿದ್ವು.

ಈ ಹಿನ್ನೆಲೆಯಲ್ಲಿ ದೀಪಿಕಾಗೆ ಹೊರಗೆ ಶಾಪಿಂಗ್ ಮಾಡೋದು ಹೇಗೆ ಅನ್ನೋದೇ ಒಂದು ದೊಡ್ಡ ಚಿಂತೆಯಾಗಿ ಕಾಡಿತ್ತು. ಅದೂ ಅಲ್ಲದೇ ಮದುವೆ ವಿಚಾರದಲ್ಲಿ ದೀಪಿಕಾ ಮತ್ತೆ ರಣವೀರ್ ಬಹಳ ಪ್ಲಾನ್ ಮಾಡಿದ್ರಿಂದ ಹೊರಗೆ ಸಿಕ್ಕಾಪಟ್ಟೆ ಅಂಗಡಿಗಳಿಗೆ ಹೋಗಲೇ ಬೇಕಿತ್ತು. ಆದರೆ ಹೇಗೆ?? ಅಂತಾ ದೀಪಿಕಾ ಗೆ ಯೋಚನೆ ಕಾಡೋವಾಗ ದೀಪಿಕಾ ಅವರ ಕಾಸ್ಟ್ಯೂಮ್ ಡಿಸೈನರ್ ಸಭ್ಯಸಾಚಿ ದೀಪಿಕಾ ಗೆ ಬುರ್ಖಾ ಹಾಕ್ಕೊಂಡು ಶಾಪಿಂಗ್ ಮಾಡೋ ಐಡಿಯಾ ಕೊಟ್ಟರು.

ದೀಪಿಕಾಗೆ ಆ ಐಡಿಯಾ ಬೆಸ್ಟ್ ಅನಿಸಿತ್ತು. ಹಾಗೆ ತಾನು ಬುರ್ಖಾ ಹಾಕ್ಕೊಂಡು ಮೀಡಿಯಾ ಗಳ ಕಣ್ಣಿಗೆ ಬೀಳದೇ ಮುಂಬೈನ ಪ್ರಸಿದ್ಧ ಅಂಗಡಿಗಳಿಗೆ ಹೋಗೋದಿಕ್ಕೆ, ವೆಡ್ಡಿಂಗ್ ಕಲೆಕ್ಷನ್ ಇರುವ ಸ್ಥಳಗಳಲ್ಲಿ ಬಹಳ ಆರಾಮಾಗಿ ಶಾಪಿಂಗ್ ಮಾಡೋದಕ್ಕೆ ಸಾಧ್ಯ ಆಯಿತು ಎಂದು ದೀಪಿಕಾ ತಮ್ಮ‌ ಮದುವೆ ಟೈಮ್ ನಲ್ಲಿ ಹೇಗೆ ಬುರ್ಖಾ ತನ್ನ ನೆರವಿಗೆ ಬಂತು ಅನ್ನೋದನ್ನು ಹೇಳಿದ್ದಾರೆ.

Leave a Comment