ಆಕೆ ಬಳಿ ಡ್ರ ಗ್ಸ್ ಸಿಕ್ಕರೂ ಒಂದೇ ದಿನಕ್ಕೆ ಬಿಟ್ಟ NCB, ಆರ್ಯನ್ ನನ್ನು ಏಕೆ ಬಿಡುತ್ತಿಲ್ಲ?? ಜಾಮೀನು ಏಕೆ ನಿರಾಕರಣೆ ಮಾಡುತ್ತಿದೆ ಕೋರ್ಟ್

0
200

ಡ್ರ ಗ್ಸ್ ಪ್ರಕರಣದಲ್ಲಿ ಸಿಲುಕಿ, ಎನ್ ಸಿ ಬಿ ಯಿಂದ ನ್ಯಾಯಾಂಗ ಬಂ ಧನದಲ್ಲಿರುವ ಬಾಲಿವುಡ್ ನಟ ಶಾರೂಖ್ ಜಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿಯನ್ನು ಎನ್ ಡಿ ಪಿ ಎಸ್ ಕೋರ್ಟ್ ತಿರಸ್ಕಾರ ಮಾಡಿದ್ದು, ಆರ್ಯನ್ ಗೆ ಜಾಮೀನು ನೀಡುವುದು ಸಾಧ್ಯವಿಲ್ಲ ಎಂದು ಸೂಚನೆಯನ್ನು ನೀಡಿದೆ. ಅಕ್ಟೋಬರ್ 2ರಿಂದ ನ್ಯಾಯಾಂಗ ಬಂಧನದಲ್ಲಿರುವ ಆರ್ಯನ್ ನ ಜಾಮೀನು ಅರ್ಜಿಯನ್ನು ಪದೇ ಪದೇ ತಿರಸ್ಕೃತ ಮಾಡುತ್ತಿರುವುದರ ಕುರಿತಾಗಿ ಸೆಲೆಬ್ರೆಟಿಗಳು ಹಾಗೂ ಶಾರುಖ್ ಅಭಿಮಾನಿಗಳು ತರಹೇವಾರಿ ಹೇಳಿಕೆಗಳನ್ನು ನೀಡುತ್ತಾ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ.

ನಿನ್ನೆ ಎನ್ ಡಿ ಪಿ ಎಸ್ ಕೋರ್ಟ್ ಆರ್ಯನ್ ಖಾನ್ ಜಾಮೀನು ಅರ್ಜಿಯನ್ನು ತಿರಸ್ಕೃತ ಗೊಳಿಸಿದ ನಂತರ ಕಮಾಲ್ ರಶೀದ್ ಖಾನ್ ಅಥವಾ ಕೆ ಆರ್ ಕೆ ಎಂದು ಪ್ರಸಿದ್ಧವಾಗಿರುವ ಹಿಂದಿ ಸಿನಿಮಾಗಳ ಸುಪ್ರಸಿದ್ಧ ವಿಮರ್ಶಕ ಟ್ವೀಟ್ ಒಂದನ್ನು ಮಾಡುವ ಮೂಲಕ ಈ ವಿಚಾರವಾಗಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಇದೇ ವೇಳೆ ಅವರು ಬಾಲಿವುಡ್ ನ ಕಿರುತೆರೆ ಲೋಕದಲ್ಲಿ ದೊಡ್ಡ ಹೆಸರನ್ನು ಮಾಡಿರುವ ಸ್ಟ್ಯಾಂಡಪ್ ಕಮಿಡಿಯನ್ ಆಗಿ ತಮ್ಮದೇ ಛಾಪು ಮೂಡಿಸಿರುವ ಭಾರತಿ ಸಿಂಗ್ ಉದಾಹರಣೆಯನ್ನು ನೀಡಿದ್ದಾರೆ.

ಕೋರ್ಟ್ ನಿನ್ನೆ ತನ್ನ ತೀರ್ಪಿನ ಆದೇಶ ಹೊರಡಿಸಿ ಆರ್ಯನ್ ಖಾನ್ ಜಾಮೀನು ಅರ್ಜಿ ತಿರಸ್ಕೃತ ಗೊಳಿಸಿದ ನಂತರ ಟ್ವೀಟ್ ಮಾಡಿರುವ ಕೆ ಆರ್ ಕೆ, ತಮ್ಮ ಟ್ವೀಟ್ ನಲ್ಲಿ ಆರ್ಯನ್ ಖಾನ್ ಜಾಮೀನು ಅರ್ಜಿ ತಿರಸ್ಕೃತ ವಾಗಿರುವುದು ಅಕ್ಷರಶಃ ಶೋಷಣೆಯಾಗಿದೆ. ಯಾವ ವ್ಯಕ್ತಿ ಡ್ರ ಗ್ಸ್ ಸೇವನೆ ಮಾಡಿರಲಿಲ್ಲವೋ, ಯಾರ ಬಳಿ ಡ್ರ ಗ್ಸ್ ಸಿಕ್ಕಿಲ್ಲವೋ ಅಂತಹವರನ್ನು 20 ದಿನಗಳ ಕಾಲ ಯಾವ ಕಾರಣದಿಂದ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಇದು ನಿಜಕ್ಕೂ ಶೋಷಣೆ ಎಂದು ಅವರು ಹೇಳಿದ್ದಾರೆ.

ಈ ಹಿಂದೆ ಭಾರತಿ ಸಿಂಗದ ಬಳಿ 86 ಗ್ರಾಂ ಡ್ರ ಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿತ್ತು. ಆಕೆಯನ್ನು ಕೂಡಾ ವಿಚಾರಣೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಆಕೆಯನ್ನು ಬಂಧಿಸಿದ ದಿನವೇ ಬಿಡುಗಡೆ ಕೂಡಾ ಮಾಡಲಾಯಿತು. ಅಂದರೆ ನಮ್ಮ ದೇಶದಲ್ಲಿ ಇಬ್ಬರು ಬೇರೆ ಬೇರೆ ವ್ಯಕ್ತಿಗಳಿಗೆ ಎರಡು ಬೇರೆ ಬೇರೆ ಕಾನೂನುಗಳು ಇದೆಯೆ?? ಎಂದು ಕೆ ಆರ್ ಕೆ ಪ್ರಶ್ನೆ ಮಾಡಿದ್ದಾರೆ. ಕೆ ಆರ್ ಕೆ ಮಾಡಿದ ಟ್ವೀಟ್ ಗೆ ಭರ್ಜರಿ ಪ್ರತಿಕ್ರಿಯೆಗಳು ಬರುತ್ತಿದ್ದು, ಬಹಳಷ್ಟು ಜನರು ಕೆ ಆರ್ ಕೆ ಕೇಳಿರುವ ಪ್ರಶ್ನೆ ಸಮಂಜಸವಾಗಿದೆ ಎಂದು ತಮ್ಮ ಕಾಮೆಂಟ್ ಗಳಲ್ಲಿ ತಿಳಿಸುತ್ತಾ ಅವರಿಗೆ ಬೆಂಬಲ ನೀಡಿದ್ದಾರೆ.

LEAVE A REPLY

Please enter your comment!
Please enter your name here