ಆಕೆ ನನಗೆ ದೇವರು ಕೊಟ್ಟ ಉಡುಗೊರೆ: ಗಮನ ಸೆಳೆದ ನಿರ್ಮಾಪಕ ರವೀಂದ್ರನ್ ಪೋಸ್ಟ್
ಸೆಲೆಬ್ರಿಟಿ ಮದುವೆಗಳ ಸುದ್ದಿ ಆಗಾಗ ಸದ್ದು ಮಾಡುತ್ತಲೇ ಇರುತ್ತದೆ. ಆದರೆ ಇತ್ತೀಚಿಗೆ ಒಂದು ಸೆಲೆಬ್ರಿಟಿ ಜೋಡಿಯ ವಿವಾಹ ಮಾತ್ರ ಒಂದು ದೊಡ್ಡ ಸಂಚಲನ ಸೃಷ್ಟಿಸುವ ಮಟ್ಟದಲ್ಲಿ ಎಲ್ಲೆಲ್ಲೂ ಹರಿದಾಡಿದೆ. ಹೌದು, ತಮಿಳು ಟಿವಿ ನಿರೂಪಕಿ ಮತ್ತು ನಟಿ ಮಹಾಲಕ್ಷ್ಮಿ ಹಾಗೂ ತಮಿಳು ಸಿನಿಮಾಗಳ ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಮದುವೆ ವಿಚಾರ ಹಾಗೂ ಅವರ ಮದುವೆಯ ಫೋಟೋಗಳ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಮಾತ್ರವೇ ಅಲ್ಲದೇ ಅದು ದೊಡ್ಡ ಮಟ್ಟದಲ್ಲಿ ಚರ್ಚೆಯನ್ನು ಸಹಾ ಹುಟ್ಟು ಹಾಕಿತ್ತು. ಮಿಶ್ರ ಪ್ರತಿಕ್ರಿಯೆಗಳು ಹರಿದು ಬರುತ್ತಲೇ ಇವೆ. ಇವರ ಮದುವೆಗೆ ಶುಭಾಶಯ ತಿಳಿಸುವ ಮಂದಿ ಒಂದೆಡೆಯಾದರೆ ಇನ್ನೊಂದೆಡೆ ಟ್ರೋಲ್ ಮಾಡುವವರಿಗೆ ಕಡಿಮೆ ಏನಿಲ್ಲ.
ರವೀಂದರ್ ಹಾಗೂ ಮಹಾಲಕ್ಷ್ಮಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯವಾಗಿದ್ದಾರೆ. ಈಗ ಈ ನವದಂಪತಿ ತಮ್ಮ ಇನ್ಸ್ಟಾಗ್ರಾಂ ಖಾತೆಯ ಮೂಲಕ ತಮ್ಮ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿರುವ ಮಹಾಲಕ್ಷ್ಮಿ ಅವರಿಗೆ ಈ ಮೊದಲು ಅನಿಲ್ ಎನ್ನುವವರ ಜೊತೆಗೆ ಮದುವೆಯಾಗಿತ್ತು. ಅವರಿಗೆ ಒಬ್ಬ ಮಗನೂ ಸಹಾ ಇದ್ದಾನೆ. ಆದರೆ ಕೆಲವು ವೈಯಕ್ತಿಕ ಕಾರಣಗಳಿಂದ ಮಹಾಲಕ್ಷ್ಮಿ ಮೊದಲ ಮದುವೆಯನ್ನು ವಿಚ್ಚೇದನದ ಮೂಲಕ ಕೊನೆ ಮಾಡಿದ್ದರು. ಈಗ ಕೆಲವೇ ದಿನಗಳ ಹಿಂದಿನ ನಿರ್ಮಾಪಕ ರವೀಂದ್ರನ್ ಜೊತೆಗೆ ಮತ್ತೊಮ್ಮೆ ಸಪ್ತಪದಿ ತುಳಿದಿದ್ದಾರೆ.
ರವೀಂದ್ರನ್ ಅವರು ತಮಿಳಿನ ಬಿಗ್ ಬಾಸ್ ಮತ್ತು ನಟಿ ವನಿತಾ ವಿಜಯ ಕುಮಾರ್ ಅನ್ನು ಟೀಕೆ ಮಾಡುವ ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇನ್ಸ್ಟಾಗ್ರಾಂ ನಲ್ಲಿ ಒಂದು ಪೋಸ್ಟ್ ಹಂಚಿಕೊಂಡ ಅವರು, ನೀವು ನನ್ನ ಹೃದಯವನ್ನು ಕದ್ದಿರುವಿರಿ, ನಾನು ಈ ಪ್ರೀತಿಯ ಸಂದೇಶವನ್ನು ಉಳಿಸಿಕೊಳ್ಳುತ್ತೇನೆ ಎನ್ನುವ ಮಾತನ್ನು ಅವರು ಹೇಳಿದ್ದಾರೆ. ರವೀಂದರ್ ಉತ್ತರ ನೀಡುತ್ತಾ, ನೀನು ಮರೆತಿದ್ದೀಯಾ ಅಂತ ಅನ್ನಿಸುತ್ತೆ, ನನ್ನದು ಅಂತ ಬದಲಾಯಿಸಿಕೊಂಡೆ… ಸ್ಪೀಡ್ ಚೆಕ್ ಮಾಡು ಪೊಂಡಾಟಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಈ ಚಿತ್ರಕ್ಕಾಗಿ, ಪ್ರೀತಿ ಪರಿಪೂರ್ಣವಾಗಿರಬೇಕಾಗಿಲ್ಲ. ಅದು ನಿಜವಾಗಿರಬೇಕು ಎಂದು ಮಹಾಲಕ್ಷ್ಮಿ ಶೀರ್ಷಿಕೆ ನೀಡಿದ್ದಾರೆ. ರವೀಂದ್ರನ್ ಅವರು ಮಹಾಲಕ್ಷ್ಮಿ ತನಗೆ ಸಿಕ್ಕಿರುವುದು ದೇವರು ಕೊಟ್ಟಿರುವ ಉಡಗೊರೆ ಎಂದು ಹೇಳಿದ್ದಾರೆ. ಅವರು, ನಾನು ಮಹಾಲಕ್ಷ್ಮಿಯನ್ನು ಪ್ರೀತಿಸುತ್ತೇನೆ, ಮಹಾಲಕ್ಷ್ಮಿ ನನ್ನನ್ನು ತುಂಬಾ ಪ್ರೀತಿಸುವುದು ನಿಜವಾದ ಪ್ರೀತಿ ಎಂದು ಹೇಳಿದ್ದಾರೆ. ಒಟ್ಟಾರೆ ಈ ಹೊಸ ಜೋಡಿಯ ಫೋಟೋಗಳು ಅವರು ಹಂಚಿಕೊಳ್ಳುತ್ತಿರುವ ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುವ ಮೂಲಕ ಭರ್ಜರಿ ಸುದ್ದಿಗಳಲ್ಲಿ ಹರಿದಾಡಿದೆ.