ಆಂಧ್ರದಲ್ಲಿ ಹೆಚ್ಚಿತು ಅಪ್ಪು ಪ್ರತಿಮೆಗೆ ಬೇಡಿಕೆ: ಹಗಲಿರುಳೆನ್ನದೇ ಶ್ರಮಿಸುತ್ತಿರುವ ಶಿಲ್ಪಿ

0 1

ಸ್ಯಾಂಡಲ್ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಅಕಾಲಿಕ ನಿಧನವನ್ನು ಅವರ ಅಭಿಮಾನಿಗಳು ಇನ್ನೂ ಮರೆಯುವುದು ಸಾಧ್ಯವಾಗಿಲ್ಲ. ಪುನೀತ್ ಅವರ ‌ನಿಧನಕ್ಕೆ ಅವರ ಅಭಿಮಾನಿಗಳು ಇನ್ನೂ ಕಂಬನಿ ಮಿಡಿಯುತ್ತಿದ್ದಾರೆ. ಪುನೀತ್ ಅವರು ಎಲ್ಲರನ್ನೂ ಅಗಲಿ ಒಂದೂವರೆ ತಿಂಗಳಾಗುತ್ತಾ ಬಂದರೂ ಜನರಿಗೆ ಅವರನ್ನು ಮರೆಯುವುದು, ಆ ನೋವನ್ನು ಅರಗಿಸಿಕೊಳ್ಳುವುದು ಮಾತ್ರ ಅಸಾಧ್ಯವಾಗಿದೆ. ಪುನೀತ್ ಅವರನ್ನು ಕನ್ನಡ ಮಾತ್ರವೇ ಅಲ್ಲದೇ ಬೇರೆ ಭಾಷೆಯ ಜನರು ಅಭಿಮಾನಿಸುವುದು ವಾಸ್ತವ.

ಪುನೀತ್ ಅವರ ಮೇಲಿನ ಅಭಿಮಾನವನ್ನು ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಪುನೀತ್ ಅವರ ದಾರಿಯಲ್ಲಿ ನಡೆದು ಸಮಾಜಸೇವೆಗೆ ಮುಂದಾಗಿದ್ದಾರೆ, ಇನ್ನೂ ಕೆಲವರು ನೇತ್ರದಾನ ಮಾಡಲು ಸಿದ್ಧರಾಗಿದ್ದಾರೆ. ಇದು ಕರ್ನಾಟಕದಲ್ಲಿ ಆದರೆ ನೆರೆಯ ಆಂಧ್ರಪ್ರದೇಶದಲ್ಲಿ ಪುನೀತ್ ರಾಜ್‍ಕುಮಾರ್ ಅವರ ಪ್ರತಿಮೆಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಪ್ರತಿಮೆಗಳ ನಿರ್ಮಾಣ ಕಾರ್ಯ ಬಹಳ ಜೋರಾಗಿ ಸಾಗಿದೆ ಎನ್ನಲಾಗಿದೆ.

ಪುನೀತ್ ರಾಜ್‍ಕುಮಾರ್ ಅವರು ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲವಾದರೂ ಅವರ ಲಕ್ಷಾಂತರ ಜನರ ಹೃದಯ ಗಳಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅವರು ಮಾಡಿರುವ ಸಮಾಜ ಸೇವೆ, ಅವರ ಒಳ್ಳೆಯತನ ಸ್ಮರಣೀಯ. ಅವರ ಈ ಗುಣದಿಂದಾಗಿಯೇ ಜನರು ಅವರ ಪ್ರತಿಮೆಗಳನ್ನು ಪ್ರತಿಷ್ಠಾಪನೆ ಮಾಡಲು ಆಸಕ್ತಿಯನ್ನು ತೋರುತ್ತಿದ್ದಾರೆ. ಇದು ಆಂಧ್ರಪ್ರದೇಶದಲ್ಲಿ ಕೂಡಾ ಚಾಲನೆ ಪಡೆದಿದೆ ಎನ್ನುವುದು ಅಲ್ಲಿನ ಜನರಿಗೆ ಪುನೀತ್ ಅವರ ಮೇಲಿರುವ ಅಭಿಮಾನಕ್ಕೆ ಸಾಕ್ಷಿಯಾಗಿದೆ.

ತೆ‌ನಾಲಿ ಜಿಲ್ಲೆಯ ಶಿಲ್ಪಿ ಕಾಟೂರಿ ವೆಂಕಟೇಶ್ವರ ರಾವ್ ಅವರಿಗೆ ಗುಂಟೂರು ಜಿಲ್ಲೆಯಿಂದ ಪುನೀತ್ ಅವರ ಪ್ರತಿಮೆಗಳನ್ನು ಮಾಡಲು ಆರ್ಡರ್ ಗಳು ಬರುತ್ತಿವೆ ಎನ್ನಲಾಗಿದೆ. ವೆಂಕಟೇಶ್ವರ ರಾವ್ ಅವರು ತಮ್ಮ ಮಕ್ಕಳಾದ ರವಿಚಂದ್ರನ್ ಮತ್ತು ಶ್ರೀ ಹರ್ಷಲಾ ಅವರ ಜೊತೆಗೆ ಸೇರಿ ಪ್ರತಿಮೆಗಳನ್ನು ತಯಾರಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಅವರು ಪುನೀತ್ ಅವರ ಪ್ರತಿಮೆಗಳನ್ನು ಅಭಿಮಾನಿಗಳ ಕೋರಿಕೆಗೆ ತಕ್ಕಂತೆ 3ಡಿ ತಂತ್ರಜ್ಞಾನವನ್ನು ಬಳಸಿ ಸಿದ್ದಪಡಿಸುತ್ತಿದ್ದಾರೆ.

ಈ ತಂತ್ರಜ್ಞಾನದಿಂದ ಅವರು ಮೂರು ಅಡಿಗಳಿಗಿಂತ ನೂರು ಅಡಿಗಳ ಮೂರ್ತಿಗಳನ್ನು ತಯಾರು ಮಾಡಬಹುದು ಎನ್ನಲಾಗಿದೆ.. ಪುನೀತ್ ಅವರ ಮೂರ್ತಿಗಳ ನಿರ್ಮಾಣಕ್ಕೆ ಬೇಡಿಕೆ ಹೆಚ್ಚಿರುವ ಕಾರಣಕ್ಕೆ ತಂದೆ, ಮಕ್ಕಳು ಹಗಲು ರಾತ್ರಿ ಎನ್ನದೇ ಮೂರ್ತಿಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಆಂಧ್ರಪ್ರದೇಶದಲ್ಲಿ ಪುನೀತ್ ಅವರ ಈ ಅಭಿಮಾನ ನೋಡಿದಾಗ ನಿಜಕ್ಕೂ ಪುನೀತ್ ಅವರ ಗ್ರೇಟ್ನೆಸ್ ಎಂತದ್ದು ಎನ್ನುವುದನ್ನು ತಿಳಿಸುತ್ತಿದೆ.

Leave A Reply

Your email address will not be published.