ಅಸಲಿಗೆ ಅನು-ಆರ್ಯ ಮದುವೆ ನಡೆಯಬೇಕಾಗಿದ್ದು ಹೀಗಲ್ಲ, ಇದ್ದ ಪ್ಲಾನ್ ಬೇರೆ, ಆದ್ರೆ ಆಗಿದ್ದೇ ಬೇರೆ!!!

0 1

ಕನ್ನಡ ಕಿರುತೆರೆಯಲ್ಲಿ ಸೀರಿಯಲ್ ಗಳು ಒಂದಕ್ಕಿಂತ ಮತ್ತೊಂದು ಎನ್ನುವಂತೆ ನಾಯಕ, ನಾಯಕಿಯ ಮದುವೆಯನ್ನು ಕಲ್ಯಾಣೋತ್ಸವ ಎನ್ನುವ ಹೆಸರಿನಲ್ಲಿ ಅದ್ದೂರಿಯಾಗಿ ನಡೆಸುವುದು ಇತ್ತೀಚಿಗೆ ಒಂದು ಟ್ರೆಂಡ್ ಆಗಿದೆ. ಆದರೆ ಇದೀಗ ಕಳೆದ ಎರಡು ವಾರಗಳ ಕಾಲದಿಂದಲೂ ಸಹಾ ಕನ್ನಡ ಕಿರುತೆರೆಯ ಒಂದು ಸೀರಿಯಲ್ ನ ಮದುವೆ ಸಂಭ್ರಮ ಮಾತ್ರ ಕಿರುತೆರೆಯ ಇತಿಹಾಸದಲ್ಲಿ ಅದ್ದೂರಿ ಮದುವೆ ಎನ್ನುವ ಹೆಗ್ಗಳಿಕೆ ತನ್ನದಾಗಿಸಿಕೊಂಡಿದ್ದು, ಕಿರುತೆರೆಯಲ್ಲಿ ಎರಡು ವಾರಗಳ ಮದುವೆ ಎಪಿಸೋಡ್ ಗಳ ಪ್ರಸಾದ ಕೂಡಾ ಇದೇ ಮೊದಲು ಎನ್ನುವ ಖ್ಯಾತಿ ಪಡೆದಿದೆ.

ಮೆಹೆಂದಿ ಶಾಸ್ತ್ರ , ಸಂಗೀತ್, ಅರಿಷಿಣ ಶಾಸ್ತ್ರ ಹೀಗೆ ಪ್ರತಿಯೊಂದು ಶಾಸ್ತ್ರಗಳನ್ನು ಅಚ್ಚುಕಟ್ಟಾಗಿ, ವೈಭವಯುತವಾಗಿ ಹಾಗೂ ವರ್ಣರಂಜಿತವಾಗಿ ಇಲ್ಲಿ ಮೂಡಿ ಬಂದಿದೆ. ಇಷ್ಟೊತ್ತಿಗಾಗಲೇ ನಿಮಗೆ ಅದು ಯಾವ ಸೀರಿಯಲ್ ಎನ್ನೋದು ಗೊತ್ತಾಗಿರುತ್ತೆ. ಹೌದು ನಿಮ್ಮ ಊಹೆ ಸರಿ, ಅದು ಬೇರೆ ಯಾವುದು ಅಲ್ಲ, ಜೊತೆ ಜೊತೆಯಲಿ ಸೀರಿಯಲ್ ನ ಆರ್ಯ ಅನು ಮದುವೆ ಸಂಭ್ರಮವೇ ಕಿರುತೆರೆಯ ಲೋಕದಲ್ಲೊಂದು ಅದ್ದೂರಿ ಮದುವೆ ಎಂದು ಅಬ್ಬರಿಸಿದೆ.

ಇಷ್ಟೆಲ್ಲಾ ಸದ್ದು ಮಾಡಿದ ಆರ್ಯ ಅನು ಮದುವೆ ನಂತರ ಸೀರಿಯಲ್ ನಲ್ಲಿ ಒಂದು ದೊಡ್ಡ ಟ್ವಿಸ್ಟ್ ಇದೆ ಅನ್ನೋ ಸುಳಿವು ಈಗಾಗಲೇ ವೀಕ್ಷಕರಿಗೆ ಸಿಕ್ಕಾಗಿದೆ‌. ರಾಜನಂದಿನಿಯ ಆಗಮನಕ್ಕೆ ಜನ ಕಾಯ್ತಿದ್ದಾರೆ. ಆದರೆ ಇದೆಲ್ಲದರ ನಡುವೆ ಹೊಸ ವಿಷಯ ಒಂದು ಹೊರ ಬಂದಿದೆ. ಹೌದು ಆರ್ಯ ಮತ್ತು ಅನು ಅದ್ದೂರಿ ಮದುವೆ ಈ ಮೊದಲು ಪ್ಲಾನ್ ಮಾಡಿದ್ದೇ ಬೇರೆ ರೀತಿ ಎನ್ನಲಾಗಿದ್ದು, ಕೊರೊನಾ ಕಾರಣದಿಂದ ಆ ಪ್ಲಾನ್ ನ ಬದಲಾಯಿಸಲಾಯಿತು ಎನ್ನಲಾಗಿದೆ.

ಹೌದು ಜೊತೆ ಜೊತೆಯಲಿ ಸೀರಿಯಲ್ ನ ನಿರ್ದೇಶಕರಾದ ಆರೂರು ಜಗದೀಶ್ ಮತ್ತು ಸೀರಿಯಲ್ ತಂಡ ಮೊದಲಿಗೆ ಆರ್ಯ ಅನು ಮದುವೆಯ ಭಾಗವನ್ನು ವಿದೇಶದಲ್ಲಿ ಚಿತ್ರೀಕರಣವನ್ನು ಮಾಡುವ ಪ್ಲಾನ್ ಮಾಡಿತ್ತಂತೆ. ಆದರೆ ಕೊರೊನಾ ಲಾಕ್ ಡೌನ್ ನಿಂದಾಗಿ ಮಾಡಿದ್ದ ಪ್ಲಾನ್ ಕೈ ಬಿಡಬೇಕಾಯಿತು. ಇಲ್ಲದೇ ಇದ್ರೆ ಸ್ಟಾರ್ ಗಳ ಮದುವೆ ವಿದೇಶಗಳಲ್ಲಿ ನಡೆದ ಹಾಗೆ, ಶ್ರೀಮಂತ ಉದ್ಯಮಿ ಆರ್ಯನ ಮದುವೆ ಕೂಡಾ ವಿದೇಶದಲ್ಲಿ ನಡೆಸೋ ಯೋಜನೆ ಇತ್ತು ಎನ್ನಲಾಗಿದೆ.

ವಿದೇಶಕ್ಕೆ ಹೋಗೋ ಪ್ಲಾನ್ ಏನೋ‌ ರದ್ದಾಯಿತು ಆದರೆ ಹಾಗಂತ ಇಲ್ಲೇ ಮದುವೆ ಭಾಗ ಚಿತ್ರೀಕರಣ ಮಾಡಿದ್ದು ಕೂಡಾ ಯಾವುದೇ ರೀತಿಯಲ್ಲಿ ಕಾಂಪ್ರಮೈಸ್ ಆಗದೆ ಬಹಳ ಅದ್ದೂರಿಯಾಗಿ ಮದುವೆ ಸಂಭ್ರಮವನ್ನು ಪ್ರೇಕ್ಷಕರ ಮುಂದೆ ತರೋದ್ರಲ್ಲಿ ಜೊತೆ ಜೊತೆಯಲಿ ಸೀರಿಯಲ್ ತಂಡ ಯಶಸ್ಸನ್ನು ಪಡೆದುಕೊಂಡಿದೆ ಅನ್ನೋದ್ರಲ್ಲಿ ಅನುಮಾನ ಖಂಡಿತ ಇಲ್ಲ. ಮದುವೆ ಎಪಿಸೋಡ್ ಗಳು ಇನ್ನೂ ಪ್ರಸಾರ ಆಗ್ತಿದೆ.

ಈ ವಾರದ ಅಂತ್ಯದ ವರೆಗೂ ಮದುವೆ ಎಪಿಸೋಡ್ ಗಳೇ ಬಂದರೆ ಒಟ್ಟು ಮೂರು ವಾರ ಮದುವೆ ಸಂಭ್ರಮ ಎಪಿಸೋಡ್ ಗಳ ಮೂಲಕ ಜನರನ್ನು ರಂಜಿಸಿದ ಮೊದಲ ಸೀರಿಯಲ್ ಕೂಡಾ ಜೊತೆ ಜೊತೆಯಲಿ ಆಗ ಬಹುದು. ಒಟ್ಟಾರೆ ಆರಂಭದಿಂದಲೂ ಒಂದಲ್ಲಾ ಒಂದು ವಿಶೇಷತೆ ಜತೆಗೆ ಜೊತೆ ಜೊತೆಯಲಿ ಕನ್ನಡ ಕಿರುತೆರೆಯ ಲೋಕದ ಟಾಪ್ ಸೀರಿಯಲ್ ಗಳಲ್ಲಿ ಒಂದಾಗಿ ಯಶಸ್ಸು ಪಡೆದಿದೆ.

Leave A Reply

Your email address will not be published.