ಅಷ್ಟೆಲ್ಲಾ ಹಾರಾಡ್ತಿದ್ದ ಜೋಡಿ ನಡುವೆ ಹಳಸಿತಾ ಸಂಬಂಧ?? ದೂರಾದ್ರಾ ಮಲೈಕಾ, ಅರ್ಜುನ್ ಕಪೂರ್??

Entertainment Featured-Articles News
54 Views

ಬಾಲಿವುಡ್ ನ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಜೋಡಿ ಯಾರಿಗೆ ಗೊತ್ತಿಲ್ಲ ಹೇಳಿ, ತನಗೆ ಹದಿನೆಂಟು ವರ್ಷದ ಮಗನಿದ್ದರೂ, ಮಲೈಕಾ ತನಗಿಂತ 12 ವರ್ಷ ಕಿರಿಯನಾದ ನಟ, ನಿರ್ಮಾಪಕ ಬೋನಿ ಕಪೂರ್ ಪುತ್ರ ಅರ್ಜುನ್ ಕಪೂರ್ ಜೊತೆಗೆ ಡೇಟಿಂಗ್ ಮಾಡುತ್ತಿರುವ ವಿಷಯ ರಹಸ್ಯವಾಗಿ ಖಂಡಿತ ಉಳಿದಿಲ್ಲ. ಒಂದು ಸುದ್ದಿಯ ಪ್ರಕಾರ ಮಲೈಕಾ ತಮ್ಮ ಪತಿ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಗೆ ವಿಚ್ಚೇದನ ನೀಡಿದ್ದು ಕೂಡಾ ಅರ್ಜುನ್ ಕಪೂರ್ ಗಾಗಿಯೇ ಎಂದು ಸಹಾ ಹೇಳಲಾಗುತ್ತದೆ.

ಮಲೈಕಾ ಮತ್ತು ಅರ್ಜುನ್ ಇಬ್ಬರೂ ಸಹಾ ಅವರ ವಯಸ್ಸಿನ ವಿಚಾರವಾಗಿ ಹಲವು ಸಲ ಟ್ರೋಲ್ ಆಗಿದ್ದುಂಟು, ಆದ್ರೆ ಈ ಜೋಡಿ ಮಾತ್ರ ತಾವು ಅದರಿಂದ ವಿಚಲಿತ ಆಗೋಲ್ಲ ಎಂದಿದ್ರು, ಇನ್ನು ಅರ್ಜುನ್ ಅಂತೂ ನಮ್ಮ ಬಗ್ಗೆ ಮಾತಾಡೋರೆ ನಮ್ಮ ಜೊತೆ ಸೆಲ್ಫಿಗಾಗಿ ಸಾ ಯ್ತಾ ರೆ ಎಂದು ಕೂಡಾ ಹೇಳಿ ಸುದ್ದಿಯಾಗಿದ್ರು. ಹೀಗೆ ತಮ್ಮ ಸಂಬಂಧದ ಬಗ್ಗೆ ಮಾತನಾಡುವವರಿಗೆಲ್ಲಾ ಬಾಯಿ ಮುಚ್ಚಿಸುತ್ತಿದ್ದ ಈ ರೊಮ್ಯಾಂಟಿಕ್ ಕಪಲ್ ನಡುವೆ ಬ್ರೇಕಪ್ ಆಗಿದೆ ಎನ್ನುವ ಸುದ್ದಿ ಈಗ ಸಖತ್ ಸದ್ದು ಮಾಡಿದೆ.

ಕಳೆದ ಕೆಲವು ವರ್ಷಗಳಿಂದಲೂ ಡೇಟ್ ಮಾಡುತ್ತಿದ್ದರೂ ಕಳೆದ ವರ್ಷವಷ್ಟೇ ಈ ಜೋಡಿ ತಮ್ಮ ನಡುವಿನ ಸಂಬಂಧದ ಬಗ್ಗೆ ಅಧಿಕೃತವಾಗಿ ಘೋಷಣೆಯನ್ನು ಮಾಡಿದ್ದರು. ಆದರೆ ಈಗ ಎಲ್ಲವೂ ಅಂದುಕೊಂಡಂತಿಲ್ಲ, ಇಬ್ಬರ ನಡುವಿನ ಸಂಬಂಧ ಹಳಸಿದೆ ಎಂದು ಬಾಲಿವುಡ್ ಮಾದ್ಯಮಗಳು ವರದಿ ಮಾಡಿದ್ದು, ಮಲೈಕಾ ಅರ್ಜುನ್ ನಡುವೆ ಬ್ರೇಕಪ್ ಆಗಿದೆ ಎನ್ನುವ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದು, ಎಲ್ಲರ ಗಮನ ಸೆಳೆದಿದೆ.

ಕೆಲವೇ ದಿನಗಳ ಹಿಂದೆಯಷ್ಟೇ ಇಬ್ಬರೂ ಮಾಲ್ಡೀವ್ಸ್ ಗೆ ಹೋಗಿ ಎಂಜಾಯ್ ಮಾಡಿದ್ರು , ಆಮೇಲೆ ಏನಾಯ್ತೋ ಗೊತ್ತಿಲ್ಲ ಎನ್ನುವಂತೆ ಮಲೈಕಾ ಕಳೆದ ಒಂದು ವಾರದಿಂದ ಮನೆಯಿಂದ ಹೊರಗೆ ಬಂದಿಲ್ಲ ಎನ್ನಲಾಗಿದ್ದು, ನಟಿಯು ತೀವ್ರವಾದ ಬೇಸರದಲ್ಲಿದ್ದಾರೆ ಎನ್ನಲಾಗುತ್ತಿದೆ. ಮಲೈಕಾ ತನ್ನನ್ನು ತಾನು ಪ್ರತ್ಯೇಕವಾಗಿ ಇರಿಸಿಕೊಂಡಿದ್ದಾರೆ ಎನ್ನಲಾಗಿದೆ. ಇಬ್ಬರೂ ಕಳೆದ ಕೆಲವು ದಿನಗಳಿಂದ ಹೊರಗೆಲ್ಲೂ ಕಾಣಿಸಿಕೊಂಡಿಲ್ಲ.

ಇನ್ನು ಆಗಾಗ ಮಲೈಕಾರನ್ನು ಭೇಟಿ ಮಾಡುವ ಅರ್ಜುನ್ ಕಪೂರ್ ಕೂಡಾ ಮಲೈಕಾರನ್ನು ಭೇಟಿ ಮಾಡಿಲ್ಲ. ಇತ್ತೀಚಿಗಷ್ಟೇ ಮಲೈಕಾ ಮನೆಯ ಹತ್ತಿರದಲ್ಲೇ ಇರುವ ತಮ್ಮ ಸಹೋದರಿ ರಿಯಾ ಕಪೂರ್ ಮನೆಗೆ ಡಿನ್ನರ್ ಗೆ ಬಂದಿದ್ದ ಅರ್ಜುನ್ ಕಪೂರ್ ಮಲೈಕಾ ಮನೆ ಕಡೆ ಹೆಜ್ಜೆ ಕೂಡಾ ಹಾಕಿಲ್ಲ, ಮಲೈಕಾರನ್ನು ಮಾತನಾಡಿಸಲು ಹೋಗಿಲ್ಲ ಎನ್ನುವುದು ಕುತೂಹಲ ಕೆರಳಿಸಿದೆ.

ಆದರೆ ಇನ್ನೊಂದು ಕಡೆ ಅರ್ಜುನ್ ಗೆ ಕೊರೊನಾ ಪಾಸಿಟಿವ್ ಆಗಿತ್ತು, ಮಲೈಕಾ ಬಹುಶಃ ಕ್ವಾರಂಟೈನ್ ನಲ್ಲಿ ಇರಬಹುದು ಎನ್ನುವ ಸುದ್ದಿಗಳು ಕೂಡಾ‌ ಹರಿದಾಡಿದೆ. ಒಟ್ಟಾರೆ ಮನೋರಂಜನಾ ಮಾದ್ಯಮಗಳ ಸುದ್ದಿಗಳು ನಿಜವೋ ಅಲ್ಲವೋ ಎನ್ನುವುದನ್ನು ಮಾತ್ರ ಮಲೈಕಾ ಅಥವಾ ಅರ್ಜುನ್ ಹೇಳಬೇಕಿದ್ದು ಅವರು ಇನ್ನೂ ಮೌನವಾಗಿರುವುದು ಅಭಿಮಾನಿಗಳಲ್ಲಿ ಆ ತಂ ಕವನ್ನು ಉಂಟು ಮಾಡಿದೆ.

Leave a Reply

Your email address will not be published. Required fields are marked *