ಅಷ್ಟಮಿ ರಾತ್ರಿಯ ರಹಸ್ಯ ಬಯಲಾಗೋ ಸಮಯ ಬಂದಾಯ್ತು!! ರೋಚಕ ಘಟ್ಟದತ್ತ ಜೊತೆ ಜೊತೆಯಲಿ ಸೀರಿಯಲ್

0
145

ಕನ್ನಡ ಕಿರುತೆರೆಯಲ್ಲಿ ಪ್ರಸಾರ ಆರಂಭ ಮಾಡಿದ ಮೊದಲ ದಿನದಿಂದಲೇ ಸಂಚಲನ ಸೃಷ್ಟಿಸಿದ ಸೀರಿಯಲ್ ಎಂದರೆ ಅದು ಜೊತೆ ಜೊತೆಯಲಿ. ಆರ್ಯವರ್ಧನ್ ಹಾಗೂ ಅನು ಸಿರಿಮನೆಯ ನಡುವಿನ ಅಪರೂಪದ ಪ್ರೇಮಕಥೆಯಲ್ಲೊಂದು ಊಹಿಸಿರದ ತಿರುವು ಪ್ರೇಕ್ಷಕರಿಗೆ ನೀಡಿದ ಶಾ ಕ್, ಮೂಡಿಸಿದ ಅಚ್ಚರಿ ಅದ್ಭುತವಾದ ಅನುಭೂತಿಯನ್ನು ನೀಡಿರುವುದು ಖಂಡಿತ. ಯಾರನ್ನು ಪ್ರೇಕ್ಷಕರು ಆದರ್ಶವಂತ ನಾಯಕನಾಗಿ ನೋಡುತ್ತಾ ಬಂದಿದ್ದರೋ, ಅದೇ ನಾಯಕ ಖಳನಾಯಕನೆಂದು ನಾಯಕಿಯ ಅರಿವಿಗೆ ಬರಲು ಆರಂಭಿಸಿದೆ.

ವರ್ಧನ್ ಆಸ್ತಿಯನ್ನು ತನ್ನದಾಗಿಸಿಕೊಳ್ಳಲು ಸುಭಾಷ್ ಪಾಟೀಕ್ ಮಾಡಿದ ಪ್ರಯತ್ನ, ಹೆಣೆದ ಕುತಂತ್ರಗಳು, ಜಲಂಧರನನ್ನು ಜೈಲು ಪಾಲು ಮಾಡಿ, ರಾಜ ಸಾಹೇಬರ ಉಸಿರು ನಿಲ್ಲಿಸಿ ಆತ ಮಾಡಿದ ಮೋಸಗಳು ಒಂದು, ಎರಡಲ್ಲ. ಆದರೆ ನಾಯಕಿ ರಾಜನಂದಿನಿಯ ಮುಂದೆ ನಯವಾದ ನಾಟಕೀಯ ಮಾತುಗಳನ್ನು ಆಡುತ್ತಾ ತನ್ನ ಕಪಟತನದ ಅಸಲಿ ಚಹರೆಯ ಮೇಲೆ ನಾಜೂಕಿನ ಮುಖವಾಡ ಧರಿಸಿ ಮಾಡಿದ ಮೋಸ, ವಂಚನೆ ಹಾಗೂ ನಂಬಿಕೆ ದ್ರೋ ಹ ಗಳ ಅರಿವು ರಾಜನಂದಿನಗೆ ಆಗಿದೆ.

ಜೊತೆ ಜೊತೆಯಲಿ ಸೀರಿಯಲ್ ನ ರಾಜನಂದಿನಿ ಅಧ್ಯಾಯವು ಕುತೂಹಲದ ಪ್ರಮುಖ ಘಟ್ಟವನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟಿದೆ. ರಾಜನಂದಿನಿ ಅಧ್ಯಾಯದಲ್ಲಿ ನಿರ್ಣಾಯಕ ಘಟ್ಟವದು ಸಮೀಪವಾಗಿದೆ. ಜೋಗತವ್ವನು ಅಷ್ಟಮಿ ರಾತ್ರಿಯ ಅಪಾಯದ ಕುರಿತು ಎಚ್ಚರಿಕೆಯನ್ನು ನೀಡಿದ್ದಾಳೆ. ಏನು ನಡೆಯಲಿದೆ ಈ ಅಷ್ಟಮಿ ರಾತ್ರಿಯಲ್ಲಿ ಎನ್ನುವುದು ಇದೀಗ ಪ್ರೇಕ್ಷಕರಲ್ಲಿ ತೀವ್ರವಾದ ಕುತೂಹಲವನ್ನು ಮೂಡಿಸಿದ್ದು, ರೋಚಕ ಘಟ್ಟವನ್ನು ನೋಡಲು ಕಾತರರಾಗಿದ್ದಾರೆ.

ಅನು ಸಿರಿಮನೆ ಮುಂದೆ ರಾಜನಂದಿನಿಯ ಜೀವನದ ಒಂದೊಂದು ಹಂತವೂ ಸಾಕ್ಷಾತ್ಕಾರಿಸಿದಂತೆ ಅನಾವರಣ ಆಗಿದೆ. ಇನ್ನು ಅಷ್ಟಮಿ ರಾತ್ರಿಯಲ್ಲಿ ಏನು ನಡೆದಿತ್ತು?? ರಾಜನಂದಿನಿ ಏನಾದರು? ಆಕೆ ಇತಿಹಾಸ ಹೇಗೆ ಅಗತ್ಯವಾಗಿತ್ತು? ಈ ಎಲ್ಲಾ ಪ್ರಶ್ನೆಗಳಿಗೂ ಈ ಅಷ್ಟಮಿ ರಾತ್ರಿಯ ಸನ್ನಿವೇಶ ಉತ್ತರವನ್ನು ನೀಡಲಿದೆಯಾ? ಆರ್ಯನ ಅಸಲಿ ಮುಖದ ಬಗ್ಗೆ ತಿಳಿದುಕೊಂಡಿರುವ ಅನು ಅಷ್ಟಮಿ ರಾತ್ರಿಯಲ್ಲಿ ನಡೆದ ಸತ್ಯ ಅರಿತುಕೊಳ್ಳುವಳಾ?? ಇಷ್ಟಕ್ಕೂ ಆ ಅಷ್ಟಮಿ ರಾತ್ರಿ ಏಕೆ ಇಷ್ಟು ಮುಖ್ಯ??

ಈ ಎಲ್ಲಾ ಪ್ರಶ್ನೆಗಳಿಗೂ ಸಹಾ ಉತ್ತರ ಸಿಗಲಿದೆ ಸೀರಿಯಲ್ ನ ಮುಂದಿನ ಸಂಚಿಕೆಗಳಲ್ಲಿ. ಈಗಾಗಲೇ ವಾಹಿನಿಯು ಸಹಾ ಅಷ್ಟಮಿ ರಾತ್ರಿ ನಡೆದಿದ್ದಾರೂ ಏನು? ಎನ್ನುವ ಒಂದು ಕುತೂಹಲವನ್ನು ಕೆರಳಿಸುವ ಪ್ರೋಮವನ್ನು ಸಹಾ ತನ್ನ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಅದನ್ನು ನೋಡಿದ ಪ್ರೇಕ್ಷಕರು ಸಹಾ ಬಹಳ ಆಸಕ್ತಿಯಿಂದ ಪ್ರತಿಕ್ರಿಯೆ ನೀಡಿದ್ದು, ಎಪಿಸೋಡ್ ಗಾಗಿ ಕಾಯುತ್ತಿದ್ದೇವೆ ಎಂದಿದ್ದಾರೆ.

LEAVE A REPLY

Please enter your comment!
Please enter your name here