ಅವಳು ಡಾರ್ಲಿಂಗ್ ತರ! ವಿಜಯ್ ದೇವರಕೊಂಡ ಹೇಳಿದ್ದು ಕೇಳಿದ್ರೆ ಪಾಪ ರಶ್ಮಿಕಾ ಶಾಕ್ ಆಗೋದು ನಿಜ

Written by Soma Shekar

Published on:

---Join Our Channel---

ಹಿಂದಿ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದು ಇದೀಗ ಓಟಿಟಿ ಯಲ್ಲಿ ಸದ್ದು ಮಾಡುತ್ತಿರುವ ಶೋ ಕಾಫಿ ವಿತ್ ಕರಣ್. ಬಾಲಿವುಡ್ ಸಿನಿಮಾಗಳ ನಿರ್ಮಾಪಕ ಹಾಗೂ ಹಲವು ಶೋ ಗಳ ನಿರೂಪಕ ಮತ್ತು ಜಡ್ಜ್ ಆಗಿಯೂ ಜನಪ್ರಿಯತೆ ಪಡೆದಿರುವ ಕರಣ್ ಜೋಹರ್ ಈ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಾರೆ‌. ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬರುವ ಸೆಲೆಬ್ರಿಟಿಗಳಿಗೆ ಕರಣ್ ಕೇಳುವ ಪ್ರಶ್ನೆಗಳು, ಸೆಲೆಬ್ರಿಟಿಗಳ ಕಡೆಯಿಂದ ಬರುವ ಉತ್ತರಗಳು ಸಖತ್ ಸದ್ದು ಮಾಡುತ್ತವೆ. ಅನೇಕ ಸಂದರ್ಭಗಳಲ್ಲಿ ಅದು ಚರ್ಚೆ, ವಿ ವಾ ದಗಳಿಗೆ ಕಾರಣವಾಗುತ್ತದೆ.

ಈ ಬಾರಿ ಕಾಫಿ ವಿತ್ ಕರಣ್ ಗೆ ತೆಲುಗಿನ ಸ್ಟಾರ್ ನಟ ವಿಜಯ್ ದೇವರಕೊಂಡ ಸಹಾ ಅತಿಥಿಯಾಗಿ ಹೋಗಿದ್ದರು. ಈ ವೇಳೆ ಕರಣ್ ಜೋಹರ್ ವಿಜಯ್ ದೇವರಕೊಂಡ ಬಳಿ ಸೆ ಕ್ಸ್ ಗೆ ಸಂಬಂಧಿಸಿದ ಹೆಚ್ಚಿನ ಪ್ರಶ್ನೆಗಳನ್ನು ಕೇಳಿದ್ದು, ನಟ ಸಹಾ ಯಾವುದೇ ಮುಜುಗರ ಇಲ್ಲದೇ ಉತ್ತರ ನೀಡಿ ಸುದ್ದಿಯಾಗಿದ್ದಾರೆ‌. ಇಷ್ಟೆಲ್ಲಾ ಮಾತುಕತೆ ನಡೆಯುವಾಗ ಅಲ್ಲಿ ರಶ್ಮಿಕಾ ಬಗ್ಗೆ ಮಾತು ಇಲ್ಲದೇ ಹೋದರೆ ಹೇಗೆ ಹೇಳಿ ? ಹೌದು ಕರಣ್ ರಶ್ಮಿಕಾ ಬಗ್ಗೆ ಸಹಾ ವಿಜಯ್ ದೇವರಕೊಂಡ ಮುಂದೆ ಪ್ರಶ್ನೆಯೊಂದನ್ನು ಇಟ್ಟಿದ್ದರು.

ವಿಜಯ್ ದೇವರಕೊಂಡಗೆ ರಶ್ಮಿಕಾ ಜೊತೆಗೆ ಇರುವ ಸಂಬಂಧದ ಕುರಿತಾಗಿ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರವನ್ನು ನೀಡಿದ ವಿಜಯ್ ದೇವರಕೊಂಡ, “ನಾವು ನಮ್ಮ ಆರಂಭಿಕ ಸಿನಿ ಜರ್ನಿ ಯಲ್ಲಿ ಜೊತೆಯಾಗಿ ಎರಡು ಸಿನಿಮಾಗಳನ್ನು ಮಾಡಿದ್ದೇವೆ. ಅವಳು ಡಾರ್ಲಿಂಗ್ ಇದ್ದ ಹಾಗೆ! ಅವಳೊಬ್ಬ ಒಳ್ಳೆಯ ಸ್ನೇಹಿತೆ, ನಾನು ಅವಳನ್ನು ತುಂಬಾ ಇಷ್ಟ ಪಡುತ್ತೇನೆ” ಎಂದು ಹೇಳುವ ಮೂಲಕ ರಶ್ಮಿಕಾ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ ವಿಜಯ್ ದೇವರಕೊಂಡ.

ವಿಜಯ್ ದೇವರಕೊಂಡ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಲೈಗರ್ ಆಗಸ್ಟ್ 25 ರಂದು ಐದು ಭಾಷೆಗಳಲ್ಲಿ ಬಿಡುಗಡೆ ಆಗಲು ಸಜ್ಜಾಗಿದೆ. ಈ ಸಿನಿಮಾವನ್ನು ಪುರಿ ಜಗನ್ನಾಥ್ ನಿರ್ದೇಶನ ಮಾಡಿದ್ದು, ಬಾಲಿವುಡ್ ನಟಿ ಅನನ್ಯ ಪಾಂಡೆ ಈ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ. ಇನ್ನು ಇತ್ತೀಚಿಗೆ ವಿಜಯ್ ಮತ್ತು ರಶ್ಮಿಕಾ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಸುದ್ದಿಗಳು ಹರಡಿದ್ದು, ಅವರು ಇತ್ತೀಚಿನ ದಿನಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿಲ್ಲ ಎನ್ನುವುದು ಸಹಾ ನಿಜವಾದ ವಿಷಯವಾಗಿದೆ.

Leave a Comment