ಅವಳಿಗೆ ನನ್ನ ಗಂಡನ ಜೊತೆಗೂ ಅಫೇರ್ ಇದೆ: ಮಹಾಲಕ್ಷ್ಮಿ ಮೇಲೆ ಮತ್ತೊಬ್ಬ ನಟಿಯ ಗಂಭೀರ ಆರೋಪ
ತಮಿಳು ನಟಿ ಮತ್ತು ನಿರೂಪಕಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಮದುವೆ ವಿಚಾರ ಕಳೆದ ಕೆಲವು ದಿನಗಳಿಂದಲೂ ಸಹಾ ಸಖತ್ ಸುದ್ದಿಯಾಗಿದೆ. ಇವರದ್ದು ಎಂತಹ ಜೋಡಿ, ಇದು ಮಿಸ್ ಮ್ಯಾಚ್ ಎಂದು ಕೆಲವರು ವ್ಯಂಗ್ಯವಾಗಿ ಮಾತನಾಡಿದರೆ, ಇನ್ನೂ ಕೆಲವರು ರವೀಂದ್ರನ್ ಅವರ ಬಳಿ ಇರುವ ಕೋಟಿಗಳ ಮೌಲ್ಯದ ಆಸ್ತಿಗಾಗಿ ಮಹಾಲಕ್ಷ್ಮಿ ಈ ಮದುವೆಗೆ ಒಪ್ಪಿದ್ದಾರೆ ಎನ್ನುವ ಮಾತುಗಳು ಸಹಾ ಕೇಳಿ ಬಂದು, ಮಾದ್ಯಮಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆದರೆ ಈ ಜೋಡಿ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಸೋಶಿಯಲ್ ಮೀಡಿಯಾಗಳಲ್ಲಿ ಪ್ರೇಮ ಭರಿತ ಮಾತುಗಳನ್ನು ಹೇಳಿಕೊಂಡು ಖುಷಿ ಪಡುತ್ತಿದ್ದಾರೆ.
ಆದರೆ ಈಗ ಇವೆಲ್ಲವುಗಳ ನಡುವೆಯೇ ಮತ್ತೊಂದು ಹೊಸ ಸ್ಪೋ ಟ ಕ ಸುದ್ದಿ ಹೊರ ಬಂದಿದೆ. ಮಹಾಲಕ್ಷ್ಮಿಗೆ ಇದು ಎರಡನೇ ಮದುವೆ, ಅವರ ಮೊದಲ ಪತಿಯಿಂದ ಅವರಿಗೆ ಮಗು ಕೂಡಾ ಆಗಿದ್ದು, ಅನಂತರ ವಿಚ್ಛೇದನ ಪಡೆದು ಪತಿಯಿಂದ ದೂರವಾಗಿದ್ದಾರೆ ಎನ್ನುವ ವಿಷಯ ಈಗಾಗಲೇ ಎಲ್ಲರಿಗೂ ತಿಳಿದಿದೆ. ಆದರೆ ವಿಚ್ಚೇದನದ ನಂತರ ನಟಿ ಮಹಾಲಕ್ಷ್ಮಿ ತಮ್ಮೊಡನೆ ನಟಿಸುತ್ತಿದ್ದ ಸಹ ನಟ ಈಶ್ವರ್ ಎನ್ನುವವರ ಜೊತೆ ಪ್ರೇಮಾಯಣ ನಡೆಸುತ್ತಿದ್ದರು ಎನ್ನುವ ವಿಚಾರವನ್ನು ಈಗ ಸ್ವತಃ ನಟ ಈಶ್ವರ್ ಅವರ ಪತ್ನಿ , ನಟಿ ಜಯಶ್ರೀ ಅವರೇ ಬಹಿರಂಗ ಮಾಡಿದ್ದಾರೆ.
ಹೌದು, ನಟಿ ಜಯಶ್ರೀ ಅವರು ಮಹಾಲಕ್ಷ್ಮಿಯ ಮೇಲೆ ಆ ರೋ ಪ ಮಾಡುತ್ತಾ, ನಟಿಯು ಪ್ರತಿ ದಿನ ರಾತ್ರಿ ನನ್ನ ಗಂಡನಿಗೆ ವೀಡಿಯೋ ಕಾಲ್ ಮಾಡಿ ಮಾತನಾಡುತ್ತಿದ್ದಳು. ಅದಕ್ಕೆ ಬೇಕಾದ ಎಲ್ಲಾ ಸಾಕ್ಷಿ ಮತ್ತು ಆಧಾರಗಳು ನನ್ನ ಬಳಿ ಇದೆ ಎಂದು ಹೇಳಿದ್ದಾರೆ. ಅಲ್ಲದೇ ಈಶ್ವರ್ ಮತ್ತು ಮಹಾಲಕ್ಷ್ಮಿಯ ನಡುವಿನ ಈ ಅಫೇರ್ ನ ವಿಚಾರ ರವೀಂದ್ರನ್ ಅವರಿಗೂ ಮೊದಲೇ ಗೊತ್ತಿತ್ತು ಎನ್ನಲಾಗಿದೆ. ರವೀಂದ್ರನ್ ಹಾಗೂ ಮಹಾಲಕ್ಷ್ಮಿ ಮದುವೆ ಸುದ್ದಿ ಹೊರ ಬಂದ ನಂತರ ಇದೀಗ ಈಶ್ವರ್ ಮತ್ತು ಮಹಾಲಕ್ಷ್ಮಿ ಲವ್ ಪುರಾಣ ಕೂಡಾ ಸದ್ದು ಮಾಡಲು ಆರಂಭಿಸಿದೆ.
ಏನೇ ಗೊತ್ತಿದ್ದರೂ ಸಹಾ ಮದುವೆ ಎನ್ನುವುದು ಅವರ ಇಷ್ಟಕ್ಕೆ ಬಿಟ್ಟಿರುವ ವಿಚಾರವಾಗಿದ್ದು, ರವೀಂದ್ರನ್ ಮತ್ತು ಮಹಾಲಕ್ಷ್ಮಿ ಕಾನೂನಿನ ಪ್ರಕಾರ ಮದುವೆಯಾಗಿದ್ದಾರೆ. ಅಲ್ಲದೇ ಈ ಜೋಡಿಯು ಶೀಘ್ರದಲ್ಲೇ ಹನಿಮೂನ್ ಗೆ ತೆರಳಲು ಸಿದ್ಧತೆಗಳನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಇವೆಲ್ಲವುಗಳ ಮಧ್ಯೆ ಈಗ ಮಹಾಲಕ್ಷ್ಮಿ ಮತ್ತು ಈಶ್ವರ್ ನಡುವಿನ ಲವ್ವಿ ಡವ್ವಿ ವಿಚಾರಗಳು ಮಾತ್ರ ಸೋಶಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಾ ಈಗ ಈ ಜೋಡಿ ಮತ್ತೊಂದು ರೌಂಡ್ ಟ್ರೋಲ್ ಆದರೂ ಆಗಬಹುದು ಎನ್ನುವುದರಲ್ಲಿ ಅನುಮಾನವೇ ಇಲ್ಲ ಎಂದು ನಾವು ಹೇಳಬಹುದು.