ಅವರ ಜೊತೆ ನಟಿಸಲ್ಲ: ಬಾಲಯ್ಯನ ಸಿನಿಮಾಗೇ NO ಅಂದ ಕನ್ನಡತಿ ಕೃತಿ ಶೆಟ್ಟಿ ಕೊಟ್ಟ ಕಾರಣಕ್ಕೆ ಟಾಲಿವುಡ್ ಶಾಕ್!!

Entertainment Featured-Articles News

ಅಖಂಡ ಸಿನಿಮಾದ ದೊಡ್ಡ ಮಟ್ಟದ ಯಶಸ್ಸು ನಂದಮೂರಿ ಬಾಲಕೃಷ್ಣ ಅವರ ವಿಜಯ ಎಂದೇ ಎಲ್ಲೆಡೆ ಬಿಂಬಿತವಾಗುತ್ತಿದ್ದು, ಅವರ ಅಭಿಮಾನಿಗಳಂತೂ ಸಿಕ್ಕಾಪಟ್ಟೆ ಸಂಭ್ರಮ ಪಡುವಾಗಲೇ, ನಟನ ಅಭಿನಯದ ಹೊಸ ಸಿನಿಮಾ ಕೂಡಾ ಘೋಷಣೆಯಾಗಿ, ಈಗಾಗಲೇ ಮುಹೂರ್ತ ನಡೆದಿದ್ದು, ಚಿತ್ರೀಕರಣ ಕೂಡಾ ಆರಂಭವಾಗಲಿದೆ ಎನ್ನಲಾಗಿದೆ. ಅಲ್ಲದೇ ಈ ಹೊಸ ಸಿನಿಮಾ ಸಹಾ ಭಾರಿ ಬಜೆಟ್ ನೊಂದಿಗೆ ಬಹಳ ಶ್ರೀಮಂತಿಕೆಯಿಂದ ನಿರ್ಮಾಣ ಅಗಲಿದೆ ಎನ್ನುವುದು ಸಹಾ ಸುದ್ದಿಯಾಗಿದೆ.

ಟಾಲಿವುಡ್ ನ ಸ್ಟಾರ್ ನಟನಾಗಿರುವ ಬಾಲಕೃಷ್ಣ ಅವರ ಜೊತೆ ನಾಯಕಿಯಾಗಿ ನಟಿಸುವ ಅವಕಾಶ ಸಿಕ್ಕರೆ ಯಾರು ತಾನೇ ಬೇಡ ಎನ್ನಲು ಸಾಧ್ಯ? ಅವರ ಜೊತೆ ನಟಿಸಲು ಅನೇಕ ಕಲಾವಿದರು ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ ಇವರೆಲ್ಲರ ನಡುವೆಯೇ ಕನ್ನಡದ ಹುಡುಗಿ ಕೃತಿ ಶೆಟ್ಟಿ ಮಾತ್ರ ಬಾಲಕೃಷ್ಣ ಅವರ ಜೊತೆ ನಾನು ನಟಿಸಲ್ಲ ಎಂದು ಹೇಳಿದ್ದ ವಿಷಯ ಇದೀಗ ದೊಡ್ಡ ಸುದ್ದಿಯಾಗಿ, ಇದರ ಬಗ್ಗೆ ಚರ್ಚೆಗಳು ಸಹಾ ಹುಟ್ಟುಕೊಂಡಿದ್ದು, ಎಲ್ಲರೂ ಕೃತಿ ಶೆಟ್ಟಿ ಕಡೆಗೆ ನೋಡುವಂತಾಗಿದೆ.

ಕೃತಿ ಶೆಟ್ಟಿ 18 ರ ಯುವತಿ, ಅವರು ಈಗಷ್ಟೇ ತೆಲುಗು ಸಿನಿಮಾ ರಂಗದಲ್ಲಿ ಸಿನಿ ಪಯಣ ಆರಂಭಿಸಿದ್ದು, ಮೊದಲ ಸಿನಿಮಾದ ಯಶಸ್ಸಿನೊಂದಿಗೆ ಕೃತಿ ಜನರ ಅಪಾರ ಅಭಿಮಾನವನ್ನು ಗಳಿಸಿದ್ದಾರೆ. ಸ್ಟಾರ್ ನಟರ ಜೊತೆಗೆ ನಟಿಸುವ ಅವಕಾಶಗಳು ಅರಸಿ ಬರುತ್ತಿವೆ. ಹಾಗೇ ಅವರಿಗೆ ಬಾಲಯ್ಯ ಜೊತೆ ನಟಿಸುವ ಅವಕಾಶವೊಂದು ಅರಸಿ ಬಂದರೆ, ನಟಿ ಬಾಲಕೃಷ್ಣ ಅವರ ವಯಸ್ಸಿನ ಕಾರಣದಿಂದ ಆಫರ್ ಅನ್ನು ತಿರಸ್ಕಾರ ಮಾಡಿದ್ದಾರೆ ಎನ್ನಲಾಗಿದೆ.

ಹೌದು, ನಟಿ ಕೃತಿ ತನಗೂ ಬಾಲಕೃಷ್ಣ ಅವರಿಗೆ ವಯಸ್ಸಿನಲ್ಲಿ ತುಂಬಾ ಅಂತರವಿದ್ದು, ಈಗಲೇ ತಾನು ಇಂತಹ ಹಿರಿಯ ನಟರ ಜೊತೆಗೆ ನಟಿಸಿದರೆ ಮುಂದೆ ತನ್ನ ಕೆರಿಯರ್ ಗೆ ತೊಂದರೆ ಆಗಬಹುದು ಎನ್ನುವ ಕಾರಣಕ್ಕೆ ಕೃತಿ ಇಂತಹ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಕೃತಿ ಬೇಡ ಎಂದ ಮೇಲೆ ಆ ಪಾತ್ರಕ್ಕೆ ನಟಿ ಶೃತಿ ಹಾಸನ್ ಬಂದಿದ್ದಾರೆ. ಅಲ್ಲದೇ ಈ ಸಿನಿಮಾ ಮೂಲಕ ಕನ್ನಡ ನಟ ದುನಿಯಾ ವಿಜಯ್ ಅವರು ವಿಲನ್ ಪಾತ್ರದ ಮೂಲಕ ತೆಲುಗು ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.‌

Leave a Reply

Your email address will not be published.