ಅವರು ಮಾಡಿದ್ರಲ್ಲಿ ತಪ್ಪೇನಿದೆ? ನಟ ಚೇತನ್ ಬೆನ್ನಿಗೆ ನಿಂತ ನಟಿ ರಮ್ಯಾ ಟ್ವೀಟ್ ನಲ್ಲಿ ಹೇಳಿದ್ದೇನು??
ನಿನ್ನೆ ಇದ್ದಕ್ಕಿದ್ದಂತೆ ಸ್ಯಾಂಡಲ್ವುಡ್ ನಟ ಚೇತನ್ ಅವರ ಪತ್ನಿ ಇದ್ದಕ್ಕಿದ್ದ ಹಾಗೆ ಲೈವ್ ಬಂದು ತಮ್ಮ ಪತಿ ಕಾಣೆಯಾಗಿದ್ದಾರೆ, ಅವರನ್ನು ಪೋಲಿಸರು ಕಿಡ್ನಾಪ್ ಮಾಡಿದ್ದಾರೆ ಎಂದೆಲ್ಲಾ ಆ ರೋ ಪಗಳನ್ನು ಮಾಡಿದ್ದರು. ಚೇತನ್ ಅವರ ಪತ್ನಿ ಮೇಘಾ ಅವರ ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ದೊಡ್ಡ ಸಂಚಲನ ಕ್ಕೆ ಕಾರಣವಾಗಿತ್ತು. ಆದರೆ ಅನಂತರ ಅಸಲಿ ವಿಷಯ ತಿಳಿದು ಬಂತು ಹಾಗೂ ನಟ ಚೇತನ್ ಅವರನ್ನು ಪೋಲಿಸರು ಕರೆದುಕೊಂಡು ಹೋದ ಕಾರಣ ಏನು ? ಎನ್ನುವ ವಿಷಯಗಳು ಸಹಾ ಸುದ್ದಿಯಾಯಿತು. ಅವರ ಪತ್ನಿ ಕೂಡಾ ಪತಿ ನ್ಯಾಯಾಂಗ ಬಂ ಧ ನದಲ್ಲಿ ಇದ್ದಾರೆಂದು ವಿಷಯ ತಿಳಿಸಿದ್ದಾರೆ.
ಹೌದು, ನಟ ಚೇತನ್ ಅವರು ಈ ಹಿಂದೆ ಮಾಡಿದಂತಹ ಒಂದು ಟ್ವೀಟ್ ನಲ್ಲಿ ನ್ಯಾಯಮೂರ್ತಿ ಗಳಿಗೆ ಅಗೌರವವನ್ನು ತೋರುವಂತಹ ಟ್ವೀಟ್ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಪೋಲಿಸರು ಅವರನ್ನು ಕರೆದುಕೊಂಡಿದ್ದಾರೆ ಎಂದು, ಅನಂತರ ಅವರು ನ್ಯಾಯಮೂರ್ತಿಗಳ ಬಗ್ಗೆ ಇಂತಹುದೊಂದು ಅಗೌರವವನ್ನು ತೋರಿದ್ದಾರೆ ಎನ್ನುವ ಕಾರಣಕ್ಕೆ ಅವರನ್ನು 14 ದಿನಗಳ ನ್ಯಾಯಾಂಗ ಬಂ ಧ ನದಲ್ಲಿ ಇರಿಸಿಲಾಗಿದೆ ಎನ್ನುವ ವಿಷಯಗಳು ಮಾದ್ಯಮಗಳಲ್ಲಿ ಸುದ್ದಿಯಾಯಿತು.
ಇದಾದ ನಂತರ ನಟ ಚೇತನ್ ಅವರ ಬಂ ಧ ನ ದ ಕುರಿತಾಗಿ ಸ್ಯಾಂಡಲ್ವುಡ್ ಮೌನ ವಹಿಸಿರುವಾಗ ಸ್ಯಾಂಡಲ್ವುಡ್ ನಟಿ ರಮ್ಯಾ ಅವರು ಟ್ವೀಟ್ ಒಂದನ್ನು ಮಾಡಿದ್ದು, ತಮ್ಮ ಈ ಟ್ವೀಟ್ ನ ಮೂಲಕ ನಟಿ ರಮ್ಯ ಅವರು ನಟ ಚೇತನ್ ಅವರ ಪರವಾಗಿ ಬ್ಯಾಟ್ ಬೀಸಿದ್ದು , ಈಗ ರಮ್ಯ ಅವರ ಟ್ವೀಟ್ ಎಲ್ಲರ ಗಮನವನ್ನು ಸೆಳೆದಿರುವುದು ಮಾತ್ರವೇ ಅಲ್ಲದೇ, ಅವರ ಈ ಟ್ವೀಟ್ ಗೆ ಸಹಾ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಹಾಗಾದರೆ ನಟಿ ರಮ್ಯ ಅವರು ಟ್ವೀಟ್ ಮಾಡಿದ್ದೇನು?? ತಿಳಿಯೋಣ ಬನ್ನಿ.
ನಿನ್ನೆ ಚೇತನ್ ಅವರನ್ನು ಅರೆಸ್ಟ್ ಮಾಡಿ ಅವರನ್ನು 14 ದಿನಗಳ ನ್ಯಾಯಾಂಗ ಬಂ ಧ ನದ ನಂತರ ನಟಿ ರಮ್ಯಾ ಅವರು ಚೇತನ್ ಮಾಡಿರುವ ಟ್ವೀಟ್ ನಲ್ಲಿ ಏನು ತಪ್ಪಿದೆ ? ಎನ್ನುವ ಅರ್ಥದಲ್ಲಿ ಪ್ರಶ್ನೆ ಮಾಡಿದ್ದಾರೆ. ಹೌದು ನಟಿ ರಮ್ಯಾ ಅವರು, ಈ ಟ್ವೀಟ್ ನಲ್ಲಿ ಏನು ತಪ್ಪಿದೆ? ಚೇತನ್ ಅವರನ್ನು ಪೋಲಿಸರು ಅರೆಸ್ಟ್ ಮಾಡಲು ? ಎಂದು ರಮ್ಯಾ ಅವರು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಚೇತನ್ ಅವರು ಮಾಡಿದ್ದ ಟ್ವೀಟ್ ಅನ್ನು ಸಹಾ ನಟಿ ಶೇರ್ ಮಾಡಿಕೊಂಡಿದ್ದಾರೆ.