ಅವರು ಓಕೆ ಆದ್ರೆ ನನ್ನ ಬಾಯ್ ಫ್ರೆಂಡ್ ಹಾಗೆ ಮಾಡಿದ್ರೆ ಕೊ ಲೆ ಮಾಡ್ತೀನಿ! ಫೈರ್ ಆದ ರಾಖೀ ಸಾವಂತ್

Entertainment Featured-Articles Movies News

ಬಾಲಿವುಡ್ ನ ಡ್ರಾಮ್ ಕ್ವೀನ್ ರಾಖಿ ಸಾವಂತ್ ಸದಾ ಒಂದಲ್ಲಾ ಒಂದು ವಿಷಯವಾಗಿ ಮಾದ್ಯಮಗಳ ಪ್ರಮುಖ ಸುದ್ದಿಯಾಗಿರುತ್ತಾರೆ. ರಾಖಿ ಇದ್ದ ಕಡೆ ಸುದ್ದಿ ಎನ್ನುವುದರಲ್ಲಿ ಅನುಮಾನವೇ ಇಲ್ಲ. ರಾಖಿ ಸಾವಂತ್ ಅನ್ನು ಹಿಂದಿ ವಾಹಿನಿಗಳ ಟಿ ಆರ್ ಪಿ ಕ್ವೀನ್ ಎಂದೂ ಕರೆಯುತ್ತಾರೆ. ರಾಖಿ ತಮ್ಮ ವೃತ್ತಿ ಜೀವನಕ್ಕಿಂತ ಹೆಚ್ಚು ಸುದ್ದಿಯಾಗುವುದು ತಮ್ಮ ಖಾಸಗಿ ಜೀವನ ಹಾಗೂ ನೀಡುವ ವಿ ವಾ ದಾ ತ್ಮ ಕ ಹೇಳಿಕೆಗಳಿಂದಾಗಿ. ಒಮ್ಮೆ ಹೊಗಳಿಕೆ, ಮತ್ತೊಮ್ಮೆ ಜನರಿಂದ ಟೀಕೆಗೆ ಗುರಿಯಾಗುವ ರಾಖಿ ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದೇ ಇಲ್ಲ ಎನ್ನುವುದು ಸಹಾ ನಿಜ.

ರಾಖೀ ಸಾವಂತ್ ತಮ್ಮ ಪತಿಯಿಂದ ದೂರಾದ ಮೇಲೆ ಇದೀಗ ಮೈಸೂರು ಮೂಲದ ಆದಿಲ್ ಖಾನ್ ಜೊತೆಗೆ ಹೊಸ ರಿಲೇಶನ್ ಶಿಪ್ ನಲ್ಲಿರುವುದು ಸೀಕ್ರೇಟ್ ಆಗಿ ಉಳಿದಿಲ್ಲ. ಆದಿಲ್ ಖಾನ್ ಜೊತೆಗೆ ಸಿನಿಮಾ ಫಂಕ್ಷನ್ ಗಳು, ಪಾರ್ಟಿಗಳು, ಹಾಗೂ ಶಾಪಿಂಗ್ ಎಂದು ಖುಷಿಯಿಂದ ಸಮಯ ಕಳೆಯುತ್ತಿರುವ ರಾಖೀ ಸಾವಂತ್ ಆಗಾಗ ಮಾದ್ಯಮಗಳ ಕಣ್ಣಿಗೆ ಬೀಳುವುದು ಸಾಮಾನ್ಯ. ಈಗ ಮತ್ತೊಮ್ಮೆ ಮಾದ್ಯಮಗಳ ಕಣ್ಣಿಗೆ ಸೆರೆಯಾದ ರಾಖಿ ಬಾಯ್ ಫ್ರೆಂಡ್ ಆದಿಲ್ ಜೊತೆ ಕ್ಯಾಮೆರಾ ಗೆ ಪೋಸ್ ಕೊಡುತ್ತಾ ಒಂದಷ್ಟು ಮಾತನಾಡಿದ್ದಾರೆ.

ಕೆಲವೇ ದಿನಗಳ ಹಿಂದೆಯಷ್ಟೇ ಬಾಲಿವುಡ್ ನಟ ರಣ್ವೀರ್ ಸಿಂಗ್ ಮ್ಯಾಗಜೀನ್ ಒಂದರ ಕವರ್ ಫೋಟೋ ಗಾಗಿ ಸಂಪೂರ್ಣ ಬೆ ತ್ತ ಲಾಗಿ ಫೋಟೋ ಶೂಟ್ ಮಾಡಿಸಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿಯನ್ನು ಎಬ್ಬಿಸಿತ್ತು. ಇದಕ್ಕೆ ಮಿಶ್ರ ಪ್ರತಿಕ್ರಿಯೆಗಳು ಸಹಾ ವ್ಯಕ್ತ ವಾಗಿತ್ತು.. ಫೋಟೋವನ್ನು ಭರ್ಜರಿಯಾಗಿ ಟ್ರೋಲ್ ಸಹಾ ಮಾಡಲಾಗಿತ್ತು. ಈ ವಿಚಾರವಾಗಿ ಮಾದ್ಯಮಗಳು ರಾಖಿ ಸಾವಂತ್ ಅವರನ್ನು ಪ್ರಶ್ನೆ ಮಾಡಿದ್ದಾರೆ.

ಅದಕ್ಕೆ ಉತ್ತರ ನೀಡಿದ ರಾಖೀ, ರಣ್ವೀರ್ ಮಾಡಿದ್ದರಲ್ಲಿ ಯಾವುದೇ ತಪ್ಪು ಇಲ್ಲ. ರಣ್ವೀರ್ ಅವರಲ್ಲಿ ನಗ್ನತೆ ಇಲ್ಲ, ಬದಲಾಗಿ ಅದನ್ನು ಹಾಗೆ ನೋಡುವ ಜನರ ಕಣ್ಣಿನಲ್ಲಿ ನಗ್ನತೆ ಇದೆ ಎಂದಿದ್ದಾರೆ. ಹಾಗಾದ್ರೆ ನಿಮ್ಮ ಬಾಯ್ ಫ್ರೆಂಡ್ ಹಾಗೆ ಮಾಡಿದರೆ ಓಕೆ ನಾ ಎಂದು ರಾಖಿಗೆ ಕೇಳಿದ ಪ್ರಶ್ನೆಗೆ ಮಾತ್ರ ರಾಖಿ ಕೊಟ್ಟ ಉತ್ತರ ಶಾಕಿಂಗ್ ಆಗಿತ್ತು. ರಾಖಿ ಮಾತನಾಡುತ್ತಾ ತನ್ನ ಗೆಳೆಯ ಆದಿಲ್ ಖಾನ್ ಅಂತಹ ಫೋಟೋ ಶೂಟ್ ಮಾಡಿದರೆ ಅವರನ್ನು ಕೊ ಲೆ ಮಾಡುತ್ತೇನೆ ಎಂದು ರಾಖಿ ನಗುತ್ತಾ ಹೇಳಿದ್ದಾರೆ.

Leave a Reply

Your email address will not be published.