ಅವರೀಗ ವರ್ಲ್ಡ್ ಕ್ರಶ್: ಚಿನ್ನದ ಹುಡುಗನಿಗೆ ಮನಸೋತ ಬಾಲಿವುಡ್ ಬೆಡಗಿಯ ಮಾತು

0 3

ಒಲಿಂಪಿಕ್ಸ್ ನಲ್ಲಿ ಬಂಗಾರದ ಪದಕವನ್ನು ಗೆಲ್ಲುವ ಮೂಲಕ ನೀರಜ್ ಚೋಪ್ರಾ ಸಮಸ್ತ ಭಾರತದ ಕಣ್ಮಣಿ ಎನಿಸಿಕೊಂಡಿದ್ದಾರೆ. ಭಾರತೀಯರ ಮನೆ ಮಾತಾಗಿರುವ ನೀರಜ್ ಚೋಪ್ರಾ ಅವರ ಅಭಿಮಾನಿಗಳ ಸಂಖ್ಯೆ ಹಿಂದೆಂದಿಗಿಂತಲೂ ಅಧಿಕವಾಗಿದೆ. ಅವರ ಈ ಅಭಿಮಾನಿಗಳ ಪಟ್ಟಿಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಕೂಡಾ ಸೇರಿದ್ದಾರೆ. ಟೋಕಿಯೋ ಒಲಂಪಿಕ್ಸ್ ನಲ್ಲಿ ನೀರಜ್ ಜಾವೆಲಿನ್ ತ್ರೋ ನಲ್ಲಿ ಬಂಗಾರದ ಪದಕವನ್ನು ಗೆದ್ದ ನಂತರ, ಅವರ ಐತಿಹಾಸಿಕ ವಿಷಯದ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳ ವರೆಗೂ ಮಾತನಾಡುತ್ತಿದ್ದಾರೆ. ಕಳೆದ ಒಂದಷ್ಟು ದಿನಗಳಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ನೀರಜ್ ಚೋಪ್ರಾ ಅವರ ಅನೇಕ ಫೋಟೋಗಳು ಹಾಗೂ ವಿಡಿಯೋಗಳು ವೈರಲ್ ಆಗುತ್ತಲೇ ಇವೆ.

ಪ್ರಸ್ತುತ ಭಾರತದಲ್ಲಿ ಬಹಳಷ್ಟು ಜನ ಯುವತಿಯರಿಗೆ ನೀರಜ್ ಚೋಪ್ರಾ ಅವರೇ ಅವರ ಕ್ರಶ್ ಆಗಿದ್ದಾರೆ ಎನ್ನುವುದು ಸುಳ್ಳಲ್ಲ. ಇದೀಗ ಇದೇ ವಿಚಾರದ ಕುರಿತಾಗಿ ಬಾಲಿವುಡ್ ನಟಿ ಕಿಯಾರಾ ಅಡ್ವಾನಿ ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಮಾಧ್ಯಮ ದಲ್ಲಿ ಹಂಚಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರ ನಾಯಕನಾಗಿ ಹಾಗೂ ನಟಿ ಕಿಯಾರಾ ನಾಯಕಿಯಾಗಿ ನಟಿಸಿರುವ ಸಿನಿಮಾ ಶೇರ್ ಷಾ ಬಿಡುಗಡೆಯಾಗಿ ಅಪಾರವಾದ ಪ್ರಶಂಸೆಯನ್ನು ಪಡೆದುಕೊಳ್ಳುತ್ತಿದೆ. ಈ ಸಿನಿಮಾದ ಪ್ರಚಾರ ಕಾರ್ಯದ ಭಾಗವಾಗಿ ಸಿದ್ಧಾರ್ಥ್ ಮಲ್ಹೋತ್ರ ಹಾಗೂ ಕಿಯಾರಾ ಅಡ್ವಾಣಿ ಟಿವಿ ಶೋಗಳು ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.

ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧನ ನಿಜ ಜೀವನ ಸಾಧನೆಯ ಕುರಿತಾದ ಶೇರ್ ಷಾ ಸಿನಿಮಾ ಅಪಾರವಾದ ಜನಮನ್ನಣೆಯನ್ನು ಪಡೆಯುತ್ತಿದ್ದು,‌ ಈ ಸಿನಿಮಾದ ಪ್ರಚಾರ ಸಮಯದಲ್ಲಿ ನಡೆಯುತ್ತಿದ್ದ ಸಂದರ್ಶನದ ವೇಳೆಯಲ್ಲಿ, ನಟಿ ಕಿಯಾರ ಅವರನ್ನು ನೀರಜ್ ಚೋಪ್ರಾ ಅವರ ಕುರಿತಾಗಿ ಪ್ರಶ್ನೆಯೊಂದನ್ನು ಕೇಳಲಾಗಿತ್ತು. ಆಗ ಕಿಯಾರಾ “ನೀರಜ್ ಚೋಪ್ರಾ ಈಗ ಕೇವಲ ನ್ಯಾಷನಲ್ ಕ್ರಶ್ ಅಲ್ಲ ಅವರು ಒಲಂಪಿಕ್ಸ್ ನಲ್ಲಿ ಪದಕವನ್ನು ಗೆದ್ದ ನಂತರ ಅವರು ವರ್ಲ್ಡ್ ಕ್ರಷ್ ಆಗಿದ್ದಾರೆ” ಎಂದು ಹೇಳಿದ್ದಾರೆ. ಇದೇ ವೇಳೆ ಸಿನಿಮಾದ ನಾಯಕ ಸಿದ್ಧಾರ್ಥ್ ಮಲ್ಹೋತ್ರ ಅವರು ಮಾತನಾಡುತ್ತಾ, ದೇಶದ ಹೆಸರನ್ನು ಬೆಳಗಿಸಿದಂತಹ ನೀರಜ್ ನಿಜವಾದ ಶೇರ್ ಷಾ ಎಂಬುದಾಗಿ ಹೇಳಿದ್ದಾರೆ.

Leave A Reply

Your email address will not be published.