ಅವರನ್ನೇಕೆ ಹೆದರಿಸುವಿರಿ? ಸಮಂತಾ ರಕ್ಷಣೆಗೆ ನಿಂತ ನಟ ವರುಣ್ ಧವನ್ ಗೆ ಹರಿದು ಬಂತು ಮೆಚ್ಚುಗೆ

Entertainment Featured-Articles News

ಇತ್ತೀಚಿಗೆ ದಕ್ಷಿಣ ಸಿನಿಮಾಗಳು ಮಾತ್ರವೇ ಅಲ್ಲದೇ ಬಾಲಿವುಡ್ ನಲ್ಲಿ ಸಹಾ ಮಿಂಚುತ್ತಿರುವ, ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಾ, ಸಖತ್ ಸುದ್ದಿಯಾಗುತ್ತಿರುವ ಇಬ್ಬರು ದಕ್ಷಿಣದ ಸ್ಟಾರ್ ನಟಿಯರೆಂದರೆ ಸಮಂತಾ ಮತ್ತು ರಶ್ಮಿಕಾ ಮಂದಣ್ಣ. ಈ ಇಬ್ಬರೂ ನಟಿಯರು ಆಗಾಗ ಬಿ ಟೌನ್ ನಲ್ಲಿ ಕಾಣಿಸಿಕೊಂಡು, ಅವರ ಫೋಟೋಗಳು ವೈರಲ್ ಆಗುತ್ತಿರುತ್ತದೆ. ಇನ್ನು ಇತ್ತೀಚಿನ ಒಂದು ವಿಶೇಷ ಏನೆಂದರೆ ಈ ಇಬ್ಬರೂ ನಟಿಯರು ಸಹಾ ಬಾಲಿವುಡ್ ನಟ ವರುಣ್ ಧವನ್ ಜೊತೆಗೆ ಕಾಣಿಸಿಕೊಂಡು, ಎರಡು ಸಂದರ್ಭಗಳ ಎರಡು ಭಿನ್ನವಾದ ಘಟನೆಗಳು ಸಖತ್ ಸುದ್ದಿ ಖಂಡಿತ ಆಗಿದೆ.

ನಟ ವರುಣ್ ಧವನ್ ರಶ್ಮಿಕಾ ಜೊತೆಗೆ ಡಾನ್ಸ್ ಮಾಡಿದ ವಿಡಿಯೋ, ಅನಂತರ ಸಮಂತಾಗೆ ರಕ್ಷಣೆ ನೀಡಿದ ವಿಧಾನ ನೆಟ್ಟಿಗರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ರಶ್ಮಿಕಾ ಮಂದಣ್ಣ ಹಾಗೂ ವರುಣ್ ಧವನ್ ಜಾಹೀರಾತೊಂದರಲ್ಲಿ ನಟಿಸುತ್ತಿದ್ದು, ಇದಕ್ಕಾಗಿ ಅವರು ಜೊತೆಯಾಗಿ ಕಾಣಿಸಿಕೊಂಡಿದ್ದು, ಆಗ ಬಿಡುವಿನ ವೇಳೆಯಲ್ಲಿ ವರುನ್ ಧವನ್ ಹಾಗೂ ರಶ್ಮಿಕಾ ಹಾಡೊಂದಕ್ಕೆ ಹೆಜ್ಜೆಯನ್ನು ಹಾಕಿದ್ದಾರೆ. ಈ ವೇಳೆ ಇನ್ನೇನು ಡಾನ್ಸ್ ಮುಗಿಯಿತು ಎಂದಾಗ ರಶ್ಮಿಕಾ ವರುಣ್ ಗೆ ಚಮಕ್ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವರುಣ್ ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ವೀಡಿಯೋ ಶೇರ್ ಮಾಡಿಕೊಂಡಿದ್ದಾರೆ. ಇನ್ನು ಇತ್ತೀಚೆಗೆ ಸಮಂತಾ ಹಾಗೂ ವರುಣ್ ಧವನ್ ಮುಂಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ವೇಳೆ ಸೆಲೆಬ್ರಿಟಿ ಫೋಟೋಗ್ರಾಫರ್ ಗಳು ಫೋಟೋಗಳಿಗಾಗಿ ಮುಗಿಬಿದ್ದಿದ್ದಾರೆ. ಆ ಸಂದರ್ಭದಲ್ಲಿ ವರುಣ್ ಸಮಂತಾ ರಕ್ಷಣೆಗೆ ಮುಂದಾಗಿದ್ದಾರೆ. ಪಾಪರಾಜಿಗಳಿಗೆ ಸಮಂತ ರಿಗೆ ಹೆದರಿಸಬೇಡಿ ಎನ್ನುವ ಮಾತನ್ನು ಹೇಳಿದ್ದಾರೆ. ಆ ಮಾತನ್ನು ಕೇಳಿದಾಗ ಸಮಂತಾ ಒಮ್ಮೆ ನಕ್ಕಿದ್ದಾರೆ.

ವರುಣ್ ಧವನ್ ಸಮಂತ ಸುತ್ತಾ ತಮ್ಮ ಕೈಗಳನ್ನು ಮುಂದೆ ಮಾಡಿ ಆಕೆಗೆ ರಕ್ಷಣೆ ಒದಗಿಸುತ್ತಾ, ಸಮಂತಾ ಕಾರು ಹತ್ತುವವರೆಗೆ ಅವರ ಜೊತೆ ಹೋಗಿದ್ದಾರೆ. ಕಾರು ಹತ್ತಿದ ಸಮಂತ ವರುಣ್ ಅವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ. ವರುಣ್ ಧವನ್ ಸಮಂತಾಗೆ ಕೈಗಳನ್ನು ಚಾಚಿ ರಕ್ಷಣೆ ನೀಡಿದ್ದು ನೆಟ್ಟಿಗರಿಗೆ ಬಹಳ ಮೆಚ್ಚುಗೆಯಾಗಿದೆ. ವರುಣ್ ಸಮಂತಾರನ್ನು ಟಚ್ ಮಾಡಲಿಲ್ಲ, ಅವರೊಬ್ಬ ಬಹಳ ಒಳ್ಳೆಯ ವ್ಯಕ್ತಿಯಾಗಿದ್ದು, ಎಲ್ಲರಿಗೂ ಇಂತಹ ಸಹಕಲಾವಿದರ ರಕ್ಷಣೆ ಬೇಕು. ಅವರೊಬ್ಬ ಸಂಭಾವಿತ ವ್ಯಕ್ತಿಯೆಂದು ನೆಟ್ಟಿಗರು ಹಾಡಿಹೊಗಳಿದ್ದಾರೆ.

Leave a Reply

Your email address will not be published.