ಅವಮಾನಕ್ಕೀಡಾಗಿದ್ದ ರೈತನ ವಿಚಾರದಲ್ಲಿ ಹೊಸ ಟ್ವಿಸ್ಟ್: ಶುಭ ಕೋರಿದ ಆನಂದ್ ಮಹೀಂದ್ರಾ

Written by Soma Shekar

Updated on:

---Join Our Channel---

ಕೆಲವು ದಿನಗಳ ಹಿಂದೆಯಷ್ಟೇ ಕಾರು ಖರೀದಿಗೆಂದು ಮಹೀಂದ್ರಾ ಶೋ ರೂಂ ಒಂದಕ್ಕೆ ಹೋಗಿದ್ದಾಗ ಅ ವ ಮಾ ನ ಕ್ಕೀಡಾದ ತುಮಕೂರಿನ ರೈತನೋರ್ವನ ವಿಚಾರವು ದೊಡ್ಡ ಸುದ್ದಿಯಾಗಿತ್ತು, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಇದೊಂದು ದೊಡ್ಡ ಸುದ್ದಿಯಾಗಿ ಸಂಚಲನವನ್ನು ಹುಟ್ಟಿಸಿತು. ಈ ಸುದ್ದಿ ಯಾವ ಮಟ್ಟಕ್ಕೆ ಸದ್ದು ಮಾಡಿತ್ತು ಅಂದರೆ ಕಡೆಗೆ ಮಹೀಂದ್ರಾ ಕಂಪನಿಯ ಮುಖ್ಯಸ್ಥರಾಗಿರುವ ಆನಂದ್ ಮಹೀಂದ್ರಾ ಅವರೇ ಸ್ವತಃ ಟ್ವೀಟ್ ಮಾಡಿ ನಡೆದ ಘಟನೆಯ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದ್ದರು, ಇಂತಹ ಘಟನೆ ನಡೆದಿದ್ದು ಸರಿಯಲ್ಲ ಎಂದು ಹೇಳಿದ್ದರು.

ಈಗ ಈ ಘಟನೆಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಹೌದು, ಆ ರೈತನ ಮನೆಗೆ ಮಹೀಂದ್ರಾ ಕಂಪನಿ ಹೊಸದೊಂದು ಬೊಲೆರೋ ಗೂಡ್ಸ್ ವಾಹನವನ್ನು ಡಿಲೆವರಿ ಮಾಡಿದೆ. ಆನಂದ್ ಮಹೀಂದ್ರಾ ಅವರು ಈ ವಿಷಯವಾಗಿ ಟ್ವೀಟ್ ಒಂದನ್ನು ಮಾಡಿ ಸಂತೋಷವನ್ನು ಹಂಚಿಕೊಂಡಿದ್ದಾರೆ. ಆನಂದ್ ಮಹೀಂದ್ರಾ ಅವರು ತಮ್ಮ ಟ್ವೀಟ್ ನಲ್ಲಿ, ನಾನು ಕೂಡಾ ಕೆಂಪೇಗೌಡ ಅವರಿಗೆ ಸ್ವಾಗತವನ್ನು ಕೋರುತ್ತೇನೆ ಎಂದು ಶುಭಾಶಯವನ್ನು ಕೋರಿದ್ದಾರೆ ಹಾಗೂ ರೈತ ಕೆಂಪೇಗೌಡ ಅವರು ಸಹಾ ಈ ವಿಚಾರವಾಗಿ ತಮ್ಮ ಸಂತೋಷವನ್ನು ಸಹಾ ಹಂಚಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ರಾಮನಪಾಳ್ಯ ನಿವಾಸಿಯಾಗಿರುವ ಕೆಂಪೇಗೌಡ ಅವರು ಗೂಡ್ಸ್ ವಾಹನ ಖರೀದಿಗೆಂದು ತುಮಕೂರಿನ ಶೋ ರೂಂ ಗೆ ಹೋದಂತಹ ಸಂದರ್ಭದಲ್ಲಿ ಅವರಿಗೆ ಅವಮಾನ ಮಾಡಲಾಗಿತ್ತು. ಕೆಂಪೇಗೌಡ ಅವರ ಡ್ರೆಸ್ ಹಾಗೂ ಭಾಷೆ ನೋಡಿ ಅವರ ಬಗ್ಗೆ ಶೋ ರೂಂ ಸಿಬ್ಬಂದಿ ಸಣ್ಣತನವನ್ನು ಮೆರೆದಿದ್ದರು. ಘಟನೆಯ ನಂತರ ಆನಂದ್ ಮಹೀಂದ್ರಾ ಅವರು ಶೋ ರೂಂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದು ಮಾತ್ರವೇ ಅಲ್ಲದೇ ಕೆಂಪೇಗೌಡ ಅವರಿಗೆ ಕ್ಷಮಾಪಣೆ ಕೋರಿದ್ದರು.

Leave a Comment