ಅವನು ಟೆಂಪ್ರವರಿ ಅಲ್ಲ: ಗಳಗಳನೆ ಅತ್ತ ಸೋನು ಮನಸ್ಸಲ್ಲಿ ಏನಿದೆ? ಸೋನು ಕಣ್ಣೀರಿಗೆ ಕಾರಣ ಯಾರು?

Entertainment Featured-Articles Movies News

ಬಿಗ್ ಬಾಸ್ ಕನ್ನಡ ಓಟಿಟಿ ಮೊದಲನೇ ಸೀಸನ್ ನ ಮೂರನೇ ವಾರವು ಮುಗಿಯುತ್ತಾ ಬಂದಿದೆ. ಇಷ್ಟು ದಿನಗಳಲ್ಲಿ ಮನೆಯಲ್ಲಿ ಅನೇಕ ಬದಲಾವಣೆಗಳು ಆಗಿವೆ. ಮನೆಯ ಸದಸ್ಯರ ವರ್ತನೆಗಳು, ಇತರರ ಬಗ್ಗೆ ಅವರ ಅನಿಸಿಕೆ, ಅಭಿಪ್ರಾಯಗಳು ಸಹಾ ಬದಲಾಗಿದೆ. ಒಂದೇ ಮನೆಯಲ್ಲಿ ಇರಬೇಕಾದ ಅನಿವಾರ್ಯತೆಯಿಂದಾಗಿ, ತಮ್ಮ ಆಲೋಚನೆಗಳು ಹಾಗೂ ಅನಿಸಿಕೆಗಳಿಗೆ ಹೊಂದಾಣಿಕೆ ಆಗುವವರೊಡನೆ, ತಮ್ಮ ಮಾತುಗಳನ್ನು ಕೇಳುವವರ ಜೊತೆಗೆ ಹೆಚ್ಚು ಸಮಯವನ್ನು ಕಳೆಯಲು ಬಯಸುವುದರಿಂದ, ಒಂದೇ ತಮಗೆ ತಕ್ಕಂತವರ ಜೊತೆ ಸೇರುವುದರಿಂದ ಒಂದೊಂದು ಪ್ರತ್ಯೇಕ ಗುಂಪುಗಳು, ಜೋಡಿಗಳು ಸಹಾ ಸೃಷ್ಟಿಯಾಗುವುದು ಸಾಮಾನ್ಯ.

ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅಡಿಗ ಮತ್ತು ಸೋನು ಶ್ರೀನಿವಾಸ್ ಗೌಡ ಸ್ನೇಹ ಬಹಳ ಹೈಲೈಟ್ ಆಗಿದೆ. ಅವರಿಬ್ಭರ ನಡುವಿನ ಮಾತು, ಜಗಳಗಳ ವಿಷಯವಾಗಿ ಸಾಕಷ್ಟು ಸುದ್ದಿಗಳು ಸಹಾ ಆಗಿವೆ. ಆದರೆ ಇವೆಲ್ಲವುಗಳ ನಡುವೆಯೇ ರಾಕೇಶ್ ಅನ್ನು ನೆನೆದು ಸೋನು ಗಳಗಳನೆ ಅತ್ತಿದ್ದು, ಇದನ್ನು ನೋಡಿದ ವೀಕ್ಷಕರಿಗೆ ಸೋನು ಮನಸ್ಸಿನಲ್ಲಿ ರಾಕೇಶ್ ಬಗ್ಗೆ ಲವ್ ಏನಾದ್ರು ಹುಟ್ಟಿದ್ಯಾ? ಎನ್ನುವ ಒಂದು ಅನುಮಾನವನ್ನು ಹುಟ್ಟು ಹಾಕಿದೆ. ಈಗ ಮತ್ತೊಮ್ಮೆ ರಾಕೇಶ್ ಬಗ್ಗೆ ಸೋನು ಹೇಳಿದ ಮಾತೊಂದು ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆದಿರುವುದು ಮಾತ್ರವೇ ಅಲ್ಲದೇ ಮಿಶ್ರ ಪ್ರತಿಕ್ರಿಯೆಗಳು ಹರಿದು ಬಂದಿದೆ.

ನಿನ್ನೆ ರಾತ್ರಿ ಸೋನು ಯಾವುದೋ ವಿಚಾರದಲ್ಲಿ ರಾಕೇಶ್ ನಿಂದ ಹರ್ಟ್ ಆಗಿದ್ದಾರೆ. ಇಂದು ಎಲ್ಲಾ ಸರಿ ಹೋಗಿದೆ. ಆದರೆ ನಿನ್ನೆ ರಾತ್ರಿ ಹರ್ಟ್ ಆಗಿದ್ದ ಸೋನು ಅಳಲು ಕಾರಣವಾಗಿತ್ತು. ಅನಂತರ ಮಲಗುವುದಕ್ಕೆ ಎಂದು ಅಕ್ಷತಾ ಬೆಡ್ ರೂಮಿನಲ್ಲಿ ಕುಳಿತಿರುವಾಗ ಅಲ್ಲಿಗೆ ಬಂದ ಸೋನು, ತನ್ನ ಮನಸ್ಸಿನ ಮಾತುಗಳನ್ನು ಹೇಳಿಕೊಂಡಿದ್ದಾರೆ.‌ ಅವನು ನನ್ನನ್ನು ಬೇಬಿ ಮಾ ಎಂದು ಕೊಂಡಿದ್ದಾನೆ. ಏನನ್ನೂ ಸೀರಿಯಸ್ ಆಗಿ ತಗೊಳ್ಳೋದಿಲ್ಲ. ನನ್ನ ಮೇಲೆ ಆಣೆಗೂ, ಬ್ರೀಜರ್ ಮೇಲೆ ಆಣೆಗೂ ಅವನನ್ನು ನಾನು ಟೆಂಪ್ರವರಿ ಅಂತ ನೋಡಿಲ್ಲ ಎಂದು ಹೇಳಿಕೊಂಡಿದ್ದಾರೆ.

ನಾವು ಒಬ್ಬರಿಗೆ ಪ್ರೀತಿ ಕೊಟ್ಟಾಗ ಮತ್ತೆ ಆ ಪ್ರೀತಿ ಸಿಗದೇ ಹೋದರೆ ಬಹಳ ಹರ್ಟ್ ಆಗುತ್ತೆ. ನೀನು ನನ್ನನ್ನು ನೋಡಿದ್ದೀಯಾ, ಮನೇಲಿ ಎಷ್ಟು ಜನ ಹುಡುಗರಿದ್ದರೂ ನಾನು ಯಾರನ್ನು ಹಗ್ ಮಾಡಲ್ಲ. ಅವನ ಜೊತೆಗೆ ಇದ್ದಷ್ಟು ಕ್ಲೋಸ್ ಬೇರೆ ಯಾರ ಜೊತೆಗೂ ಇಲ್ಲ ಎಂದು ಹೇಳಿಕೊಂಡು ಸೋನು ಬಿಕ್ಕಿ ಬಿಕ್ಕಿ ಅತ್ತಿದ್ದು, ಈ ವೇಳೆ ಅಲ್ಲಿಗೆ ಬಂದ ರಾಕೇಶ್ ನಾನು ಎಲ್ಲವನ್ನೂ ಅರ್ಥ ಮಾಡಿಸುತ್ತೇನೆ ಎಂದಾಗ ಸೋನು, ಇನ್ನು ಯಾವಾಗ ಅರ್ಥ ಮಾಡಿಸ್ತೀಯಾ, ಅರ್ಥ ಮಾಡಿಸುವುದು, ಅರ್ಥ ಮಾಡಿಸುವವರು ಬೇಡ. ಅರ್ಥ ಮಾಡಿಕೊಳ್ಳೋರು ಬೇಕು ಎಂದು ಮತ್ತೆ ಗಳಗಳನೆ ಅತ್ತಿದ್ದಾರೆ ಸೋನು.

Leave a Reply

Your email address will not be published.