ಅವನನ್ನ ರೆಡ್ ಹ್ಯಾಂಡ್ ಆಗಿ ಹಿಡಿದ್ರು ಸೆಕೆಂಡ್ ಚಾನ್ಸ್ ಕೊಟ್ಟೆ: ದೀಪಿಕಾ ಪಡುಕೋಣೆ ಸಂದರ್ಶನ ವಿಷಯ ಈಗ ಮತ್ತೊಮ್ಮೆ ವೈರಲ್

Entertainment Featured-Articles News

ಪ್ರಸ್ತುತ ಶಕುನ್ ಬಾತ್ರಾ ನಿರ್ದೇಶನದ ಗೆಹರಾಯಿಯಾ ಸಿನಿಮಾದ ಚರ್ಚೆಗಳು ಎಲ್ಲೆಲ್ಲೂ ನಡೆಯುತ್ತಿದೆ. ಈ ಸಿನಿಮಾದ ಕಥೆಯು ವಂ ಚ ನೆ ಮತ್ತು ಸಂಬಂಧಗಳ ನಡುವಿನ ಗೊಂದಲದ ಬಗ್ಗೆ ಕಥಾ ಹಂದರವನ್ನು ಹೊಂದಿದೆ. ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ದೀಪಿಕಾ ಪಡುಕೋಣೆ, ಸಿದ್ಧಾಂತ್ ಚತುರ್ವೇದಿ, ಅನನ್ಯ ಪಾಂಡೆ ಮತ್ತು ಧೈರ್ಯ ಕರ್ವ ನಟಿಸಿದ್ದಾರೆ. ಸಿನಿಮಾ ಬಿಡುಗಡೆಯ ನಂತರ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ಹರಿದು ಬರುತ್ತಿವೆ ಹಾಗೂ ಅದರಲ್ಲಿ ನೆಗೆಟಿವ್ ಪ್ರತಿಕ್ರಿಯೆಗಳು ಸ್ವಲ್ಪ ಹೆಚ್ಚಾಗಿದೆ ಎನ್ನುವುದು ಸಹಾ ವಾಸ್ತವದ ವಿಷಯವೇ ಆಗಿದೆ.

ಈಗ ಈ ಸಿನಿಮಾದ ಬಗ್ಗೆ ಚರ್ಚೆಗಳು ನಡೆಯುವಾಗಲೇ ನಟಿ ದೀಪಿಕಾ ಪಡುಕೋಣೆ ಅವರು ಮಾತನಾಡಿದ್ದ ಸಂದರ್ಶನವೊಂದರಲ್ಲಿ ತಮ್ಮ ಮಾಜಿ ಬಾಯ್ ಫ್ರೆಂಡ್ ಬಗ್ಗೆ ಆಡಿದ್ದ ಕೆಲವು ಮಾತುಗಳು ಹಳೆಯ ವೀಡಿಯೋ ಒಂದು ಈಗ ಮತ್ತೊಮ್ಮೆ ವೈರಲ್ ಆಗುತ್ತಿದೆ. ಆಗ ದೀಪಿಕಾ ಬಾಯ್ ಫ್ರೆಂಡ್ ನಿಂದ ಸಂಬಂಧಗಳಲ್ಲಿ ಆದ ವಂಚನೆಯ ಬಗ್ಗೆ ಮಾತನಾಡಿದ್ದರು ಎನ್ನುವುದು ವಿಶೇಷವಾಗಿದೆ. ಹೌದು ದೀಪಿಕಾ ಸಂದರ್ಶನದಲ್ಲಿ ಹೇಗೆ ತನ್ನ ಮಾಜಿ ಬಾಯ್ ಫ್ರೆಂಡ್ ಹೇಗೆ ತನಗೆ ಮೋಸ ಮಾಡಿದ್ದ ಎಂದು ಹೇಳಿಕೊಂಡಿದ್ದರು.

ದೀಪಿಕಾ ಹೇಗೆ ತಾನು ತನ್ನ ಮಾಜಿ ಗೆಳೆಯನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದೆ ಎಂದು ತಿಳಿಸಿದ್ದರು. ಈ ಘಟನೆಯನ್ನು ದೀಪಿಕಾ ರಿಂದ ಸಹಿಸುವುದು ಸಾಧ್ಯವಾಗಲಿಲ್ಲ, ಆದ್ದರಿಂದಲೇ ಅವರು ಬ್ರೇಕಪ್ ಮಾಡಿಕೊಂಡಿದ್ದರು. ದೀಪಿಕಾ ಪಡುಕೋಣೆ ಹಿಂದೊಮ್ಮೆ ಬಾಲಿವುಡ್ ನ ನಟ ಕಪೂರ್ ವಂಶದ ಕುಡಿ ರಣಬೀರ್ ಕಪೂರ್ ಜೊತೆಗೆ ರಿಲೇಶನ್ ಶಿಪ್ ನಲ್ಲಿ ಇದ್ದ ವಿಚಾರವು ಎಲ್ಲರಿಗೂ ತಿಳಿದೇ ಇದೆ‌. ರಣಬೀರ್ ಕಪೂರ್ ಹಾಗೂ ದೀಪಿಕಾ ಅಫೇರ್ ಬಗ್ಗೆ ದೊಡ್ಡ ಸುದ್ದಿಗಳೇ ಆಗಿದ್ದವು.

ರಣಬೀರ್ ಜೊತೆಗೆ ಬ್ರೇಕ್ ಅಪ್ ನ ನಂತರ ದೀಪಿಕಾ ಪಡುಕೋಣೆ ವಿಜಯ್ ಮಲ್ಯ ಅವರ ಪುತ್ರ ಸಿದ್ಧಾರ್ಥ್ ಜೊತೆಗೆ ಸ್ವಲ್ಪ ಕಾಲ ಡೇಟಿಂಗ್ ಮಾಡಿದ್ದರು. ಆದರೆ ದೀಪಿಕಾ ಸಿದ್ದಾರ್ಥ್ ಜೊತೆಗಿನ ಸಂಬಂಧದ ಬಗ್ಗೆ ಎಂದೂ ಕೂಡಾ ಯಾವುದೇ ರೀತಿಯ ಮಾತನ್ನು ಆಡಿಲ್ಲ ಎನ್ನುವುದು ವಿಶೇಷ. ದೀಪಿಕಾ ತಮ್ಮ ಮಾಜಿ ಗೆಳೆಯನಿಂದ ಆದ ವಂಚನೆಯ ಬಗ್ಗೆ ಮಾತನಾಡುತ್ತಾ, ನನಗೆ ಸೆ ಕ್ಸ್ ಎನ್ನುವುದು ಕೇವಲ ಒಂದು ದೈಹಿಕ ವಿಚಾರ ಖಂಡಿತ ಅಲ್ಲ.

ದೈಹಿಕ ಸಂಬಂಧದಲ್ಲಿ ಭಾವನೆಗಳು ಸಹಾ ಇರುತ್ತದೆ. ನಾನೊಂದು ರಿಲೇಶನ್ ಶಿಪ್ ನಲ್ಲಿ ಇರುವಾಗ ಎಂದೂ ಅದಕ್ಕೆ ಮೋಸ ಮಾಡುವುದಿಲ್ಲ ಹಾಗೂ ಮನಸ್ಸನ್ನು ಬೇರೆ ಕಡೆಗೆ ಓಡಿಸುವುದಿಲ್ಲ. ಆದರೆ ರಿಲೇಶನ್ ಶಿಪ್ ನಲ್ಲಿ ನನ್ನನ್ನು ಮೂರ್ಖಳನ್ನಾಗಿ ಮಾಡಲಾಗುತ್ತಿದೆ ಎಂದರೆ ಅಂತಹ ರಿಲೇಶನ್ ಶಿಪ್ ನಲ್ಲಿ ನಾನು ಯಾಕೆ ಇರಬೇಕು?? ಅದಕ್ಕಿಂತ ಸಿಂಗಲ್ ಆಗಿದ್ದು ಜೀವನ ಎಂಜಾಯ್ ಮಾಡೋದು ಉತ್ತಮ. ಆದರೆ ಎಲ್ಲರೂ ಆ ರೀತಿ ಯೋಚನೆ ಮಾಡುವುದಿಲ್ಲ. ಆದ್ದರಿಂದಲೇ ನನಗೆ ಕಳೆದುಹೋದ ದಿನಗಳು ಬಹಳ ಚಿಕ್ಕದು ಎನಿಸುತ್ತದೆ.

ಮೊದಲ ಸಲ ಅವನು ನನಗೆ ಮೋಸ ಮಾಡಿದಾಗ ನಾನು ಆ ಸಂಬಂಧದಲ್ಲಿ ಏನೋ ಸಮಸ್ಯೆ ಇದೆ ಅಥವಾ ನನ್ನಲ್ಲೇ ಸಮಸ್ಯೆ ಇರಬಹುದು ಎಂದು ಆಲೋಚನೆಯನ್ನು ಮಾಡಿದ್ದೆ. ಆದರೆ ಯಾವಾಗ ಇದು ಆ ವ್ಯಕ್ತಿಗೆ ಅಭ್ಯಾಸ ಆಗುವುದೋ ಆಗ ನಿಮಗೆ ಆ ವ್ಯಕ್ತಿಯಲ್ಲೇ ಸಮಸ್ಯೆ ಇದೆ ಎನ್ನುವುದು ಅರ್ಥವಾಗುತ್ತದೆ ಎಂದಿದ್ದರು ದೀಪಿಕಾ ಪಡುಕೋಣೆ. ಇನ್ನು ದೀಪಿಕಾ ತಮ್ಮ ಮಾಜಿ ಬಾಯ್ ಫ್ರೆಂಡ್ ಅನ್ನು ಬೇರೆ ಹುಡುಗಿಯ ಜೊತೆ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು.

ಆದರೆ ಅದರ ನಂತರವೂ ಸಹಾ ತಾನು ಇನ್ನೊಂದು ಅವಕಾಶವನ್ನು ನೀಡಿದೆ. ಆದರೆ ಅದೇ ನನ್ನ ಮೂರ್ಖತನವಾಗಿತ್ತು ಎನ್ನುವ ದೀಪಿಕಾ ನಾನು ಎರಡನೇ ಅವನಿಗೆ ಎರಡನೇ ಚಾನ್ಸ್ ನೀಡಿದ್ದೇ ತಪ್ಪು, ಆದರೆ ಅವನು ನನ್ನ ಮುಂದೆ ಕಾಡಿ ಬೇಡಿ ಕ್ಷಮಾಪಣೆ ಕೇಳಿ ಇನ್ನೊಂದು ಅವಕಾಶ ನೀಡಲು ಬೇಡಿಕೊಂಡ ಅದಕ್ಕೆ ಸೋತು ನಾನು ಮತ್ತೊಂದು ಅವಕಾಶ ನೀಡಿದ್ದೆ. ನನ್ನ ಆಪ್ತರು ನನಗೆ ನಾನು ಮಾಡಿದ್ದು ಸರಿಯಲ್ಲ ಎಂದು ಸಲಹೆ ನೀಡಿದರು. ಆದರೆ ನಾನೇ ನಂಬಲಿಲ್ಲ. ಆಮೇಲೆ ಎರಡನೇ ಸಲ ಮತ್ತೊಮ್ಮೆ ನನ್ನ ಕೈಗೆ ಸಿಕ್ಕಿ ಬಿದ್ದ ಎಂದಿದ್ದರು ದೀಪಿಕಾ.

ಇನ್ನು ಬ್ರೇಕಪ್ ನ ನಂತರ ದೀಪಿಕಾ ಪಡುಕೋಣೆ ಸ್ವಲ್ಪ ಕಾಲ ಸಂಕಷ್ಟದ ದಿನಗಳನ್ನು ಎದುರಿಸಿದ್ದರು. ದೀಪಿಕಾ ಖಿನ್ನತೆಗೆ ಒಳಗಾಗಿದ್ದು ಸಹಾ ವಾಸ್ತವ. ಆದರೆ ನಿಧಾನವಾಗಿ ಸಮಯದ ಜೊತೆಗೆ ನೋವನ್ನು ಮರೆತು ಮುಂದಡಿಯನ್ನು ಇಟ್ಟರು ದೀಪಿಕಾ ಪಡುಕೋಣೆ. 2012 ರಲ್ಲಿ ದೀಪಿಕಾ ಜೀವನಕ್ಕೆ ರಣವೀರ್ ಸಿಂಗ್ ಆಗಮನವಾಯಿತು. ಇಬ್ಬರು ಒಬ್ಬರೊನ್ನಬ್ಬರು ಇಷ್ಟ ಪಟ್ಟರು, 2017 ರಲ್ಲಿ ತಮ್ಮ ಸಂಬಂಧದ ಬಗ್ಗೆ ಅಧಿಕೃತ ಘೋಷಣೆ ಮಾಡಿದ ಅವರು 2018 ರಲ್ಲಿ ವಿವಾಹವಾದರು.

Leave a Reply

Your email address will not be published.