ಅವಕಾಶ ಸಿಕ್ಕಿದ್ರೂ ಆ ನಟನ ಜೊತೆ ನಟಿಸಲ್ಲ: ಸಾಯಿ ಪಲ್ಲವಿ ಮಾತಿಗೆ ರೊಚ್ಚಿಗೆದ್ದ ಸ್ಟಾರ್ ನಟನ ಅಭಿಮಾನಿಗಳು

Entertainment Featured-Articles Movies News

ದಕ್ಷಿಣ ಸಿನಿಮಾರಂಗದಲ್ಲಿ ಬೇರೆಲ್ಲಾ ನಟಿಯರಿಗಿಂತ ಭಿನ್ನವಾದ ರೀತಿಯಲ್ಲಿ ತನಗಾಗಿ ಒಂದು ಸ್ಥಾನವನ್ನು ಪಡೆದುಕೊಂಡಿರುವ ನಟಿ ಯಾರು ಎನ್ನುವುದಾದರೆ ಅದು ಸಾಯಿ ಪಲ್ಲವಿ ಮಾತ್ರ. ಯಾವುದೇ ಸಿನಿಮಾ ಒಪ್ಪಿಕೊಳ್ಳಬೇಕಾದರೆ ಸಿನಿಮಾದಲ್ಲಿನ ತನ್ನ ಪಾತ್ರವನ್ನು ಅಳೆದು, ತೂಗಿ, ಸಾಕಷ್ಟು ವಿಚಾರ ಮಾಡಿದ ನಂತರವೇ ಒಪ್ಪಿಗೆ ನೀಡುವ ಈ ನಟಿಗೆ ತನ್ನ ಪಾತ್ರಕ್ಕೆ ಪ್ರಾಮುಖ್ಯತೆ ಇಲ್ಲ ಎನ್ನುವುದಾದರೆ ಅಂತಹ ಸಿನಿಮಾಗಳನ್ನು ಯಾವುದೇ ಎರಡನೆಯ ಆಲೋಚನೆ ಮಾಡದೇ ರಿಜೆಕ್ಟ್ ಮಾಡ್ತಾರೆ. ಸಿನಿಮಾರಂಗದಲ್ಲಿ ಸಾಕಷ್ಟು ಬೇಡಿಕೆ ಇದ್ದರೂ ಸಹಾ ನಟಿ ತಮಗೆ ಹಿಡಿಸಿದ ಕೆಲವೊಂದು ಆಯ್ದ ಸಿನಿಮಾಗಳಲ್ಲಿ ಮಾತ್ರವೇ ನಟಿಸುತ್ತಿದ್ದಾರೆ. ದೊಡ್ಡ ಅಭಿಮಾನಿಗಳ ಬಳಗವನ್ನು ಪಡೆದುಕೊಂಡಿದ್ದಾರೆ ನಟಿ ಸಾಯಿ ಪಲ್ಲವಿ.

ಲೇಡಿ ಪವರ್ ಸ್ಟಾರ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ನಟಿ ತನಗೆ ವಿಜಯ ದೇವರಕೊಂಡ ಜೊತೆಗೆ ನಟಿಸುವ ಅವಕಾಶ ಸಿಕ್ಕರೂ, ತಾನು ಅವರ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ಹೇಳುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ತೆಲುಗಿನಲ್ಲಿ ಅರ್ಜುನ್ ರೆಡ್ಡಿ ಸಿನಿಮಾದ ನಂತರ ನಟ ವಿಜಯ್ ದೇವರಕೊಂಡ ಅವರ ಕ್ರೇಜ್ ಬಹಳಷ್ಟು ಹೆಚ್ಚಿದೆ. ಈ ನಟನ ಸಿನಿಮಾದಲ್ಲಿ ನಟಿಸಲು ನಾಯಕಿಯರು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ನಟಿ ಸಾಯಿ ಪಲ್ಲವಿ ಮಾತ್ರ ತಾನು ವಿಜಯ್ ದೇವರಕೊಂಡ ಜೊತೆ ನಟಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ತಾನು ವಿಜಯದೇವರಕೊಂದ ಸಿನಿಮಾದಲ್ಲಿ ಏಕೆ ನಟಿಸುವುದಿಲ್ಲ ಎನ್ನುವ ವಿಚಾರದಲ್ಲಿ ನಟಿ ಕಾರಣವನ್ನು ಸಹಾ ನೀಡಿದ್ದು, ವಿಜಯ ದೇವರಕೊಂಡ ಮಾಡುವಷ್ಟು ಬಿಲ್ಡಪ್ ಹಾಗೂ ಗ್ಲಾಮರ್ ನನ್ನ ಬಳಿ ಇಲ್ಲ ಎಂದಿದ್ದಾರೆ ನಟಿ ಸಾಯಿ ಪಲ್ಲವಿ. ಅಲ್ಲದೇ ಈ ನಟನ ಸಿನಿಮಾದಲ್ಲಿ ಲಿಪ್ ಲಾಕ್ ದೃಶ್ಯಗಳು ಇರುತ್ತವೆ, ನಟಿಯರು ಕೂಡಾ ಬೋಲ್ಡ್ ಆಗಿರುತ್ತಾರೆ. ಆದರೆ ಸಾಯಿ ಪಲ್ಲವಿ ಅಂತ ಪಾತ್ರಗಳನ್ನು ನಾನು ಮಾಡುವುದಿಲ್ಲ ಎಂದು ಈಗಾಗಲೇ ಘೋಷಣೆ ಮಾಡಿರುವುದರಿಂದ, ಅವರು ವಿಜಯ ದೇವರಕೊಂಡ ಜೊತೆಗೆ ಸಿನಿಮಾ ಮಾಡದೇ ಇರುವುದಕ್ಕೆ ಕಾರಣವಾಗಿದೆ.

ನಟಿ ಸಾಯಿ ಪಲ್ಲವಿಯ ಮಾತುಗಳಿಗೆ ಅವರ ಅಭಿಮಾನಿಗಳು ಮೆಚ್ಚುಗೆ ನೀಡಿದ್ದರೂ ಅದೇ ವೇಳೆ ನಟ ವಿಜಯ್ ದೇವರಕೊಂಡ ಅಭಿಮಾನಿಗಳು ಮಾತ್ರ ಸಾಯಿ ಪಲ್ಲವಿ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಸಾಯಿ ಪಲ್ಲವಿಗೆ ವಿಜಯ ದೇವರಕೊಂಡ ಜೊತೆಗೆ ನಟಿಸುವ ಅದೃಷ್ಟ ಇಲ್ಲ ಎಂದು ಟೀಕೆ ಮಾಡಿದ್ದಾರೆ. ಏನೇ ಆದರೂ ಕೂಡಾ ಸಿನಿಮಾ ಮಂದಿ ಯಾವಾಗ ಹೇಗೆ ಬದಲಾಗುತ್ತಾರೆ ಎನ್ನುವುದು ಯಾರಿಗೂ ತಿಳಿಯದು. ಭವಿಷ್ಯತ್ತಿನಲ್ಲಿ ಈ ಜೋಡಿ ತೆರೆಯ ಮೇಲೆ ಕಾಣಿಸಿಕೊಂಡರೆ ಅದೇನು ಅಚ್ಚರಿಯಂತೂ ಖಂಡಿತ ಅಲ್ಲ.

Leave a Reply

Your email address will not be published.