ಅವಕಾಶಕ್ಕಾಗಿ ಮಂಚ ಏರುವುದು ಕನ್ನಡ ಸಿನಿಮಾ ರಂಗದಲ್ಲಿ ಕಾಮನ್: ನಾಲಗೆ ಹರಿ ಬಿಟ್ಟ ತೆಲುಗು ನಿರ್ದೇಶಕ

Entertainment Featured-Articles Movies News

ಚಿತ್ರರಂಗದಲ್ಲಿ ಆಗಾಗ ಕಾಸ್ಟಿಂಗ್ ಕೌಚ್ ವಿಚಾರವು ಸದ್ದು ಮಾಡುತ್ತಲೇ ಇರುತ್ತದೆ. ಅಲ್ಲದೇ ಈ ವಿಚಾರದಲ್ಲಿ ಈಗಾಗಲೇ ಹಲವು ನಟಿಯರು ಸಿನಿಮಾ ರಂಗದಲ್ಲಿ ತಮಗಾದ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕೆಲವು ನಟಿಯರು ಸಿನಿಮಾ ರಂಗದಲ್ಲಿ ತಮಗೆ ಇಂತಹ ಅನುಭವಗಳು ಎದುರಾಗಿಲ್ಲ ಎನ್ನುವ ಮಾತನ್ನು ಸಹಾ ಹೇಳಿದ್ದಾರೆ. ಆದರೆ ಈಗ ತೆಲುಗು ಚಿತ್ರರಂಗದ ಜನಪ್ರಿಯ ನಿರ್ದೇಶಕರೊಬ್ಬರು ತಮಿಳು ಹಾಗೂ ಕನ್ನಡ ಚಿತ್ರರಂಗಗಳಲ್ಲಿ ಇರುವ ಕಾಸ್ಟಿಂಗ್ ಕೌಚ್ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ತೆಲುಗು ಚಿತ್ರರಂಗದ ಪ್ರಖ್ಯಾತ ನಿರ್ದೇಶಕ ಗೀತಾ ಕೃಷ್ಣ ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಕಾಸ್ಟಿಂಗ್ ಕೌಚ್ ವಿಚಾರದಲ್ಲಿ ತಮಿಳು ಚಿತ್ರರಂಗದವರು ಬಹಳ ಅಸಹ್ಯ. ಕನ್ನಡ ಚಿತ್ರರಂಗದವರು ಇನ್ನು ಅಸಹ್ಯ ಎನ್ನುವ ಮಾತನ್ನು ಹೇಳಿದ್ದಾರೆ. ಕಾಸ್ಟಿಂಗ್ ಕೌಚ್ ಅನ್ನೋದು ಹುಟ್ಟಿಕೊಂಡಿರುವುದೇ ತಮಿಳು ಚಿತ್ರರಂಗದಿಂದ ಎಂದಿರುವ ನಿರ್ದೇಶಕ, ತಮಗೂ ಕೂಡಾ ನಟಿಯೊಬ್ಬರಿಂದ ಇಂತಹ ಅನುಭವ ಆಗಿದೆ ಎನ್ನುವ ಮಾತು ಹೇಳಿದ್ದಾರೆ.

ಅವಕಾಶ ಬೇಕು ಎಂದು ಮಂಚ ಏರುವುದು ಕನ್ನಡ ಚಿತ್ರರಂಗದಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಅದೇ ಕಾರಣದಿಂದಲೇ ನಾನು ಇಪ್ಪತ್ತು ವರ್ಷಗಳ ಹಿಂದೆ ಕನ್ನಡ ಚಿತ್ರರಂಗದ ಸಹವಾಸದಿಂದ ದೂರವಾಗಿದ್ದೇನೆ. ಸಿನಿಮಾ ಆಫರ್ ಗಳಿಗಾಗಿ ನಟಿಯರು ಮಂಚ ಏರುತ್ತಾರೆ. ಸಂಗೀತ ನಿರ್ದೇಶಕರುಗಳು ಕೂಡಾ ಗಾಯಕಿಯರ ಜೊತೆಗೆ ಮಲಗುತ್ತಾರೆ. ಸಾಫ್ಟ್ ವೇರ್ ಜಗತ್ತಿನಲ್ಲಿಯೂ ಹೀಗೆ ನಡೆಯುತ್ತದೆ ಎನ್ನುವ ಮಾತನ್ನು ಹೇಳಿದ್ದಾರೆ.

ಕೆಜಿಎಫ್ ಹಾಗೂ ತ್ರಿಬಲ್ ಆರ್ ಸಿನಿಮಾಗಳು ಜನರನ್ನು ತಲುಪಿದ ಮಟ್ಟಕ್ಕೆ ನಮ್ಮ ಸಿನಿಮಾಗಳು ತಲುಪಬೇಕೆಂದರೆ ಕಂಟೆಂಟ್ ಚೆನ್ನಾಗಿರಬೇಕು. ಸರ್ಕಾರು ವಾರಿ ಪಾಠ ಸಿನಿಮಾದಲ್ಲಿ ಮಹೇಶ್ ಬಾಬು ಹ್ಯಾಂಡ್ಸಮ್ ಆಗಿದ್ದಾರೆ. ಆದರೆ ಸಿನಿಮಾ ಕಂಟೆಂಟ್ ಸರಿಯಾಗಿಲ್ಲ. ಆಚಾರ್ಯ ಸಿನಿಮಾದಲ್ಲಿಯೂ ಕಂಟೆಂಟ್ ಸರಿಯಾಗಿಲ್ಲ. ವಯಸ್ಸಿಗೆ ತಕ್ಕಂತಹ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

ಮೆಗಾಸ್ಟಾರ್ ಚಿರಂಜೀವಿ ಅವರು ಸಹಾ ತಮ್ಮ ವಯಸ್ಸಿಗೆ ತಕ್ಕಂತಹ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ. ಆದರೆ ಇದೇ ವೇಳೆ ತೆಲುಗಿನ ಮತ್ತೊಬ್ಬ ನಟ ವೆಂಕಟೇಶ್ ಅವರು ತಮ್ಮ ವಯಸ್ಸಿಗೆ ತಕ್ಕಂತಹ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಜನರನ್ನು ನಗಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಕಾಸ್ಟಿಂಗ್ ಕೌಚ್ ವಿಚಾರದಲ್ಲಿ ಗೀತಾ ಕೃಷ್ಣ ಅವರು ಹೇಳಿದ ವಿಚಾರಗಳು ಈಗ ಚರ್ಚೆಗೆ ಕಾರಣವಾಗಿದೆ.

Leave a Reply

Your email address will not be published.