ಅಲ್ಲು ಅರ್ಜುನ್, ರಾಮ್ ಚರಣ್ ಸೇರಿ ಅನೇಕ ಸ್ಟಾರ್ ಗಳು ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿರೋದು ಯಾಕೆ?

Entertainment Featured-Articles Movies News

ಸಿನಿಮಾ ರಂಗದಲ್ಲಿ ತೆರೆಯ ಮೇಲೆ ಸ್ಟಾರ್ ಗಳಾಗಿ ಮಿಂಚುವ ತಾರೆಯರು, ತಾವು ತೆರೆಯ ಮೇಲೆ ಚೆನ್ನಾಗಿ ಕಾಣಲು, ಅಭಿಮಾನಿಗಳ ಮನಸ್ಸನ್ನು ಗೆಲ್ಲಲು ಅನೇಕ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ತಮ್ಮ ಈ ಅಂದ, ಸ್ಟೈಲ್ ಮತ್ತು ಫಿಟ್ನೆಸ್ ಗಳನ್ನು ಸರಿಯಾಗಿ ನೋಡಿಕೊಳ್ಳಲು ಭಾರೀ ಹಣ ನೀಡಿ ಸ್ಟೈಲಿಸ್ಟ್‌ಗಳು, ಫಿಟ್‌ನೆಸ್ ತರಬೇತುದಾರರು ಮತ್ತು ವೈಯಕ್ತಿಕ ವೈದ್ಯರನ್ನು ಸಹಾ ನೇಮಕ ಮಾಡಿಕೊಂಡಿರುತ್ತಾರೆ. ಅವರ ಸಲಹೆ ಸೂಚನೆಗಳನ್ನು ಪಾಲಿಸುತ್ತಾ ಅವರು ಇನ್ನಷ್ಟು ಚೆನ್ನಾಗಿ ಕಾಣುತ್ತಾರೆ.

ಇದೆಲ್ಲಾ ಒಂದು ಕಡೆಯಾದರೆ, ಇನ್ನೊಂದು ಕಡೆ ಅಂದವನ್ನು ಇನ್ನಷ್ಟು ಆಕರ್ಷಕ ಮಾಡಲು, ತಮ್ಮ ಮೂಗು, ದವಡೆಯ ಮೂಳೆಗಳನ್ನು ಸರ್ಜರಿ ಮಾಡಿಸಿ ಹೊಸ ರೂಪ ಪಡೆಯುವ ಪ್ರಯತ್ನ ಮಾಡುತ್ತಾರೆ. ಇದಕ್ಕೆ ಒಂದು ಅತ್ಯುತ್ತಮ ಉದಾಹರಣೆಯೆಂದರೆ ಪಾಪ್ ಗಾಯಕ ಮತ್ತು ನರ್ತಕ ಮೈಕೆಲ್ ಜಾಕ್ಸನ್. ಅವರು ತಾನು ಚೆನ್ನಾಗಿ ಕಾಣಲು ಮಾಡಿಸಿದ ಸರ್ಜರಿಗಳು ಒಂದು ಎರಡಲ್ಲ. ಹೌದು ಪ್ಲಾಸ್ಟಿಕ್ ಸರ್ಜರಿ ಎಂದರೆ ನಮಗೆ ಸ್ವಲ್ಪ ವಿಚಿತ್ರವೆನಿಸುತ್ತದೆ.

ಆದರೆ‌ ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಸಿನಿಮಾ ತಾರೆಯರು, ಮಾಡೆಲ್ ಗಳು, ಪಾಪ್ ಸಿಂಗರ್ ಗಳು ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗುತ್ತಲೇ ಇರತ್ತಾರೆ. ಇಲ್ಲಿ ಎಲ್ಲರ ಆಸೆ ಒಂದೇ, ತಾವು ಇನ್ನಷ್ಟು ಆಕರ್ಷಕವಾಗಿ ಕಾಣಬೇಕು ಎನ್ನುವುದು. ಕೆಲವು ದೇಶಗಳಲ್ಲಿ ಆ ದೇಶಗಳಲ್ಲಿ, ಶಸ್ತ್ರಚಿಕಿತ್ಸೆಗೆ ಒಳಗಾಗದ ಸೆಲೆಬ್ರಿಟಿಗಳನ್ನು ಬಹಳ ವಿಶೇಷವೆಂದೇ ಪರಿಗಣಿಸುತ್ತಾರೆ. ಆ ದೇಶಗಳಲ್ಲಿ ಸೌಂದರ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದು ಸಾಮಾನ್ಯ. ಪ್ಲಾಸ್ಟಿಕ್ ಸರ್ಜರಿ ಅದರ ಒಂದು ಭಾಗವಾಗಿದೆ.

ಸಿನಿಮಾ ವಿಚಾರಕ್ಕೆ ಬಂದರೆ, ಇಲ್ಲಿ ಪ್ಲಾಸ್ಟಿಕ್ ಸರ್ಜರಿ ಎನ್ನುವುದು ತೀರಾ ಸಾಮಾನ್ಯವಾದ ವಿಷಯವೇ ಆಗಿದೆ. ಬಾಲಿವುಡ್ ನಿಂದ ಹಿಡಿದು ಎಲ್ಲಾ ಸಿನಿಮಾ ರಂಗಗಳಲ್ಲಿ ಸಹಾ ಹಲವು ನಟ ನಟಿಯರು ಈಗಾಗಲೇ ಸರ್ಜರಿಗೆ ಒಳಗಾಗಿದ್ದಾರೆ.‌ ಸಿನಿಮಾ ರಂಗದಲ್ಲಿ ಮೊದಲು ಪ್ಲಾಸ್ಟಿಕ್ ಸರ್ಜರಿಗೆ ಒಳಗಾದ ನಟಿ,ಶ್ರೀದೇವಿ, ಪ್ಲಾಸ್ಟಿಕ್ ಸರ್ಜರಿ ವಿಚಾರದಲ್ಲಿ ಈ ನಟಿಯೇ ಮೊದಲ ಹೆಜ್ಜೆ ಇಟ್ಟಿದ್ದಾರೆ ಎನ್ನಲಾಗುತ್ತದೆ.‌ ಟಾಲಿವುಡ್ ನಲ್ಲಿ ರಾಮ್ ಚರಣ್ ತೇಜ್ ಮತ್ತು ಅಲ್ಲು ಅರ್ಜುನ್ ಕೂಡಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂದರೆ ಅನೇಕರಿಗೆ ಅಚ್ಚರಿಯಾಗುತ್ತದೆ.

ನಟ ಅಲ್ಲು ಅರ್ಜುನ್ ಅವರ ಮೂಗು ಮತ್ತು ರಾಮ್ ಚರಣ್ ಅವರ ತುಟಿಗಳು ಮತ್ತು ಗಲ್ಲವನ್ನು ಪ್ಲಾಸ್ಟಿಕ್ ಸರ್ಜರಿ ಮೂಲಕ ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗಿದೆ. ನಟ ಅಲ್ಲು ಅರ್ಜುನ್ ಸಿನಿಮಾಗೆ ಎಂಟ್ರಿ ಕೊಟ್ಟಾಗ ಸರ್ಜರಿ ಮಾಡಿಸಿದ್ದರು. ಅವರ ಮೊದಲ ಸಿನಿಮಾ ಗಂಗೋತ್ರಿ ನೋಡಿದರೆ ನಿಮಗೇ ಅರ್ಥವಾಗುತ್ತದೆ ಆ ಸಿ‌ನಿಮಾ ಮತ್ತು ನಂತರದ ಸಿನಿಮಾಗಳಲ್ಲಿ ಅವರ ಮೂಗಿನಲ್ಲಿನ ವ್ಯತ್ಯಾಸ ಸ್ಪಷ್ಟವಾಗಿ ಕಾಣುತ್ತದೆ. ರಾಮ್ ಚರಣ್ ವಿಷಯಕ್ಕೆ ಬಂದರೆ ಅವರು ಸರ್ಜರಿ ಮಾಡಿಸಿದ ನಂತರವೇ ಸಿನಿಮಾಕ್ಕೆ ಕಾಲಿಟ್ಟರು.

ಇನ್ನು ಸರ್ಜರಿಗೆ ಒಳಗಾದ ಕೆಲವು ಸ್ಟಾರ್ ಗಳ ಬಗ್ಗೆ ಹೇಳುವುದಾದರೆ, ಸಮಂತಾ, ಶ್ರುತಿ ಹಾಸನ್, ಆಸಿನ್, ತ್ರಿಶಾ, ನಯನತಾರಾ, ಕಾಜಲ್, ಆರತಿ ಅಗರ್ವಾಲ್, ಮಹೇಶ್ ಬಾಬು (ಕೂದಲು), ಹಾಸ್ಯನಟ ಮತ್ತು ಹೀರೋ ಸುನಿಲ್ ದಕ್ಷಿಣದ ಪ್ರಮುಖ ಸ್ಟಾರ್ ಗಳಾಗಿದ್ದಾರೆ. ಬಾಲಿವುಡ್ ವಿಚಾರಕ್ಕೆ ಬಂದರೆ ಅಲ್ಲಿ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿರುವ ಸ್ಟಾರ್ ಗಳ ದೊಡ್ಡ ಪಟ್ಟಿಯೇ ಇದೆ ಎಂದರೆ ಸುಳ್ಳಲ್ಲ. ಹಾಗಾದರೆ ಯಾರು ಆ ಬಾಲಿವುಡ್ ಸೆಲೆಬ್ರಿಟಿಗಳು ಎಂದರೆ ಉತ್ತರ ಇಲ್ಲಿದೆ.

ಬಾಲಿವುಡ್ ನಲ್ಲಿ ಸ್ಟಾರ್ ನಾಯಕಿಯರಾಗಿ ಮಿಂಚಿದ, ಮಿಂಚುತ್ತಿರುವ ನಟಿಯರಾದ ಪ್ರಿಯಾಂಕಾ ಚೋಪ್ರಾ, ಅನುಷ್ಕಾ ಶರ್ಮಾ, ಶಿಲ್ಪಾ ಶೆಟ್ಟಿ, ಐಶ್ವರ್ಯ ರೈ, ಕತ್ರಿನಾ ಕೈಫ್, ಕಂಗನಾ ರಣಾವತ್ , ಕರಿಷ್ಮಾ ಕಪೂರ್ ಹೀಗೆ ಅನೇಕ ನಟಿಯರು ಪ್ಲಾಸ್ಟಿಕ್ ಸರ್ಜರಿಗಳಿಗೆ ಒಳಗಾಗಿದ್ದಾರೆ. ಇನ್ನು ಇತ್ತೀಚಿಗೆ ನಟಿ ಕೀರ್ತಿ ಸುರೇಶ್ ಸಹಾ ತಮ್ಮ ತುಟಿಗಳಿಗೆ ಸರ್ಜರಿ ಮಾಡಿಸಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡಿ ಸಖತ್ ಸದ್ದು ಮಾಡಿದೆ.

Leave a Reply

Your email address will not be published.