ಅಲ್ಲು ಅರ್ಜುನ್, ರಶ್ಮಿಕಾ ಜೋಡಿಯ ಪುಷ್ಪ 2 ಸಿನಿಮಾಕ್ಕೆ ಮತ್ತೊಬ್ಬ ಕನ್ನಡತಿಯ ಭರ್ಜರಿ ಎಂಟ್ರಿ!! ಯಾರು ಆ ಕನ್ನಡತಿ?

Entertainment Featured-Articles Movies News

ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ‌ ನಾಯಕ, ನಾಯಕಿಯಾಗಿ ನಟಿಸಿದ್ದ ಪುಷ್ಪ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿ, ದೊಡ್ಡ ಯಶಸ್ಸನ್ನು ಪಡೆದಿದ್ದು ಈಗ ಹಳೆಯ ವಿಚಾರವೇ ಆದರೂ ಪುಷ್ಪ ಕ್ರೇಜ್ ಇನ್ನೂ ಸೋಶಿಯಲ್ ಮೀಡಿಯಾಗಳಲ್ಲಿ ಮುಂದುವರೆದಿದೆ. ಅಲ್ಲದೇ ಈ ಸಿನಿಮಾ ನಂತರ ನಟ ಅಲ್ಲು ಅರ್ಜುನ್, ನಟಿ ರಶ್ಮಿಕಾ ಮಂದಣ್ಣ ಮತ್ತು ಒಂದು ವಿಶೇಷ ಹಾಡಿನಲ್ಲಿ ಹೆಜ್ಜೆ ಹಾಕಿದ ನಟಿ ಸಮಂತಾ ಮೂವರೂ ಸಹಾ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅದರಲ್ಲೂ ರಶ್ಮಿಕಾ ಮತ್ತು ಸಮಂತಾ ಪುಷ್ಪ ಸಿನಿಮಾ ನಂತರ ಟಾಕ್ ಆಫ್ ದಿ ಟೌನ್ ಎನ್ನುವಂತೆ‌ ಸದಾ ಸುದ್ದಿಯಲ್ಲಿದ್ದಾರೆ.

ಪುಷ್ಪ ನಂತರ ಈಗ ಅಭಿಮಾನಿಗಳು ಮತ್ತು ಸಿನಿ ಪ್ರೇಮಿಗಳಲ್ಲಿ ಪುಷ್ಪ 2 ಕ್ರೇಜ್ ಹೆಚ್ಚಿದೆ. ಈ ಸಿನಿಮಾದ ಬಗ್ಗೆ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಪುಷ್ಪ 2 ಸಿನಿಮಾದಲ್ಲಿ ವಿಶೇಷ ಎನ್ನುವಂತೆ ದಕ್ಷಿಣ ಸಿನಿಮಾ ರಂಗದ ಜನಪ್ರಿಯ ನಟ ವಿಜಯ್ ಸೇತುಪತಿ ನಾಯಕ ಅಲ್ಲು ಅರ್ಜುನ್ ಅವರ ಮುಂದೆ ಪ್ರಮುಖ ಪಾತ್ರವನ್ನು ನಿರ್ವಹಣೆ ಮಾಡಲಿದ್ದಾರೆ ಎನ್ನುವ ವಿಷಯ ಈಗಾಗಲೇ ಸುದ್ದಿಯಾಗಿದ್ದು, ಅಭಿಮಾನಿಗಳ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದ್ದು, ಇಬ್ಬರ ಕಾಂಬಿನೇಷನ್ ಹೇಗಿರುತ್ತದೆ ಎನ್ನುವ ವಿಚಾರವು ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿ ಮಾಡಿದೆ.

ಈಗ ಇದೇ ಸಿನಿಮಾದ ಹೊಸ ಮತ್ತು ಆಸಕ್ತಿಕರ ಅಪ್ಡೇಟ್ ಒಂದು ಹೊರ ಬಂದಿದೆ. ಅದರ ಪ್ರಕಾರ ಸಿನಿಮಾದಲ್ಲಿ ನಟ ವಿಜಯ್ ಸೇತುಪತಿ ಅವರಿಗೆ ಜೋಡಿಯಾಗಿ ಕನ್ನಡತಿಯೊಬ್ಬರು ಸಿನಿಮಾಕ್ಕೆ ಸೇರ್ಪಡೆಯಾಗಿದ್ದಾರೆ. ಈಗ ಯಾರು ಆ ಕನ್ನಡತಿ ಎನ್ನುವ ಕುತೂಹಲ ನಿಮಗೆ ಮೂಡಿದ್ದರೆ ಅದಕ್ಕೆ ಉತ್ತರ ಸಹಾ ನಾವು ನೀಡುತ್ತೇವೆ ನೋಡಿ. ದಕ್ಷಿಣ ಸಿನಿಮಾ ರಂಗದಲ್ಲಿ ಈಗಾಗಲೇ ಸ್ಟಾರ್ ನಟಿಯಾಗಿ ಮಿಂಚಿ, ವೆಬ್ ಸಿರೀಸ್ ಮೂಲಕ ಬಾಲಿವುಡ್ ಗೂ ಎಂಟ್ರಿ ನೀಡಿರುವ ನಟಿ ಪ್ರಿಯಾಮಣಿ ಪುಷ್ಪ 2 ಸಿನಿಮಾಕ್ಕೆ ಎಂಟ್ರಿ ನೀಡಿಲಿದ್ದಾರೆ ಎನ್ನಲಾಗಿದೆ.

ನಟಿ ಪ್ರಿಯಾಮಣಿ ಅವರು ಪ್ರಸ್ತುತ ತಮಿಳಿನ ಸ್ಟಾರ್ ನಿರ್ದೇಶಕ ಆ್ಯಟ್ಲಿ ನಿರ್ದೇಶನದ ಬಾಲಿವುಡ್ ನಟ ಶಾರೂಖ್ ಖಾನ್ ಮತ್ತು ನಟಿ ನಯತತಾರಾ ನಾಯಕಿಯಾಗಿರುವ ಹಿಂದಿ ಸಿನಿಮಾ ಜವಾನ್ ನಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಬಹುಶಃ ಆ ಸಿನಿಮಾದಲ್ಲಿ ತಮ್ಮ ಕೆಲಸವನ್ನು ಮುಗಿಸಿದ ನಂತರ ಪುಷ್ಪ 2 ಸಿನಿಮಾ ಚಿತ್ರೀಕರಣ ಆರಂಭವಾದರೆ ಈ ಚಿತ್ರತಂಡಕ್ಕೆ ಪ್ರಿಯಾಮಣಿ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಕುರಿತು ಇನ್ನೂ ಅಧಿಕೃತ ಘೋಷಣೆ ಆಗಿಲ್ಲ ಎನ್ನುವುದು ಸಹಾ ನಿಜ.

Leave a Reply

Your email address will not be published. Required fields are marked *