ಅಲ್ಲು ಅರ್ಜುನ್ ಪುಷ್ಪ 2ಕ್ಕೆ ದಕ್ಷಿಣದ ಸ್ಟಾರ್ ನಟಿಯ ಎಂಟ್ರಿ: ಶ್ರೀವಲ್ಲಿ ರಶ್ಮಿಕಾಗೆ ಸಖತ್ ಟಕ್ಕರ್, ಥ್ರಿಲ್ಲಾದ ಅಭಿಮಾನಿಗಳು!

0 4

ಟಾಲಿವುಡ್ ನಟ, ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ ಸಿನಿಮಾದ ಯಶಸ್ಸಿನ ನಂತರ ಜನಪ್ರಿಯತೆ ಪಡೆದ ಪ್ಯಾನ್ ಇಂಡಿಯಾ ಸ್ಟಾರ್ ಸಹಾ ಆಗಿದ್ದಾರೆ. ಅಲ್ಲು ಅರ್ಜುನ್ ಕ್ರೇಜ್ ಉತ್ತರ ಭಾರತದಲ್ಲಿ ಸಹಾ ಹೆಚ್ಚಾಗಿದೆ. ಪುಷ್ಪ ಸಿನಿಮಾದ ನಂತರ ಸಿನಿಮಾದ ಡೈಲಾಗ್, ಹಾಡುಗಳು, ಅಲ್ಲು ಅರ್ಜುನ್ ಹುಕ್ ಸ್ಟೆಪ್ ಸೋಶಿಯಲ್ ಮೀಡಿಯಾಗಳಲ್ಲಿ ಮಾಡಿದ ಸದ್ದನ್ನು ಯಾರೂ ಮರೆತಿಲ್ಲ. ಹೀಗೆ ಪುಷ್ಪ ಮೊದಲ ಅಧ್ಯಾಯ ಯಶಸ್ಸಿನ ಹೊಸ ಅಲೆಯನ್ನು ಸೃಷ್ಟಿಸಿತ್ತು. ಆದ್ದರಿಂದಲೇ ಈಗ ಸಹಜವಾಗಿಯೇ ಪುಷ್ಪ 2 ಸಿನಿಮಾದ ಬಗ್ಗೆ ಸಿನಿ ಪ್ರೇಮಿಗಳ ನಿರೀಕ್ಷೆ ದುಪ್ಪಟ್ಟಾಗಿದೆ. ಸಿನಿಮಾ ಚಿತ್ರೀಕರಣ ಸಹಾ ಅಧಿಕೃತವಾಗಿ ಈ ತಿಂಗಳ ಕೊನೆಯ ಭಾಗದಲ್ಲಿ ಆರಂಭವಾಗಲಿದೆ ಎಂದು ಸುದ್ದಿಯಾಗಿದೆ.

ಪುಷ್ಪ 2 ಸಿನಿಮಾದ ಅಪ್ಡೇಟ್ ಗಳು ಆಗಾಗ ಹೊರ ಬರುತ್ತಿದ್ದು, ಹೊಸ ಹೊಸ ಸ್ಟಾರ್ ಗಳು ಈ ಸಿನಿಮಾದಲ್ಲಿ ವಿಶೇಷ ಪಾತ್ರಗಳ ಮೂಲಕ ಎಂಟ್ರಿ ನೀಡಿತ್ತಿದ್ದಾರೆ ಎನ್ನುವ ಸುದ್ದಿಗಳು ತೀವ್ರವಾದ ಕುತೂಹಲವನ್ನು ಮೂಡಿಸಿದೆ‌. ಅಲ್ಲದೇ ಸಿನಿಮಾ ಮೇಲಿನ ನಿರೀಕ್ಷೆಗಳು ದುಪ್ಪಟ್ಟಾಗಿರುವ ಕಾರಣ ನಿರ್ದೇಶಕ ಸುಕುಮಾರ್ ಅವರು ಸಹಾ ಸಿನಿಮಾದ ಕಥೆಯಲ್ಲಿ ಕೆಲವೊಂದು ಪ್ರಮುಖ ಬದಲಾವಣೆಗಳನ್ನು ಮಾಡಿದ್ದು, ನಾಯಕ ಅಲ್ಲು ಅರ್ಜುನ್ ಪಾತ್ರವನ್ನು ಮತ್ತಷ್ಟು ಪವರ್ ಫುಲ್ ಆಗಿ ತೋರಿಸುವ ಯೋಜನೆಗಳನ್ನು ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿಗಳು ಸಹಾ ಹರಿದಾಡಿವೆ.

ಈಗ ಇವೆಲ್ಲವುಗಳ ಬೆನ್ನಲ್ಲೇ ಸಿನಿ ಪ್ರೇಮಿಗಳು ಮತ್ತು ಅಭಿಮಾನಿಗಳು ಥ್ರಿಲ್ ಆಗುವಂತಹ ಹೊಸ ವಿಷಯವೊಂದು ಹೊರ ಬಂದಿದ್ದು, ಇದು ಸಿನಿಮಾ ಬಗ್ಗೆ ಇನ್ನಷ್ಟು ಉತ್ಸುಕತೆಯನ್ನು ಮೂಡಿಸಿದೆ. ಹೌದು, ಪುಷ್ಪ 2 ಸಿನಿಮಾಕ್ಕೆ ದಕ್ಷಿಣದ ಸ್ಟಾರ್ ನಟಿ, ಲೇಡಿ ಪವರ್ ಸ್ಟಾರ್ ಖ್ಯಾತಿಯ ನಟಿ ಸಾಯಿ ಪಲ್ಲವಿ ಎಂಟ್ರಿ ನೀಡುತ್ತಿದ್ದಾರೆ ಎನ್ನುವ ಸುದ್ದಿಯೊಂದು ಈಗ ಟಾಲಿವುಡ್ ಅಂಗಳದಲ್ಲಿ ಹರಿದಾಡಿ ಸಂಚಲನವನ್ನು ಸೃಷ್ಟಿಸಿದೆ. ಹಾಗಾದರೆ ಸಾಯಿ ಪಲ್ಲವಿ ಯಾವ ಪಾತ್ರಕ್ಕೆ ಎಂಟ್ರಿ ನೀಡುತ್ತಿದ್ದಾರೆ ? ಅವರ ಪಾತ್ರದ ವಿಶೇಷತೆ ಏನು? ಎಂದು ತಿಳಿದುಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ.

ಈಗ ಹೊರ ಬಂದಿರುವ ಸುದ್ದಿಗಳ ಪ್ರಕಾರ ನಟಿ ಸಾಯಿಪಲ್ಲವಿ ಈ ಸಿನಿಮಾದಲ್ಲಿ ಒಬ್ಬ ಪ್ರಮುಖ ಆದಿ ವಾಸಿ ಮಹಿಳೆಯ ಪಾತ್ರಕ್ಕೆ ಎಂಟ್ರಿ ನೀಡುತ್ತಿದ್ದಾರೆ ಎನ್ನಲಾಗಿದ್ದು, ಇದೊಂದು ಪ್ರಮುಖವಾದ ಪಾತ್ರವಾಗಲಿದೆ ಎಂದು ಹೇಳಲಾಗಿದೆ. ಅಲ್ಲು ಅರ್ಜುನ್ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಸಾಯಿ ಪಲ್ಲವಿ ನಟಿಸುತ್ತಿರುವ ವಿಚಾರ ತಿಳಿದು ಅವರ ಅಭಿಮಾನಿಗಳಂತೂ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ. ಅಲ್ಲದೇ ಇವರ ಕಾಂಬಿನೇಷನ್ ನಲ್ಲಿ ಒಂದು ಡ್ಯಾನ್ಸ್ ಇದ್ದರೆ ಇನ್ನೂ ಭರ್ಜರಿಯಾಗಿರುತ್ತದೆ ಎನ್ನುವ ಮಾತುಗಳು ಸಹಾ ಕೇಳಿ ಬರುತ್ತಿದೆ. ಸಾಯಿ ಪಲ್ಲವಿ ಎಂಟ್ರಿ ಕುರಿತು ಇನ್ನು ಅಧಿಕೃತ ಘೋಷಣೆ ಮಾತ್ರವೇ ಬಾಕಿಯಿದೆ.

Leave A Reply

Your email address will not be published.