ಅಲ್ಲು ಅರ್ಜುನ್ ಜೊತೆ ಡಾನ್ಸ್ ಸ್ಟೆಪ್ ಹಾಕಲು ನೋರಾ ಕೇಳಿದ ಸಂಭಾವನೆಗೆ ಬೇಸ್ತು ಬಿದ್ದ ಪುಷ್ಪ ನಿರ್ಮಾಪಕರು

Written by Soma Shekar

Published on:

---Join Our Channel---

ಬಾಲಿವುಡ್ ನಟಿ ಹಾಗೂ ಅದ್ಭುತ ಡಾನ್ಸರ್ ಆಗಿರುವ ನೋರಾ ಫತೇಹಿ ಜನಪ್ರಿಯತೆಯಲ್ಲಿ ಬಾಲಿವುಡ್ ನ ಸ್ಟಾರ್ ನಟಿಯರನ್ನು ಕೂಡಾ ಹಿಂದಿಕ್ಕಿರುವ ವಿಚಾರ ಈಗಾಗಲೇ ತಿಳಿದಿರುವ ವಿಷಯವೇ ಆಗಿದೆ. ನೋರಾ ಫತೇಹಿ ಜನಪ್ರಿಯತೆ ಬಗ್ಗೆ ಹೊಸದಾಗಿ ಹೇಳುವ ಅವಶ್ಯಕತೆ ಇಲ್ಲ ಎನ್ನುವಷ್ಟು ಮಟ್ಟಿಗೆ ಸಿನಿಮಾಗಳಲ್ಲಿ ಹಾಗೂ ಡ್ಯಾನ್ಸ್ ರಿಯಾಲಿಟಿ ಶೋಗಳ ವರೆಗೂ ತನ್ನ ಛಾಪನ್ನು ಮೂಡಿಸಿದ್ದಾರೆ. ಬಾಲಿವುಡ್ ಸಿನಿಮಾಗಳ ಸೂಪರ್ ಹಿಟ್ ಐಟಂ ಸಾಂಗ್ ಗಳಲ್ಲಿ ಅದ್ಭುತ ಮೂವ್ಸ್ ಮತ್ತು ಸ್ಟೆಪ್ ಗಳನ್ನು ಹಾಕುವ ಮೂಲಕ ನೋರಾ ಯಶಸ್ಸಿನ ಉತ್ತುಂಗವನ್ನು ತಲುಪಿದ್ದಾರೆ.

ನೋರಾ ಫತೇಹಿ ಈ ಹಿಂದೆ ಬಾಹುಬಲಿ ಸಿನಿಮಾದ ಒಂದು ಹಾಡಿನಲ್ಲಿ ಮೂರು ಜನ ಡ್ಯಾನ್ಸರ್ ಗಳಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದರು. ಆ ಹಾಡು ಸಹಾ ಬಹಳ ಜನಪ್ರಿಯತೆ ಪಡೆದುಕೊಂಡಿತ್ತು. ಆದರೆ ನೋರಾ ದಕ್ಷಿಣಕ್ಕಿಂತಲೂ ಬಾಲಿವುಡ್ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಅವರ ಬೇಡಿಕೆ ಹಾಗೂ ಸಂಭಾವನೆ ಕೂಡಾ ಹೆಚ್ಚಾಗಿದೆ. ಇದೀಗ ತೆಲುಗಿನ ಬಹು ನಿರೀಕ್ಷಿತ ಪುಷ್ಪ ಸಿನಿಮಾದ ಒಂದು ವಿಶೇಷ ಹಾಡಿಗಾಗಿ ನೋರಾ ಅವರನ್ನು ಕರೆ ತರುವ ಪ್ರಯತ್ನವೊಂದು ನಡೆದಿದೆ.

ಪುಷ್ಪ ಸಿನಿಮಾದಲ್ಲಿ ನೋರಾ ಅವರಿಂದ ಒಂದು ಹಾಡಿಗೆ ಹೆಜ್ಜೆಗಳನ್ನು ಹಾಕಿಸಲು ಚಿತ್ರತಂಡ ಪ್ರಯತ್ನಿಸಿದ್ದು, ನೋರಾ ಈ ಒಂದು ಹಾಡಿನಲ್ಲಿ ಡಾನ್ಸ್ ಮಾಡಲು, ನಿರ್ಮಾಪಕರ ಮುಂದೆ ಇಟ್ಟಿರುವ ಸಂಭಾವನೆಯ ಬೇಡಿಕೆಯನ್ನು ನೋಡಿ ಚಿತ್ರ ತಂಡ ಸುಸ್ತಾಗಿದೆ ಎನ್ನಲಾಗಿದೆ. ಅಲ್ಲದೇ ನೋರಾ ಕೇಳಿರುವ ಸಂಭಾವನೆಯನ್ನು ನೀಡುವಲ್ಲಿ ನಿರ್ಮಾಪಕರು ಹಿಂದೇಟು ಹಾಕುವ ಸಾಧ್ಯತೆಗಳೂ ಇದೆ ಎನ್ನಲಾಗುತ್ತಿದೆ.

ಹೌದು, ಲಭ್ಯವಾಗಿರುವ ವರದಿಗಳ ಪ್ರಕಾರ ಪುಷ್ಪ ಸಿನಿಮಾದಲ್ಲಿ ವಿಶೇಷ ಹಾಡಿಗೆ ಹೆಜ್ಜೆಗಳನ್ನು ಹಾಕಲು ನೋರಾ ಬರೋಬ್ಬರಿ 2 ಕೋಟಿ ರೂಪಾಯಿಗಳ ಸಂಭಾವನೆಯನ್ನು ಕೇಳಿದ್ದಾರೆ ಎನ್ನಲಾಗಿದೆ. ವಿಶೇಷವೆಂದರೆ ಇದೇ ಹಾಡಿಗಾಗಿ ಈ ಹಿಂದೆ ಪೂಜಾ ಹೆಗ್ಡೆ ಹಾಗೂ ಬಾಲಿವುಡ್ ನಟಿ ದಿಶಾ ಪಾಟ್ನಿಯ ಹೆಸರು ಕೇಳಿಬಂದಿತ್ತು. ಆದರೆ ಅವರು ಇದಕ್ಕೆ ಒಪ್ಪಿಕೊಂಡಿಲ್ಲ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಈಗ ಅದೇ ಹಾಡಿಗೆ ಚಿತ್ರತಂಡ ನೋರಾ ಅವರನ್ನು ಸಂಪರ್ಕಿಸಿದ್ದು, ನೋರಾ ಅವರ ಸಂಭಾವನೆ ಈಗ ಸದ್ದು ಮಾಡಿದೆ. ಇನ್ನು ನಿರ್ಮಾಪಕರು ಈ ವಿಚಾರದಲ್ಲಿ ಯಾವ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ, ನೋರಾ ಪುಷ್ಪಾ ಸಿನಿಮಾದಲ್ಲಿ ಹೆಜ್ಜೆ ಹಾಕುತ್ತಾರೋ ಅಥವಾ ನೋರಾ ಜಾಗಕ್ಕೆ ಅವರ ಬದಲಾಗಿ ಇನ್ನಾರಾದರೂ ನಟಿ ಅಥವಾ ಡಾನ್ಸರ್ ಬರುತ್ತಾರಾ?? ಸದ್ಯಕ್ಕಂತೂ ಈ ಪ್ರಶ್ನೆಗೆ ಉತ್ತರ ಇಲ್ಲ.

Leave a Comment