ಅಲ್ಲಿ ಯುದ್ಧ, ಇಲ್ಲಿ ಪ್ರೇಮ: ರಷ್ಯಾ ಯುವಕ, ಉಕ್ರೇನ್ ಯುವತಿಗೆ ಭಾರತದಲ್ಲಿ ಮದುವೆ!!

Entertainment Featured-Articles News

ಪ್ರೇಮಕ್ಕೆ ಯಾವುದೇ ರೀತಿಯ ತಡೆ ಗೋಡೆಗಳು ಇರುವುದಿಲ್ಲ. ಪ್ರೇಮಿಸಿದ ಮನಸ್ಸುಗಳು ಒಂದಾಗಲು ಯಾವುದೇ ಪರಿಸ್ಥಿತಿಯನ್ನೇ ಆದರೂ ಎದುರಿಸಲು ಸಿದ್ಧವಾಗಿರುತ್ತವೆ. ನಿಜವಾದ ಪ್ರೇಮಿಗಳು ತಮ್ಮ ಪ್ರೇಮಕ್ಕಾಗಿ ಹೋ ರಾ ಟ ಮಾಡಬೇಕಾಗಿ ಬಂದರೆ ಅದಕ್ಕೂ ಹೆದರುವುದಿಲ್ಲ.‌ ಆದರೆ ಯು ದ್ಧ ದಲ್ಲೇ ಹುಟ್ಟಿದ ಪ್ರೇಮವನ್ನು ದೇಶಗಳ ಗಡಿ ದಾಟಿ ಮದುವೆಯ ಮೂಲಕ ಸಾರ್ಥಕಪಡಿಸಿಕೊಂಡಿದೆ ಇಲ್ಲೊಂದು ಜೋಡಿ. ಅಲ್ಲದೇ ಈ ಮೂಲಕ ಅವರು ಪ್ರೇಮಕ್ಕೆ ಯಾವುದೇ ಗಡಿಗಳು ತಡೆಯನ್ನು ಹಾಕುವುದು ಅಸಾಧ್ಯ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಈ ಜೋಡಿಗೆ ಶುಭಾಶಯಗಳು ಹರಿದು ಬರುತ್ತಿವೆ.

ಒಂದು ಕಡೆ ತಮ್ಮ ತಮ್ಮ ದೇಶಗಳ ನಡುವೆ ಭೀ ಕ ರ ಹೋ ರಾ ಟ ನಡೆಯುವಾಗಲೇ ಈ ಜೋಡಿಯು ಭಾರತದಲ್ಲಿ ಸಪ್ತಪದಿ ತುಳಿದು ವೈವಾಹಿಕ ಜೀವನಕ್ಕೆ ಅಡಿಯಿಟ್ಟು ತಮ್ಮ ಪ್ರೇಮದ ವಿಜಯವನ್ನು ಸಾಧಿಸಿದ್ದಾರೆ. ಪ್ರಸ್ತುತ ಈ ಪ್ರೇಮಿಗಳ ಮದುವೆಯ ವೀಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಾ ಸಾಗಿದೆ. ಹಾಗಾದರೆ ಏನೀ ಅಪರೂಪ ಪ್ರೇಮ ಕಥೆ ಎನ್ನುವುದನ್ನು ತಿಳಿಯೋಣ ಬನ್ನಿ. ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಯು ದ್ಧ ದ ವಿಚಾರ ಈಗಾಗಲೇ ಎಲ್ಲರಿಗೂ ತಿಳಿದೇ ಇದೆ.

ರಷ್ಯಾಕ್ಕೆ ಸೇರಿದ ಸೆರ್ಗಿ ನೊವಿಕೊವ್ , ಉಕ್ರೇನ್ ಗೆ ಸೇರಿದ ಎಲೆನಾ ಬ್ರೊಮೆಕಾ ಇಬ್ಬರೂ ಸಹಾ ಕಳೆದ ಕೆಲವು ದಿನಗಳಿಂದಲೂ ಪ್ರೇಮ ಪಾಶದಲ್ಲಿ ಸಿಲುಕಿದ್ದರು. ಆದರೆ ರಷ್ಯಾ ಮತ್ತು ಉಕ್ರೇನ್ ನಡುವೆ ಯು ದ್ಧ ಆರಂಭವಾದ ಹಿನ್ನೆಲೆಯಲ್ಲಿ ಈ ಜೋಡಿ, ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯನ್ನು ಮಾಡಿಕೊಂಡಿದ್ದಾರೆ. ಇವರಿಬ್ಬರು ಕಳೆದ ಒಂದು ವರ್ಷದಿಂದಲೂ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನೆಲೆಸಿದ್ದಾರೆ ಎನ್ನಲಾಗಿದ್ದು, ಇವರ ವಿವಾಹದ ವಿಚಾರ ಈಗ ಸುದ್ದಿಯಾಗಿದೆ.

ಹಿಮಾಚಲ ಪ್ರದೇಶಕ್ಕೆ ಸೇರಿದ ಶರ್ಮಾ ಮತ್ತು ಅವರ ಕುಟುಂಬದ ಸದಸ್ಯರು ಇವರಿಬ್ಬರ ಮದುವೆಯ ಜವಾಬ್ದಾರಿ ವಹಿಸಿಕೊಂಡು ಕನ್ಯಾದಾನ ಮೊದಲಾದ ಶಾಸ್ತ್ರ ಸಂಪ್ರದಾಯಗಳನ್ನು ಪಾಲಿಸಿದ್ದಾರೆ. ಅಲ್ಲದೇ ದಿವ್ಯ ಆಶ್ರಮ ಪಂಡಿತರಾದ ಸಂದೀಪ್ ಶರ್ಮಾ ಅವರು ತಾವು ಇವರಿಗೆ ಸನಾತನ ಸಂಪ್ರದಾಯ ಹಾಗೂ ಮದುವೆಯ ಪ್ರಾಮುಖ್ಯತೆಯನ್ನು ವಿವರವಾಗಿ ತಿಳಿಸಿಕೊಟ್ಟಿರುವುದಾಗಿ ಹೇಳಿದ್ದಾರೆ. ಇವರ ವಿವಾಹದ ವೀಡಿಯೋ ಇನ್ಸ್ಟಾಗ್ರಾಂ ನಲ್ಲಿ ವೈರಲ್ ಆಗಿದ್ದು, ಅನೇಕರು ಈ ಜೋಡಿಯ ವೈವಾಹಿಕ ಜೀವನಕ್ಕೆ ಶುಭ ಹಾರೈಸಿದ್ದಾರೆ.

Leave a Reply

Your email address will not be published. Required fields are marked *