ಅರ್ಥಪೂರ್ಣವಾಗಿ ಕ್ರಿಸ್ಮಸ್ ಆಚರಿಸಿದ ನಟ ಕಿರಣ್ ರಾಜ್ ಮಾಡಿದ ಕೆಲಸ ಗೊತ್ತಾದ್ರೆ ಗ್ರೇಟ್ ಅಂತೀರಾ!!

0 8

ಕ್ರಿಸ್ಮಸ್ ಹಬ್ಬವನ್ನು ವಿಶ್ವದಾದ್ಯಂತ ಬಹಳ ಸಂಭ್ರಮ, ಸಡಗರದಿಂದ ಆಚರಣೆ ಮಾಡಲಾಗುತ್ತದೆ. ಈ ಬಾರಿಯು ಎಲ್ಲೆಡೆ ಬಹಳ ಖುಷಿಯಿಂದ ಕ್ರಿಸ್ಮಸ್ ಹಬವನ್ನು ಎಲ್ಲೆಡೆ ಆಚರಿಸಲಾಗಿದೆ. ಇನ್ನು ಸಿನಿಮಾ ಮತ್ತು ಕಿರುತೆರೆಯ ಸೆಲೆಬ್ರಿಟಿಗಳಿಗೆ ಕ್ರಿಸ್ಮಸ್ ದೊಡ್ಡ ಖುಷಿಯನ್ನೇ ತಂದಿದ್ದು ಅವರು ಸಹಾ ಕ್ರಿಸ್ಮಸ್ ಅನ್ನು ಬಹಳ ಜೋರಾಗಿಯೇ ಆಚರಣೆ ಮಾಡಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ತಾವು ಕ್ರಿಸ್ಮಸ್ ಆಚರಣೆ ಮಾಡಿದ ಸಂಭ್ರಮವನ್ನು ಹಂಚಿಕೊಂಡು ಖುಷಿ ಪಡುತ್ತಿದ್ದಾರೆ. ಕೆಲವು ಸೆಲೆಬ್ರಿಟಿಗಳು ಬಹಳ ಅದ್ದೂರಿಯಾಗಿಯೇ ಕ್ರಿಸ್ಮಸ್ ಅನ್ನು ಸಂಭ್ರಮಿಸಿದ್ದಾರೆ.

ಕನ್ನಡದ ತಾರೆಯರು ಕೂಡಾ ಕ್ರಿಸ್ಮಸ್ ಅನ್ನು ಬಹಳ ಸಡಗರದಿಂದ ಆಚರಸಿದ್ದಾರೆ. ಕನ್ನಡತಿ ಸೀರಿಯಲ್ ಖ್ಯಾತಿಯ ನಟ ಕಿರಣ್ ರಾಜ್ ಅವರು ಸಹಾ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಹಾಗೂ ಬಹಳ ಅರ್ಥಪೂರ್ಣವಾಗಿ ಆಚರಣೆ ಮಾಡುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಕಿರಣ್ ರಾಜ್ ಅವರು ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಮಾಡಿರುವ ಒಂದು ಅರ್ಥಪೂರ್ಣವಾದ ಕೆಲಸವೇನೆಂದು ತಿಳಿದರೆ ನೀವು ಕೂಡಾ ಖಂಡಿತ ಮೆಚ್ಚುಗೆಯನ್ನು ನೀಡುವಿರಿ.

ಹೌದು ನಟ ಕಿರಣ್ ರಾಜ್ ಅವರು ಕ್ರಿಸ್ಮಸ್ ಹಿನ್ನೆಲೆಯಲ್ಲಿ ಬಡ ಮಕ್ಕಳಿಗೆ ಪುಸ್ತಕಗಳನ್ನು ಹಂಚುವ ಮೂಲಕ ಹಬ್ಬದ ಆಚರಣೆಯನ್ನು ಇನ್ನಷ್ಟು ಅರ್ಥಪೂರ್ಣವನ್ನಾಗಿ ಮಾಡಿದ್ದಾರೆ. ಕ್ರಿಸ್ಮಸ್ ದಿನ ಅವರು ಬೆಂಗಳೂರಿನ ಕೆಲವು ಸ್ಥಳಗಳಿಗೆ ತೆರಳಿ ಬಡ ಮಕ್ಕಳನ್ನು ಭೇಟಿ ಮಾಡಿ, ಅವರಿಗೆ ಅಗತ್ಯ ಇರುವ ಪುಸ್ತಕಗಳನ್ನು ಹಂಚಿ ಬಂದಿದ್ದಾರೆ. ನಟ ಕಿರಣ್ ರಾಜ್ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ, ಅವರ ತಮ್ಮ ಗಳಿಕೆಯಲ್ಲಿ ಸ್ವಲ್ಪ ಜನ ಸೇವೆಗಾಗಿಯೇ ಮೀಸಲಿಟ್ಟಿದ್ದಾರೆ ಎನ್ನುವುದು ಕೂಡಾ ನಿಜ.

Leave A Reply

Your email address will not be published.