ಅರೆ ಇದೇನಾಯ್ತು? ರಾಧಿಕಾ ಕುಮಾರಸ್ವಾಮಿ ಭರ್ಜರಿ ಡ್ಯಾನ್ಸ್ ಮಾಡಿ ಕಾಲು ಜಾರಿ ಬಿದ್ದೇ ಬಿಟ್ರು

Entertainment Featured-Articles Movies News Viral Video

ಸ್ಯಾಂಡಲ್ವುಡ್ ನ ಸ್ಟಾರ್ ನಟಿಯರಲ್ಲಿ ಒಬ್ಬರು ರಾಧಿಕಾ ಕುಮಾರಸ್ವಾಮಿ ಅವರು. ಸಿನಿಮಾ ರಂಗಕ್ಕೆ ಎಂಟ್ರಿ ನೀಡಿ ಎರಡು ದಶಕಗಳು ಕಳೆದರೂ ಸಹಾ ಇಂದಿಗೂ ತನ್ನ ಅಂದ, ಗ್ಲಾಮರ್ ಹಾಗೂ ಹಾಟ್ ಲುಕ್ ಗೆ ಈ ನಟಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದ್ದಾರೆ. ಇನ್ನು ಅಂದಕ್ಕೆ ತಕ್ಕ ನಟನೆಯಿಂದ ಅಸಂಖ್ಯಾತ ಅಭಿಮಾನಿಗಳನ್ನು ಸಹಾ ಪಡೆದಿದ್ದಾರೆ‌. ನಟಿ ರಾಧಿಕಾ ಕುಮಾರಸ್ವಾಮಿ ಅವರು ಕನ್ನಡದಲ್ಲಿ ಮಾತ್ರವೇ ತೆಲುಗಿನಲ್ಲಿ ಸಹಾ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದಾರೆ‌. ಕನ್ನಡದಲ್ಲಿ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ದಮಯಂತಿ ಸಿನಿಮಾದಲ್ಲಿ.

ದಮಯಂತಿ ನಂತರ ಯಾವುದೇ ಹೊಸ ಸಿನಿಮಾದ ಘೋಷಣೆ ಆಗಿಲ್ಲ. ಸಿನಿಮಾಗಳಿಂದ ದೂರವೇ ಉಳಿದಿದ್ದರೂ ಸಹಾ ನಟಿ ರಾಧಿಕಾ ಕುಮಾರಸ್ವಾಮಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದು, ಅಲ್ಲಿ ತಮ್ಮ ಅಂದವಾದ ಫೋಟೋ ಗಳು ಮತ್ತು ವಿಡಿಯೋ ಗಳನ್ನು ಶೇರ್ ಮಾಡಿಕೊಂಡು ಅಭಿಮಾನಿಗಳಿಗೆ ಖುಷಿಯನ್ನು ನೀಡುವ ನಟಿ, ಆಗಾಗ ಸೂಪರ್ ಹಿಟ್ ಹಾಡುಗಳಿಗೆ ಅದ್ಭುತವಾದ ಸ್ಟೆಪ್ಪುಗಳನ್ನು ಹಾಕಿ ಡ್ಯಾನ್ಸ್ ಪ್ರಿಯರು ಮೆಚ್ಚಿ, ಕುಣಿಯುವಂತೆ ಮಾಡುತ್ತಾರೆ. ಅವರ ಡ್ಯಾನ್ಸ್ ವೀಡಿಯೋಗಳು ಕೂಡಾ ಬಹಳ ಬೇಗ ವೈರಲ್ ಆಗಿ ಬಿಡುತ್ತವೆ.

ನಟಿ ರಾಧಿಕಾ ಕುಮಾರಸ್ವಾಮಿ ಅವರು ಈ ಹಿಂದೆ ಕನ್ನಡ ಕಿರುತೆರೆಯ ಒಂದು ಜನಪ್ರಿಯ ಡ್ಯಾನ್ಸ್ ರಿಯಾಲಿಟಿ ಶೋ ಗೆ ಜಡ್ಜ್ ಸಹಾ ಆಗಿ ಜನರ ಗಮನ ಸೆಳೆದಿದ್ದರು. ಆ ಮೂಲಕ ಅವರು ಕನ್ನಡ ಕಿರುತೆರೆಯ ಪ್ರೇಕ್ಷಕರ ಮೆಚ್ಚುಗೆಯನ್ನು ಸಹಾ ಪಡೆದುಕೊಂಡಿದ್ದರು. ಪ್ರಸ್ತುತ ಸಹಾ ನಟಿಯ ಮೇಲೆ ಅಭಿಮಾನಿಗಳ ಕ್ರೇಜ್ ಹೇಗಿದೆ ಎನ್ನುವುದಕ್ಕೆ ಅವರ ಫೋಟೋಗಳು ಮತ್ತು ವೀಡಿಯೋಗಳು ವೈರಲ್ ಆಗಿ ಬರುವ ಲೈಕ್ ಗಳು ಹಾಗೂ ಸಿಗುವ ವೀಕ್ಷಣೆಗಳು ಸಾಕ್ಷಿಯಾಗಿದೆ. ನಟಿ ಮಾಡುವ ಡ್ಯಾನ್ಸ್ ಬಗ್ಗೆ ಅಂತೂ ಎರಡು ಮಾತಿಲ್ಲ.

ಇದೀಗ ರಾಧಿಕಾ ಕುಮಾರಸ್ವಾಮಿ ಅವರ ಮತ್ತೊಂದು ಡ್ಯಾನ್ಸ್ ವೀಡಿಯೋ ವೈರಲ್ ಆಗುತ್ತಾ ಸಾಗಿದೆ. ಎಂದಿನಂತೆ ರಾಧಿಕಾ ಕುಮಾರಸ್ವಾಮಿ ಅವರ ಡ್ಯಾನ್ಸ್ ಮಾಸ್ಟರ್ ಜೊತೆಗೆ ಭರ್ಜರಿ ಸ್ಟೆಪ್ಪುಗಳನ್ನು ಹಾಕಿದ್ದಾರೆ. ಡ್ಯಾನ್ಸ್ ಮಾಸ್ಟರ್ ಜೊತೆಗೆ ಅದ್ಭುತವಾದ ಸಂಗೀತಕ್ಕೆ ಸಿಕ್ಕಾಪಟ್ಟೆ ಜೋಶ್ ನಿಂದ ಮತ್ತು ಎನರ್ಜಿಯಿಂದ ಕುಣಿದಿದ್ದಾರೆ. ಆದರೆ ಎಲ್ಲಾ ಸರಿಯಾಗಿ ನಡೆಯುವಾಗಲೇ ಕೊನೆಯಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ. ಇದನ್ನು ನೋಡಿ ಅವರ ಅಭಿಮಾನಿಗಳು ಶಾ ಕ್ ಆಗಿದ್ದು, ನಟಿಗೆ ಹುಷಾರಾಗಿರಿ ಮೇಡಂ ಎಂದಿದ್ದಾರೆ.

Leave a Reply

Your email address will not be published.