ಅರೆ ಅಣ್ಣಾ, ಇದು ಬೈಕ್ ಅಲ್ಲ 2 ಚಕ್ರದ ಕಾರು: ಟೆಸ್ಟ್ ಮಾಡಿದ ನಂತರ ಖಂಡಿತ ನಂಬಿಕೆ ಬರುತ್ತೆ!!

0 3

ಅನೇಕ ಮಂದಿಗೆ ಹೊಸ ಹೊಸ ವೈಶಿಷ್ಟ್ಯಗಳನ್ನು ಹೊಂದಿರುವ ಬೈಕುಗಳನ್ನು ಕೊಳ್ಳುವ ಆಸಕ್ತಿ ಹೆಚ್ಚಾಗಿರುತ್ತದೆ. ಮಾರುಕಟ್ಟೆಯಲ್ಲಿ ಹೊಸ ಬೈಕೊಂಡು ಬಂದಿದೆ ಎಂದರೆ ಕೂಡಲೇ, ಅದರ ವೈಶಿಷ್ಟ್ಯಗಳೇನು?? ಅದರಲ್ಲಿನ ವಿಶೇಷತೆಗಳು ಏನು?? ಎಂದು ಅನೇಕರು ಗಮನಹರಿಸುತ್ತಾರೆ. ವಿಶೇಷ ಎನಿಸುವಂತಹ ಫೀಚರ್ ಗಳಿದ್ದರೆ ಅಂತಹ ಬೈಕುಗಳನ್ನು ಖರೀದಿ ಮಾಡಲು ಮುಂದಾಗುತ್ತಾರೆ. ಇನ್ನು ಸೌಲಭ್ಯಗಳ ವಿಚಾರಕ್ಕೆ ಬಂದಾಗ ನಿಮ್ಮ ಮೋಟಾರ್ ಬೈಕ್ ನಲ್ಲೂ ಕೂಡಾ ಮ್ಯೂಸಿಕ್ ಸಿಸ್ಟಮ್, ವಿಂಡ್ ಸ್ಕ್ರೀನ್ ಹಾಗೂ ಮೇಲ್ಚಾವಣಿ ಕೂಡ ಇದ್ದರೆ ಹೇಗಿರುತ್ತದೆ ಎಂದು ಆಗಾಗ ಯೋಚನೆ ಮಾಡಿರಬಹುದು.‌

ಇಲ್ಲಿ ವಿಶೇಷ ಎಂದರೆ, ಇಂತಹ ಸೌಲಭ್ಯಗಳನ್ನು ಉಳ್ಳ ಬೈಕ್ ಈಗಾಗಲೇ ಕಳೆದ ಕೆಲವು ವರ್ಷಗಳಿಂದಲೂ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಬೈಕ್ ನ ಹೆಸರು Adiva AD 200 ಎಂಬುದಾಗಿದೆ. ವಾಹನದ ವಿಚಾರ ಬಂದಾಗ, ಅದು ಯಾವುದೇ ಆಗಿರಲಿ ಅಂದರೆ ಅದು ದ್ವಿಚಕ್ರ ವಾಹನವೇ ಆಗಿರಲಿ ಅಥವಾ ನಾಲ್ಕು ಚಕ್ರದ ವಾಹನವೇ ಆಗಿರಲಿ ಮೊದಲು ಎಲ್ಲರೂ ಗಮನಿಸುವ ಅಥವಾ ತಿಳಿಯಲು ಬಯಸುವ ವಿಷಯ ಎಂದರೆ ಅದು ಆ ವಾಹನದ ಎಂಜಿನ್ ಆಗಿರುತ್ತದೆ. ಅದರ ಸಾಮರ್ಥ್ಯ ಎಷ್ಟು ಎನ್ನುವುದಾಗಿರುತ್ತದೆ.

ಈಗ ನಾವು ಹೇಳಲು ಹೊರಟಿರುವ ಸೂಪರ್ ಬೈಕ್
Adiva AD 200 ನಲ್ಲಿ 171 ಸಿಸಿ ಯ ಸಿಂಗಲ್ ಸಿಲಿಂಡರ್ 4stroke ಎಂಜಿನ್ ಇದೆ. ಇದು 15.8 ಎಚ್ಪಿ ಪವರ್ ನ 15 NM ನ ಪೀಕ್ ಟಾರ್ಕ್ ಅನ್ನು ಜನರೇಟ್ ಮಾಡುತ್ತದೆ. ಲಿಕ್ವಿಡ್ ಕೂಲ್ಡ್ ಎಂಜಿನ್ ನಿಂದಾಗಿ ಕಾರಿನಂತಹ ಈ ಬೈಕಿನ ತೂಕ 172 ಕಿಲೋಗ್ರಾಂ ಗಳಾಗಿದೆ. ಈ ದ್ವಿಚಕ್ರವಾಹನಕ್ಕೆ ಕಂಪನಿಯ ಕಡೆಯಿಂದ ನೀಡಲಾಗಿರುವ ಮೇಲ್ಛಾವಣಿಯನ್ನು, ಅವಶ್ಯಕತೆ ಇಲ್ಲದೆ ಇರುವಾಗ ಫೋಲ್ಡ್ ಮಾಡಿ ಡಿಕ್ಕಿಯಲ್ಲಿ ಇಡಲು ಸಾಧ್ಯವಿದೆ.

ಬೈಕ್ ನ ಹ್ಯಾಂಡಲ್ ಬಾರ್ ಕೆಳಗೆ ಕಾರಿನ ರೀತಿಯ ಡ್ಯಾಶ್ ಬೋರ್ಡ್ ಅಳವಡಿಸಲಾಗಿದೆ. ಮ್ಯೂಸಿಕ್ ಸಿಸ್ಟಮ್ ಗಾಗಿ ಸ್ಪೇಸ್ , ಎರಡು ಕಡೆಯಲ್ಲಿ ಎಸಿ ವೆಂಟ್ರೆಸ್ ಮತ್ತು ಸ್ಪೀಕರ್ ಗಳು ಸಹಾ ಇವೆ. ಈ ಕಾರಿನಂತಹ ಬೈಕ್ ನಲ್ಲಿ ಹಿಂದೆ ಸವಾರಿ ಮಾಡುವವರಿಗಾಗಿ, ಕ್ಯಾಪ್ಟನ್ ಸೀಟ್ ಅಳವಡಿಸಲಾಗಿದ್ದು, ಅದರ ಜೊತೆಗೆ ಹೆಡ್ ರೆಸ್ಟ್ ಮತ್ತು ಆರ್ಮ್ ರೆಸ್ಟ್ ಗಳನ್ನು ಅಳವಡಿಸಲಾಗಿದೆ. ಅಲ್ಲದೆ ಇದರಲ್ಲಿ ಕಾರಿನ ಮಾದರಿಯಲ್ಲಿ ಸಿಗರೇಟ್ ಲೈಟರ್, ವಿಂಡ್ ಸ್ಕ್ರೀನ್ ಹಾಗೂ ಅದನ್ನು ಸ್ವಚ್ಛ ಮಾಡಲು ವೈಪರ್ ಗಳನ್ನು ಸಹ ನೀಡಲಾಗಿದೆ.

ಒಟ್ಟಾರೆ ಈ ವಿದೇಶಿ ಬೈಕ್ ನಲ್ಲಿ ಕಾರಿನಲ್ಲಿರುವಂತಹ ಬಹುತೇಕ ಎಲ್ಲಾ ಸೌಲಭ್ಯಗಳು ಲಭ್ಯವಿದೆ. Adiva ತನ್ನ ಬೈಕುಗಳ ಶ್ರೇಣಿಯಲ್ಲಿ ಅಪ್ಡೇಟ್ ಆಗಿರುವ Adiva AD 200 ಮಾರುಕಟ್ಟೆಗೆ ಪರಿಚಯಿಸಿದೆ. ಇದಕ್ಕೆ ಮುಂದೆ ಎರಡು ಚಕ್ರಗಳು ಹಿಂದೆ ಒಂದು ಚಕ್ರ ಅಳವಡಿಸಲಾಗಿದೆ. ಭಾರೀ ತೂಕವಿರುವ ಈ ಬೈಕ್ ರಸ್ತೆಯ ಮೇಲೆ ದೃಢವಾದ ಹಿಡಿತವನ್ನು ಹೊಂದಲು ಇವು ನೆರವಾಗುತ್ತವೆ. ಭಾರತ ಮಾರುಕಟ್ಟೆಯಲ್ಲಿ ಈ ಬೈಕ್ ಲಭ್ಯವಿಲ್ಲದ ಕಾರಣ, ಈ ಬೈಕ್ ಖರೀದಿ ಮಾಡಲು ಬಯಸುವುದಾದರೆ ಆಮದು ಮಾಡಿಕೊಳ್ಳಬೇಕಾಗಿದೆ. ಯೂರೋಪ್ ಮತ್ತು ಜಪಾನಿನಲ್ಲಿ ಇದು ಬಹಳಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ.

Leave A Reply

Your email address will not be published.