ಅರೆಸ್ಟ್ ಆಗೋ ಭೀತಿಗೆ ಪೋಲಿಸರ ಕೈಗೆ ಸಿಗದೆ ಎಸ್ಕೇಪ್ ಆದ್ರಾ ನಟಿ ಶ್ರೀಲೀಲಾ ತಾಯಿ? ತೀವ್ರ ಹುಡುಕಾಟದಲ್ಲಿ ಪೋಲಿಸರು

Entertainment Featured-Articles Movies News

ಅಲಯನ್ಸ್ ವಿವಿಯಲ್ಲಿ ನಡೆದಂತಹ ಗ ಲಾ ಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿರುವ ಯುವ ನಟಿ ಶ್ರೀಲೀಲಾ ಅವರ ತಾಯಿ ಸ್ವರ್ಣಲತಾ ಅವರನ್ನು ಬಂ ಧ ನ ಮಾಡಲು ಆನೇಕಲ್ ಪೊಲೀಸರು ಸಿದ್ಧತೆಯನ್ನು ನಡೆಸಿಕೊಂಡಿದ್ದರು. ಆದರೆ ಈ ವಿಷಯ ತಿಳಿಯುತ್ತಿದ್ದಂತೆ ಸ್ವರ್ಣಲತಾ ಎಸ್ಕೇಪ್ ಆಗಿದ್ದಾರೆ ಎನ್ನುವ ವಿಚಾರವೊಂದು ಈಗ ಸುದ್ದಿಯಾಗಿದೆ. ಕೋರಮಂಗಲದಲ್ಲಿರುವ ಸ್ವರ್ಣಲತಾ ಅವರ ಮನೆಗೆ ಬೀಗ ಹಾಕಲಾಗಿದ್ದು, ಅವರ ಫೋನ್ ಕೂಡಾ ಸ್ವಿಚ್ ಆಫ್ ಆಗಿದೆ ಎಂದು ತಿಳಿದು ಬಂದಿರುವುದು ಮಾತ್ರವಲ್ಲದೇ, ಸ್ವರ್ಣಲತಾ ಅವರು ಕೇರಳಕ್ಕೆ ಹಾರಿದ್ದಾರೆ ಎನ್ನುವ ವಿಚಾರ ಈಗ ಸುದ್ದಿ ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಯಾಗಿ ಹರಿದಾಡಿದೆ.

ತಮಗೆ ಜಾಮೀನು ಸಿಗುವವರೆಗೂ ಪೊಲೀಸರ ಕೈಗೆ ಸಿಗಬಾರದು ಎನ್ನುವ ಕಾರಣದಿಂದ ಸ್ವರ್ಣಲತಾ ಕೇರಳಕ್ಕೆ ಹಾರಿದ್ದಾರೆ ಎಂದು ಹೇಳಲಾಗುತ್ತಿದೆ. ಆನೇಕಲ್ ಪೊಲೀಸರು ಸ್ವರ್ಣಲತಾ ಅವರನ್ನು ಬಂಧಿಸುವ ಸಲುವಾಗಿ ತ್ರೀವ್ರವಾಗಿ ಶೋಧವನ್ನು ನಡೆಸಿದ್ದಾರೆ. ತನ್ನನ್ನು ಬಂಧನ ಮಾಡದಂತೆ ಪ್ರಭಾವಿ ಸಚಿವರೊಬ್ಬರ ಕಡೆಯಿಂದ ಸ್ವರ್ಣಲತಾ ಅವರು ಪೊಲೀಸರ ಮೇಲೆ ಒತ್ತಡವನ್ನು ಹೇರಿದ್ದಾರೆ ಎನ್ನುವ ಮಾತು ಕೂಡಾ ಕೇಳಿಬಂದಿದೆ. ಈ ವಿಚಾರವಾಗಿ ಸಚಿವರು ಹಲವು ಬಾರಿ ಪೊಲೀಸರಿಗೆ ಕರೆಯನ್ನು ಸಹಾ ಮಾಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಖ್ಯಾತ ರಾಜಕಾರಣಿಯೊಬ್ಬರಿಗೆ ಅಲಯನ್ಸ್ ವಿಶ್ವವಿದ್ಯಾಲಯವನ್ನು ಮಾರಾಟ ಮಾಡಿಸಲು ಸ್ವರ್ಣಲತಾ ಮುಂದಾಗಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಅವರ ಮೇಲೆ ದೂರು ದಾಖಲು ಮಾಡಲಾಗಿದೆ. ಪ್ರಕರಣದ ಹಿಂದೆ ನೂರಾರು ಕೋಟಿಗಳ ಡೀಲ್ ಇದೆ ಎಂದು ಹೇಳಲಾಗುತ್ತಿದೆ. ಮಧುಕರ್ ಅಂಗೂರ್ ಎನ್ನುವವರ ಮೂಲಕ ಯುನಿವರ್ಸಿಟಿ ಮಾರಾಟಮಾಡುವ ಡೀಲ್ ಅನ್ನು ಸ್ವರ್ಣಲತಾ ಅವರು ಕುದುರಿಸಿದ್ದರು ಎಂದು ಹೇಳಲಾಗುತ್ತಿದೆ. ಮಧುಕರ್ ಹಾಗೂ ಸ್ವರ್ಣಲತಾ ಅವರು ಗೂಂ ಡಾಗಳ ಜೊತೆಗೆ ವಿಶ್ವವಿದ್ಯಾಲಯಕ್ಕೆ ನುಗ್ಗಿ ಅಲ್ಲಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಸೆಪ್ಟೆಂಬರ್ 10ರಂದು ಸ್ವರ್ಣಲತಾ ಬಂದೂಕು ಹಿಡಿದ ಗೂಂ ಡಾಗಳ ಜೊತೆಗೆ ವಿಶ್ವವಿದ್ಯಾಲಯದೊಳಗೆ ನುಗ್ಗಿದರು ಎನ್ನುವ ಕಾರಣಕ್ಕೆ, ವಿಶ್ವವಿದ್ಯಾಲಯದ ರಿಜಿಸ್ಟಾರ್ ಡಾಕ್ಟರ್ ನಿವೇದಿತಾ ಮಿಶ್ರಾ ಅವರು ಆನೇಕಲ್ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು. ಸ್ವರ್ಣಲತಾ ಹಾಗೂ ಮಧುಕರ್ ಗೂಂ ಡಾಗಳ ಜೊತೆ ವಿಶ್ವವಿದ್ಯಾಲಯದ ಆವರಣಕ್ಕೆ ಬಂದಿದ್ದರು. ಗೂಂ ಡಾ ಗಳ ಕೈಯಲ್ಲಿ ಬಂದೂಕು ಇತ್ತು, ಅವರು ವಿಶ್ವವಿದ್ಯಾಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಹೆದರಿಸುವಂತಹ ಕೆಲಸವನ್ನು ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ. ಪೊಲೀಸರು ಮಧುಕರ್ ಅವರನ್ನು ಈಗಾಗಲೇ ಬಂಧಿಸಿದ್ದು ಸ್ವರ್ಣಲತಾ ಅವರ ಹುಡುಕಾಟದಲ್ಲಿ ತೊಡಗಿ ಕೊಂಡಿದ್ದಾರೆ.

Leave a Reply

Your email address will not be published.