ಅರವಿಂದ್ ನನ್ನ ಜಾತಿ ಅಂತ ಅವರು ಸೋತ್ರಾ: ವಾಹಿನಿ ಹೆಡ್ ಪರಮೇಶ್ವರ ಗುಂಡ್ಕಲ್ ಅವರ ಪ್ರಶ್ನೆ

Entertainment Featured-Articles News
71 Views

ಬಿಗ್ ಬಾಸ್ ಸೀಸನ್ ಎಂಟು ಮುಗಿದಾಯಿತು. ಕೊರೊನಾ ಅಡ್ಡಿ ಆತಂಕಗಳ ನಡುವೆ ಈ ಬಾರಿ ಬಿಗ್ ಬಾಸ್ ಎಲ್ಲಾ ಸವಾಲುಗಳನ್ನು ನಿಭಾಯಿಸಿ ಯಶಸ್ವಿಯಾಗಿ ತನ್ನ ಎಂಟನೇ ಸೀಸನ್ ಮುಗಿಸಿದ್ದು, ಇದೀಗ ಮಿನಿ ಬಿಗ್ ಬಾಸ್ ಪ್ರಸಾರ ಆಗುತ್ತಾ ಜನರನ್ನು ರಂಜಿಸುತ್ತಿದೆ. ಇನ್ನು ಮಂಜು ಪಾವಗಡ ಸೀಸನ್ ಎಂಟರ ವಿಜೇತರಾಗಿ ಟ್ರೋಫಿ ಹಾಗೂ ಬಹುಮಾನದ ಹಣವನ್ನು ತನ್ನದಾಗಿಸಿಕೊಂಡಿದ್ದಾರೆ. ಹೀಗೆ ಸೀಸನ್ ಏನೋ ಮುಗಿಯಿತು ಆದರೆ ಬಿಗ್ ಬಾಸ್ ಸೀಸನ್ ಎಂಟರ ಕುರಿತಾದ ಚರ್ಚೆಗಳು ಮಾತ್ರ ಇನ್ನೂ ನಡೆಯುತ್ತಿವೆ. ಒಂದು ಸಿಹಿಯ ಜೊತೆ ಮತ್ತೊಂದು ಕಹಿ ಎನ್ನುವ ಹಾಗೆ ಎಲ್ಲಿಂದಲೋ ಒಂದು ಕಡೆ ಜಾತಿ ಎನ್ನುವ ಅ ಪ ವಾದ ದ ಆ ರೋ ಪ ಸಹಾ ಕೇಳಿ ಬಂದು ಸಾಕಷ್ಟು ಚರ್ಚೆಗೆ ಕಾರಣವಾಗಿರುವುದು ಅಚ್ಚರಿಯನ್ನು ಮೂಡಿಸಿದೆ.

ಹೌದು ಬಿಗ್ ಬಾಸ್ ಸೀಸನ್ ಎಂಟರಲ್ಲಿ ಎಲ್ಲರ ನಿರೀಕ್ಷೆಯಂತೆ ಜನರನ್ನು ತನ್ನ ಹಾಸ್ಯದ ಡೈಲಾಗ್ ಗಳ ಮೂಲಕ ರಂಜಿಸುತ್ತಾ ಗ್ರಾಂಡ್ ಫಿನಾಲೆಗೆ ಬಂದ ಮಂಜು ಪಾವಗಡ ಒಂದು ಕಡೆ, ಕ್ರೀಡಾ ಕ್ಷೇತ್ರದಿಂದ ಬಂದು ತನ್ನದೇ ಆದ ವರ್ಚಸ್ಸಿನ ಮೂಲಕ ಗ್ರಾಂಡ್ ಫಿನಾಲೆ ತಲುಪಿದ ಅರವಿಂದ್ ಕೆಪಿ ಇನ್ನೊಂದು ಕಡೆ ಇದ್ದರು. ಇದೆಲ್ಲವುಗಳ ನಡುವೆ ಜನರು ನೀಡಿದ ಓಟುಗಳ ಆಧಾರದಲ್ಲಿ ಮಂಜು ಪಾವಗಡ ಸೀಸನ್ ನ ವಿನ್ನರ್ ಆಗಿ ಹೊರ ಹೊಮ್ಮಿದರು. ಆದರೆ ಅದಾದ ನಂತರ ಕೇಳಿ ಬಂತು ಒಂದು ಆ ರೋ ಪ ಅದೇನೆಂದರೆ ಮಂಜು ಪಾವಗಡ ಅವರು ಸುದೀಪ್ ಅವರ ಜಾತಿ ಅದಕ್ಕೆ ಅವರನ್ನು ಗೆಲ್ಲಿಸಲಾಯಿತು ಎಂದು‌.

ಜಾತಿ ವಿಷಯ ಚರ್ಚೆಗೆ ಕಾರಣವಾದ ಬೆನ್ನಲ್ಲೇ ಸಂದರ್ಶನ ಒಂದರಲ್ಲಿ ಮಂಜು ಪಾವಗಡ ಅವರನ್ನು ಈ ವಿಚಾರವಾಗಿ ಪ್ರಶ್ನೆ ಮಾಡಿದಾಗ ಅವರು,‌ ನನಗೆ ಇದರ ಬಗ್ಗೆ ಎಲ್ಲಾ ಗೊತ್ತಿಲ್ಲ, ನನಗೂ ಇದಕ್ಕೂ ಸಂಬಂಧವಿಲ್ಲ, ನಾನು ಈ ಬಗ್ಗೆ ಮಾತನಾಡಲು ಬಯಸುವುದಿಲ್ಲ, ಎಲ್ಲದರಲ್ಲೂ ಜಾತಿ ವಿಷಯ ತಂದು ಅಸಹ್ಯ ಮಾಡಬೇಡಿ ಎನ್ನುವ ಮಾತುಗಳನ್ನು ಹೇಳಿದ್ದರು. ಈಗ ಇದಾದ ನಂತರ ಮಾದ್ಯಮ ಒಂದರ ಸಂದರ್ಶನದಲ್ಲಿ ವಾಹಿನಿಯ ಹೆಡ್ ಪರಮೇಶ್ವರ ಗುಂಡ್ಕಲ್ ಅವರನ್ನು ಸಹಾ ಈ ವಿಚಾರವಾಗಿ ಪ್ರಶ್ನೆ ಮಾಡಲಾಗಿದ್ದು, ಅವರು ಸಹಾ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಪರಮೇಶ್ವರ್ ಗುಂಡ್ಕಲ್ ಅವರು ಮಾತನಾಡುತ್ತಾ ಶೋ ಬಗ್ಗೆ ಪರ, ವಿ ರೋ‌ ಧ ಮಾತುಗಳು ಕೇಳಿ ಬರೋದು ಮಾಮೂಲಿ, ಸ್ಪರ್ಧಿಗಳ ಅಭಿಮಾನಿಗಳು ಅವರ ಫೇವರಿಟ್ ಸ್ಪರ್ಧಿ ಸೋತಾಗ ಹೀಗೆಲ್ಲಾ ಮಾತಾಡೋದು ಸಹಜ, ಅವುಗಳಿಗೆ ಉತ್ತರ ಕೊಡೋದು ಖಂಡಿತ ಕಷ್ಟ. ಅರವಿಂದ್ ನನ್ನ ಜಾತಿ ಅದಕ್ಕಾಗಿ ಅವರು ಸೋತ್ರಾ ಹಾಗಾದ್ರೆ ಎಂದಿರುವ ಅವರು, ಈಗ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡೋ ಅರವಿಂದ್ ಹಾಗೂ ದಿವ್ಯ ಉರುಡಗ ಅಭಿಮಾನಿಗಳು ಆ ಇಬ್ಬರನ್ನು ಶೋ ಗೆ ಕರೆದುಕೊಂಡ ಬಂದ ನನ್ನ ಮೆಚ್ಚಿಕೊಳ್ಳೋದಿಲ್ಲ. ಅರವಿಂದ್ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ ಎಂದು ಹೇಳುವವರು ಆಗೆಲ್ಲಾ ಎಲ್ಲಿ ಇದ್ರು ಎಂದಿದ್ದಾರೆ.

ಇಂದು ಬಿಗ್ ಬಾಸ್ ಮೂಲಕ ಅರವಿಂದ್ ಅವರು ರಾಜ್ಯದ ಮೂಲೆ ಮೂಲೆ ಗಳ‌ ಜನರಿಗೆ ಪರಿಚಯ ಆಗಿದ್ದಾರೆ. ಯಾರು ನಾವು ಅರವಿಂದ್ ದಿವ್ಯ ಅಭಿಮಾನಿಗಳು ಅಂತಾರೋ ಅವರ ಮುಂದೆ ದಿವ್ಯ ಉರುಡಗ ಮತ್ತು ಅರವಿಂದ್ ಅವರನ್ನು ಕರೆ ತಂದವರು ಯಾರು? ಇದನ್ನೆಲ್ಲ ಅವರು ಆಲೋಚನೆ ಮಾಡೋದಿಲ್ಲ. ಕೇವಲ ಟೀಕೆಗಳನ್ನು ಮಾಡುವುದರಲ್ಲೇ ಇರುತ್ತಾರೆ ಎಂದಿರುವ ಪರಮೇಶ್ವರ ಗುಂಡ್ಕಲ್ ಅವರು ಇವೆಲ್ಲವೂ ಕೂಡಾ ಪ್ರತಿ ಬಾರಿಯೂ ಇರುತ್ತೆ ಎಂದಿದ್ದಾರೆ. ಒಟ್ಟಾರೆ ಬಿಗ್ ಬಾಸ್ ಎನ್ನುವುದು ಆರಂಭದಲ್ಲೂ ಚರ್ಚೆ ಗೆ ಕಾರಣ ಮತ್ತು ಮುಗಿದ ಮೇಲೂ ಚರ್ಚೆಗೆ ಕಾರಣವಾಗುವುದು ನಿಜ.

Leave a Reply

Your email address will not be published. Required fields are marked *