ಅಯ್ಯೋ ವಿಧಿಯೇ ಇದೇನಾಯ್ತು? 25 ರ ಯುವತಿಯನ್ನು ಮದುವೆಯಾಗಿದ್ದ 45 ರ ವ್ಯಕ್ತಿಯ ಜೀವನ ಹೀಗೆ ಅಂತ್ಯವಾಯ್ತಾ?

0 3

ಕಳೆದ ವರ್ಷ ಇಪ್ಪತ್ತೈದರ ಯುವತಿಯೊಬ್ಬಳು, 45 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರನ್ನು ಮದುವೆಯಾದ ವಿಷಯವು ಸುದ್ದಿಯಾದ ನಂತರ, ಅವರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಹರಿದಾಡಿದ್ದವು. ಅಲ್ಲದೇ ಈ ಜೋಡಿಯ ಮದುವೆಯಾ ಕುರಿತಾಗಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು. ಅನಂತರ ಅವರ ಮದುವೆಯ ಹಿಂದಿನ ಅಸಲಿ ಕಾರಣವನ್ನು ತಿಳಿದು ಒಂದಷ್ಟು ಜನರು ಅಪರೂಪದ ಜೋಡಿ ಜೀವನ ಸದಾ ಸುಖವಾಗಿರಲಿ ಎಂದು ಶುಭವನ್ನು ಹಾರೈಸಿದ್ದರು. ಆದರೆ ಈಗ ಇವರ ಕುರಿತಾದ ಒಂದು ಘೋ ರ ವಾದ ಸತ್ಯ ಹೊರ ಬಂದಿದೆ.

25ರ ಯುವತಿಯನ್ನು ಮದುವೆಯಾಗಿದ್ದ ವ್ಯಕ್ತಿಯು ಆ ತ್ಮ ಹ ತ್ಯೆ ಗೆ ಶರಣಾಗಿ ತಮ್ಮ ಜೀವನವನ್ನು ಮುಗಿಸಿದ್ದಾರೆ.. ಹೌದು ಶಂಕರಣ್ಣ ಎನ್ನುವವರು ಜೀವ ಕಳೆದುಕೊಂಡ ದು ರ್ದೈ ವಿಯಾಗಿದ್ದಾರೆ. ಕುಣಿಗಲ್ ತಾಲೂಕಿನ, ಚೌಡನಕುಪ್ಪೆ ಗ್ರಾಮದ ಬಳಿಯಿರುವ ಅಕ್ಕಿಮರಿ ಪಾಳ್ಯದ ಶಂಕರಣ್ಣ ಹಾಗೂ ಮೇಘನಾ ಅವರ ಮದುವೆ ಐದು ತಿಂಗಳ ಹಿಂದೆ ನಡೆದಿತ್ತು. ಈಗ ಮದುವೆಯಾದ ಐದು ತಿಂಗಳಿನ ನಂತರ ಶಂಕರಣ್ಣ ತನ್ನ ಜೀವನ ಯಾತ್ರೆಯನ್ನೇ ಮುಗಿಸಿದ್ದಾರೆ. ಅವರು ಆ ತ್ಮ ಹ ತ್ಯೆ ಗೆ ಶರಣಾಗಿದ್ದಾರೆ.

ಕಳೆದ ಮೂರ್ನಾಲ್ಕು ದಿನಗಳಿಂದಲೂ ಸಹ ಗಂಡ-ಹೆಂಡತಿಯ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದ್ದು, ಸೋಮವಾರ ಶಂಕರಣ್ಣ ಅವರು ಕೋಪದಿಂದ ಮನೆ ಬಿಟ್ಟು ಹೊರಗೆ ಬಂದಿದ್ದರು ಎನ್ನಲಾಗಿದೆಮ ಹೀಗೆ ಮನೆಯಿಂದ ಹೊರಬಂದ ಅವರು ಅಕ್ಕಿಮರಿ ಪಾಳ್ಯದ ತಮ್ಮ ತೋಟದಲ್ಲಿದ್ದ ಮರವೊಂದಕ್ಕೆ ನೇ ಣು ಬಿಗಿದುಕೊಂಡು ಜೀವ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. 2021ರಲ್ಲಿ ಮೇಘನಾ ಹಾಗೂ ಶಂಕರಣ್ಣ ಅವರ ಜೋಡಿ ವೈವಾಹಿಕ ಜೀವನಕ್ಕೆ ಅಡಿಯಿಟ್ಟಿದ್ದರು.

ಇವರ ಮದುವೆಯ ಫೋಟೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಸದ್ದು ಮಾಡಿದ್ದವು. ಸಂತೆಮಾವತ್ತೂರು ಗ್ರಾಮದ ಮೇಘನಾ ಅವರಿಗೆ ಹಿಂದೆ ಮದುವೆಯಾಗಿತ್ತು ಎನ್ನಲಾಗಿದೆ. ಆದರೆ ಎರಡು ವರ್ಷಗಳ ಹಿಂದೆ ಅವರ ಪತಿ ಕಾಣೆಯಾಗಿದ್ದ ರಿಂದ, ಮೇಘನಾ ಅವರು ತಾವೇ ಶಂಕರಣ್ಣನ ಬಳಿ ಬಂದು ತನ್ನನ್ನು ಮದುವೆಯಾಗುವಂತೆ ಕೇಳಿದ್ದರಂತೆ. ಆಗ 45 ವರ್ಷ ವಯಸ್ಸಾದರೂ ವಿವಾಹಿತರಾಗಿದ್ದ ಶಂಕರಣ್ಣ ಮೇಘನಾ ಅವರನ್ನು ಮದುವೆಯಾಗಲು ಒಪ್ಪಿ ಕಳೆದು ವರ್ಷ ಇಬ್ಬರೂ ದೇವಾಲಯವೊಂದರಲ್ಲಿ ಮದುವೆಯನ್ನು ಮಾಡಿಕೊಂಡಿದ್ದರು.

Leave A Reply

Your email address will not be published.