ಅಯ್ಯೋ ಪಾಪ ಎಂದವರನ್ನೇ ಟೀಕಿಸಿ, ಮನೆಯಲ್ಲಿ ಜಿರಲೆ ಇದೆ ಎಂದು ಮನೆ ಖಾಲಿ ಮಾಡಿದ ನಟಿ ವಿಜಯಲಕ್ಷ್ಮಿ

0
196

ನಟಿ ವಿಜಯಲಕ್ಷ್ಮಿ ಕೆಲವೇ ದಿನಗಳ ಹಿಂದೆ ವೀಡಿಯೋ ಒಂದರ ಮೂಲಕ ತನಗೆ ಕೋವಿಡ್ ಪಾಸಿಟಿವ್ ಆಗಿದೆಯೆಂದೂ, ಐಸೋಲೇಶನ್ ಆಗಬೇಕಿದೆ ಯಾರಾದರೂ ಅಭಿಮಾನಿಗಳು ಮನೆಯಿದ್ದರೆ ನೀಡಿ ಎಂದು ಅಲವತ್ತುಕೊಂಡಿದ್ದರು. ಆ ವೀಡಿಯೋ ನೋಡಿದ ನಂತರ ವಿಜಯಲಕ್ಷ್ಮಿ ಅವರ ಪರಿಸ್ಥಿತಿ ನೋಡಿ ಮರುಗಿದ ಹೊನ್ನಾವರದ ಯುವತಿಯೊಬ್ಬರು ವಿಜಯಲಕ್ಷ್ಮಿ ಅವರನ್ನು ಸಂಪರ್ಕಿಸಿ, ಅವರ ಅಕ್ಕನ ಆಸ್ಪತ್ರೆಯ ಬಿಲ್ ಪಾವತಿ ಮಾಡಿದ್ದು ಮಾತ್ರವೇ ಅಲ್ಲದೇ ಕಾರಿನಲ್ಲಿ ಹೊನ್ನಾವರದ ಕರ್ಕಿಗೆ ಕರೆದುಕೊಂಡು ಬಂದಿದ್ದಾರೆ.

ಆ ಯುವತಿಯು ಗ್ರಾಮ ಪಂಚಾಯತಿ ಸದಸ್ಯರಾಗಿರುವ ತಮ್ಮ ತಂದೆ ತುಕಾರಾಂ ನಾಯಕ್ ಅವರ ನೆರವನ್ನು ಪಡೆದು ಬಾಡಿಗೆ ಮನೆ ನೋಡಿ ಅಲ್ಲಿ ವಿಜಯಲಕ್ಷ್ಮಿ, ಅವರ ತಾಯಿ ಹಾಗೂ ಅಕ್ಕ ನಿಗೆ ಉಳಿದುಕೊಳ್ಳುವ ವ್ಯವಸ್ಥೆಯನ್ನು ಸಹಾ ಮಾಡಿ ಮಾನವೀಯತೆಯನ್ನು ಮೆರೆದಿದ್ದಾರೆ.‌ ತುಕಾರಾಂ ನಾಯಕ್ ಅವರ ಕುಟುಂಬವೇ ವಿಜಯಲಕ್ಷ್ಮಿ ಅವರ ಊಟದ ವ್ಯವಸ್ಥೆಯನ್ನು ಕೂಡಾ ನೋಡಿಕೊಂಡಿದ್ದಾರೆ.

ಸುಮಾರು ಐದು ದಿನ ಆ ಮನೆಯಲ್ಲಿದ್ದ ನಟಿ ವಿಜಯಲಕ್ಷ್ಮಿ ಅವರು ಅನಂತರ ಮನೆಯ ವಿಚಾರವಾಗಿ ತಕರಾರು ಮಾಡಿದ್ದಾರೆ. ಮನೆಯಲ್ಲಿ ಹಲ್ಲಿ, ಜಿರಳೆ ಇದೆ ಎಂದು, ತಾವು ವಿಜಯನಗರಕ್ಕೆ ಹೋಗುವುದಾಗಿ ಹೇಳಿದ್ದಾರೆ. ತುಕಾರಾಂ ಅವರೇ ಅವರಿಗೆ ಕಾರಿನ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ. ಇನ್ನು ಹೋಗುವ ಮುನ್ನ ವಿಜಯಲಕ್ಷ್ಮಿ ಅವರು ತುಕಾರಾಂ ಅವರ ಜೊತೆ ಜಗಳವನ್ನು ಸಹಾ ಮಾಡಿಕೊಂಡಿದ್ದಾರೆನ್ನಲಾಗಿದೆ.

ವೀಡಿಯೋ ಮಾಡಿ ನನಗೆ ಸರಿಯಾದ ಮನೆ ಕೊಟ್ಟಿಲ್ಲ, ಕನ್ನಡಿಗರು ನೋಡಿ ಎಂತಹ ಮನೆಯನ್ನು ನೀಡಿದ್ದಾರೆ, ಮನೆಯಲ್ಲಿ ಹಲ್ಲಿ, ಜಿರಲೆಗಳು ಇವೆ ಎಂದಿದ್ದಾರೆ. ಅಲ್ಲದೇ ಅಕ್ಕ ಮತ್ತು ಅಮ್ಮನ ಆರೈಕೆ ಸಹಾ ಅವರು ಸರಿಯಾಗಿ ಮಾಡದ ಕಾರಣ ತುಕಾರಾಂ ಅವರ ಕುಟುಂಬದವರೇ ಅವರನ್ನೂ ನೋಡಿಕೊಳ್ಳುತ್ತಿದ್ದರು ಎಂದು ತುಕಾರಾಂ ಅವರು ಮಾದ್ಯಮವೊಂದಕ್ಕೆ ತಿಳಿಸಿದ್ದಾರೆ. ವಿಜಯಲಕ್ಷ್ಮಿ ಅವರ ಈ ವರ್ತನೆ ಗೆ ನೆಟ್ಟಿಗರು ಸಹಾ ಅಸಮಾಧಾನ ಹೊರ ಹಾಕಿದ್ದಾರೆ.‌

ನಟಿ ವಿಜಯಲಕ್ಷ್ಮಿ ಹಲವು ತಿಂಗಳುಗಳಿಂದ ಸತತವಾಗಿ ಒಂದರನಂತರ ಮತ್ತೊಂದು ವಿಡಿಯೋಗಳನ್ನು ಶೇರ್ ಮಾಡಿಕೊಂಡು ಸಹಾಯ ನೀಡಿ ಎಂದು ಕೇಳುತ್ತಿದ್ದರು. ಅಲ್ಲದೇ ತನಗೆ ಕನ್ನಡದ ಯಾವ ಸ್ಟಾರ್ ನಟರೂ ಸಹಾ ಸಹಾಯವನ್ನು ನೀಡುತ್ತಿಲ್ಲ ಎಂದು ಅಸಮಾಧಾನವನ್ನು ಹೊರ ಹಾಕಿದ್ದರು ಮಾತ್ರವೇ ಅಲ್ಲದೇ ಅವಕಾಶ ಕೊಟ್ಟು ನೀಡಿ ಗ್ಲಿಸರಿನ್ ಇಲ್ಲದೇ ನಟಿಸುವೆ ಎಂದು ಸವಾಲು ಹಾಕಿದ್ದಾರೆ.

LEAVE A REPLY

Please enter your comment!
Please enter your name here