ಅಯ್ಯೋ ದೇವ್ರೇ: ಇನ್ನು 10 ದಿನ ತನ್ನ ಪ್ರಜೆಗಳು ನಗಲೇ ಬಾರದು ಎಂದು ನಿಷೇಧ ಹೇರಿದ ಉತ್ತರ ಕೊರಿಯಾ

Written by Soma Shekar

Published on:

---Join Our Channel---

ಉತ್ತರ ಕೊರಿಯಾ ತನ್ನದೇ ಆದಂತಹ ವಿಶೇಷ ಕಾನೂನುಗಳಿಂದಾಗಿ, ಆದೇಶಗಳಿಂದಾಗಿ ಇಡೀ ವಿಶ್ವದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇಲ್ಲಿ ಜಾರಿಯಾಗುವ ಹೊಸ ಹೊಸ ಕಾನೂನುಗಳ ಕಾರಣದಿಂದ ಜಗತ್ತಿನ ದೇಶಗಳು ಉತ್ತರ ಕೋರಿಯಾದ ಕಡೆಗೆ ಕುತೂಹಲದಿಂದ ನೋಡುವಂತಾಗುತ್ತದೆ. ಸರ್ವಾಧಿಕಾರಿ ಆಡಳಿತವನ್ನು ಹೊಂದಿರುವ ಉತ್ತರ ಕೊರಿಯಾದಲ್ಲಿ ಜಾರಿಯಾಗುವ ವಿಶೇಷ ಹಾಗೂ ವಿಚಿತ್ರವೆನಿಸುವ ಕಾನೂನುಗಳು ವಿಶ್ವದ ಬೇರೆ ಯಾವುದೇ ದೇಶಗಳಲ್ಲಿ ನೋಡಲು ಸಿಗುವುದಿಲ್ಲ ಎನ್ನುವುದು ಕೂಡಾ ವಾಸ್ತವ.

ಪ್ರಸ್ತುತ ಅಂತಹದೇ ಒಂದು ಹೊಸ ಆದೇಶವು ಉತ್ತರ ಕೊರಿಯಾದಲ್ಲಿ ಜಾರಿಯಾಗಿದ್ದು ಮತ್ತೊಮ್ಮೆ ಎಲ್ಲರೂ ಆಶ್ಚರ್ಯದಿಂದ ಅತ್ತ ನೋಡುವಂತಾಗಿದೆ. ಹಾಗಾದರೆ ಈಗ ಜಾರಿ ಮಾಡಿದ ಆದೇಶವಾದರೂ ಏನು?? ಎನ್ನುವುದಾದರೆ, ಉತ್ತರ ಕೊರಿಯಾದ ಮಾಜಿ ಸರ್ವಾಧಿಕಾರಿ ಕಿಮ್ ಜಾಂಗ್ ಇಲ್ ಅವರ ಹತ್ತನೇ ವರ್ಷದ ಪುಣ್ಯಸ್ಮರಣೆ ಕಾರಣವಾಗಿ ಇಡೀ ದೇಶದಲ್ಲಿ ಶೋಕಾಚರಣೆ ಮಾಡಲು ಘೋಷಣೆಯನ್ನು ಮಾಡಲಾಗಿದೆ. ಅಲ್ಲದೇ ಈ ಶೋಕಾಚರಣೆ ವೇಳೆಯಲ್ಲಿ ದೇಶದ ಪ್ರಜೆಗಳು ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬ ಆದೇಶವನ್ನು ನೀಡಲಾಗಿದೆ.

ಇಂದು ಡಿಸೆಂಬರ್ 17 ಕಿಮ್ ಜಾಂಗ್ ಇಲ್ ಅವರ 10ನೇ ವರ್ಷದ ಪುಣ್ಯಸ್ಮರಣೆ ದಿನವಾಗಿದ್ದು, ಈ ಹಿನ್ನೆಲೆಯಲ್ಲಿ ಇಂದಿನಿಂದ ಹತ್ತು ದಿನಗಳ ಕಾಲ ದೇಶದಲ್ಲಿ ಶೋಕಾಚರಣೆ ಘೋಷಣೆ ಮಾಡಿದ್ದು, ಈ ಹತ್ತು ದಿನಗಳ ಅವಧಿಯಲ್ಲಿ ದೇಶದ ಪ್ರಜೆಗಳು ನಗಬಾರದು, ಅವರು ಮದ್ಯಪಾನ ಮಾಡಬಾರದು, ದಿನಸಿ ವಸ್ತುಗಳನ್ನು ಖರೀದಿ ಮಾಡಲು ಶಾಪಿಂಗ್ ಮಾಡಬಾರದು, ಹಾಗೂ ಮನರಂಜನೆಗಾಗಿ ಬಿಡುವಿನ ವೇಳೆಯಲ್ಲಿ ಯಾವುದೇ ಚಟುವಟಿಕೆಗಳನ್ನು ಮಾಡಬಾರದು ಎಂದು ಸೂಚನೆಯನ್ನು ನೀಡಲಾಗಿದೆ.

ಅಲ್ಲದೇ ಇದೇ ವೇಳೆ ಯಾರಾದರೂ ಈ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಅಂತಹವರ ಮೇಲೆ ಕ ಠಿ ಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಈ ಹಿಂದೆ ಶೋಕಾಚರಣೆ ವೇಳೆಯಲ್ಲಿ ಮದ್ಯಪಾನ ಮಾಡಿ ಸಿಕ್ಕಿಬಿದ್ದವರನ್ನು ಸೈದಾಂತಿಕ ಅ ಪ ರಾ ಧಿಗಳು ಎಂದು ಘೋಷಣೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ. ಇನ್ನು ಈ ಬಾರಿ ಶಿಕ್ಷೆಯು ಮೊದಲಿಗಿಂತ ಕಠಿಣವಾಗಿರಬಹುದು ಎನ್ನುವ ಮಾತುಗಳು ಕೇಳಿಬಂದಿದೆ.

Leave a Comment