ಅಯ್ಯೋ ದೇವ್ರೆ!! ಇದೆಂಥಾ ಡ್ರೆಸ್?? ಉರ್ಫಿ ಲುಕ್ ನೋಡಿ ಕಂಗಾಲಾದ ಪಡ್ಡೆಗಳು, ನಟಿ ಮತ್ತೊಮ್ಮೆ ಟ್ರೋಲ್

Entertainment Featured-Articles News

ಹಿಂದಿಯಲ್ಲಿ ಕಳೆದ ವರ್ಷ ಮೊದಲ ಬಾರಿಗೆ ಓಟಿಟಿಯಲ್ಲಿ ಸಹಾ ಬಿಗ್ ಬಾಸ್ ಆರಂಭವಾಗಿ, ಮೊದಲ ಸೀಸನ್ ದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಂಡಿದೆ. ಈ ಶೋ ನ ಮೂಲಕ ಜನಪ್ರಿಯತೆ ಪಡೆದವರಲ್ಲಿ ನಟಿ ಉರ್ಫಿ ಜಾವೇದ್ ಕೂಡಾ ಒಬ್ಬರು‌ ಆದರೆ ಉರ್ಫಿ ಬಿಗ್ ಬಾಸ್ ನಿಂದ ಹೊರ ಬಂದ ಮೇಲೆ ಯಾವುದೇ ಹೊಸ ಸಿನಿಮಾ, ಜಾಹೀರಾತು ಅಥವಾ ವೆಬ್ ಸಿರೀಸ್ ಗಳಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಬಿಗ್ ಬಾಸ್ ನ ಬೇರೆ ಯಾವುದೇ ಸೆಲೆಬ್ರಿಟಿಗಳು ಮಾಡದಷ್ಟು ಸುದ್ದಿಯನ್ನು ಮಾಡುತ್ತಿದ್ದು, ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ.

ಉರ್ಫಿ ಜಾವೇದ್ ಸಿನಿಮಾ, ಸೀರಿಯಲ್, ವೆಬ್ ಸಿರೀಸ್ ಅಥವಾ ಜಾಹೀರಾತುಗಳಿಂದ ಅಲ್ಲ ಬದಲಾಗಿ, ಆಕೆ ತಾನು ನೀಡುವ ಹೇಳಿಕೆಗಳಿಂದ, ಅದರಲ್ಲೂ ವಿಶೇಷವಾಗಿ ಧರಿಸುವ ಡ್ರೆಸ್ ಗಳಿಂದಾಗಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ. ಉರ್ಫಿ ಧರಿಸುವ ಡ್ರೆಸ್ ಗಳು ಖಂಡಿತ ಎಲ್ಲರ ಗಮನ ಸೆಳೆಯುತ್ತಿದೆ ಅಲ್ಲದೇ ಇದಕ್ಕೆ ಪರ, ವಿ ರೋ ಧ ಮಾತುಗಳು ಸಹಾ ಕೇಳಿ ಬರುತ್ತಲೇ ಇರುತ್ತವೆ. ಉರ್ಫಿ ಧರಿಸುವ ಸಣ್ಣ ಸಣ್ಣ ಡ್ರೆಸ್ ಗಳು, ಮೈ ಕಾಣುವಂತೆ ಧರಿಸುವ ಪಾರದರ್ಶಕ ಡ್ರೆಸ್ ಗಳನ್ನು ನೋಡಿ ಪಡ್ಡೆಗಳು ಕಂಗಲಾಗಿದ್ದಾರೆ.

ಇನ್ನು ಉರ್ಫಿ ಸಹಾ ದಿನಕ್ಕೊಂದು ಹೊಸ ವಿನ್ಯಾಸದ ಡ್ರೆಸ್ ಧರಿಸಿ ಮಾದ್ಯಮಗಳ ಗಮನ ಸೆಳೆಯುತ್ತಾರೆ. ಉರ್ಫಿ ಧರಿಸುವ ಡ್ರೆಸ್ ಗಳ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಗಳನ್ನು ಸಹಾ ಮಾಡಲಾಗುತ್ತಿದೆ. ಆದರೆ ಉರ್ಫಿ ಮಾತ್ರ ತನ್ನ ಬಗ್ಗೆ ಆಗುವ ಟ್ರೋಲ್ ಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ ಬಿಂದಾಸ್ ಆಗಿ ಹೊಸ ಹೊಸ ವಿನ್ಯಾಸದ ಡ್ರೆಸ್ ಧರಿಸಿ ಕ್ಯಾಮೆರಾಗಳ ಮುಂದೆ ಫೋಸ್ ನೀಡುತ್ತಾರೆ. ಉರ್ಫಿ ಗೆ ಇಂತಜ ಡ್ರೆಸ್ ಧರಿಸೋದು ಒಂದು ಹವ್ಯಾಸವೇ ಆಗಿದೆ ಅನ್ನೋ ತರ ಆಗಿದೆ‌.

ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಹಾಟ್ ಡ್ರೆಸ್ ಗಳನ್ನು ಧರಿಸಿ ಬಿಂದಾಸ್ ಆಗಿ ಹೊರ ಬರುವ ಉರ್ಫಿ ತನ್ನ ಬಗ್ಗೆ ಯಾರು ಏನೇ ಅಂದರೂ ಸಹಾ ಅದನ್ನು ಸೀರಿಯಸ್ಸಾಗಿ ತೆಗೆದುಕೊಳ್ಳುವುದೇ ಇಲ್ಲ. ಇನ್ನು ಇತ್ತೀಚಿಗೆ ಉರ್ಫಿ ಅವರನ್ನು ಸಿನಿಮಾ ಆಡಿಷನ್ ಎಂದು ಹೇಳಿ ಕರೆಸಿ ಮಾಡಿದ್ದ ಪ್ರಾಂಕ್ ವೀಡಿಯೋ ಒಂದು ಸಹಾ ಸಿಕ್ಕಾಪಟ್ಟೆ ಸದ್ದು ಮಾಡಿತ್ತು ಹಾಗೂ ವೀಡಿಯೋ ಸಾಕಷ್ಟು ವೈರಲ್ ಆಗಿ ಜನರನ್ನು ನಗಿಸಿತ್ತು. ಒಟ್ಟಾರೆ ಸದ್ಯಕ್ಕೆ ಉರ್ಫಿ ತಮ್ಮ ಡ್ರೆಸ್ ಗಳಿಂದಾಗಿಯೇ ಟ್ರೆಂಡ್ ಆಗಿದ್ದಾರೆ.

Leave a Reply

Your email address will not be published.