ಅಯ್ಯೋ ಒಂದೇ ವಾರಕ್ಕೆ ರಾಮಾಚಾರಿ ಸೀರಿಯಲ್ ಗೆ ಇದೇನಾಯ್ತು?ಅಭಿಮಾನಿಗಳಿಗೆ ದೊಡ್ಡ ಶಾಕ್!

Entertainment Featured-Articles News

ಮನೆ ಮನೆಗಳಲ್ಲೂ ಸಹಾ ಸಂಜೆಯಾದರೆ ಸಾಕು ಸೀರಿಯಲ್ ಗಳನ್ನು ನೋಡುವ ಸಂಭ್ರಮ ಕಾಣುತ್ತದೆ. ರಾಜ್ಯದ ಅದೆಷ್ಟೋ ಮನೆಗಳಲ್ಲಿ ಸಂಜೆಗತ್ತಲಾದಂತೆ ಮನೆ ಮಂದಿಯೆಲ್ಲಾ ಟಿವಿ ಮುಂದೆ ಕುಳಿತು ಕಿರುತೆರೆಯ ಧಾರಾವಾಹಿಗಳನ್ನು ಖುಷಿಯಾಗಿ ನೋಡುತ್ತಾರೆ. ಪ್ರೇಕ್ಷಕರ ಇಂತಹ ಪ್ರೀತಿಯಿಂದಾಗಿಯೇ ಸೀರಿಯಲ್ ಗಳು ಅಪಾರವಾದ ಜನಾದರಣೆಯನ್ನು ಪಡೆದುಕೊಂಡು, ಟಾಪ್ ಸೀರಿಯಲ್ ಗಳಾಗಿ ಹೊರ ಹೊಮ್ಮುತ್ತವೆ. ಕೆಲವು ಧಾರಾವಾಹಿಗಳು ಜನರ ಮನಸ್ಸನ್ನು ಗೆದ್ದು ಅಗ್ರ ಐದು ಸ್ಥಾನಗಳನ್ನು ಪಡೆದುಕೊಂಡು ಬೀಗುತ್ತವೆ.

ಯಾವ ಧಾರಾವಾಹಿ ಹೆಚ್ಚು ಜನಮನ್ನಣೆಯನ್ನು ಪಡೆದಿವೆ ಎಂಬುದನ್ನು ಅವುಗಳು ಪಡೆದಿರುವ ಸ್ಥಾನವನ್ನು ನೋಡಿದಾಗಲೇ ತಿಳಿಯುತ್ತದೆ. ಜನರ ಆಸಕ್ತಿ ಧಾರಾವಾಹಿ ಕಡೆಯಿಂದ ಪಕ್ಕಕ್ಕೆ ಸರಿದರೆ, ಆಗ ಆ ಸೀರಿಯಲ್ ಗಳ ಸ್ಥಾನದಲ್ಲಿ ಕೂಡಾ ಏರುಪೇರಾಗುತ್ತದೆ. ಇನ್ನು ಈಗ ಈ ವಾರದಲ್ಲಿ ಕಿರುತೆರೆಯ ಪ್ರೇಕ್ಷಕರು ಸೀರಿಯಲ್ ಗಳಿಗೆ ನೀಡಿದ ಮನ್ನಣೆ, ಮಾನ್ಯತೆಯ ಆಧಾರದ ಮೇಲೆ ಯಾವ ಯಾವ ಸೀರಿಯಲ್ ಗಳು ಯಾವ ಸ್ಥಾನ ಪಡೆದಿವೆ ಎನ್ನುವ ಮಾಹಿತಿ ಹೊರ ಬಂದಿದೆ.

ಧಾರಾವಾಹಿಗಳ ಈ ವಾರದ ಟಾಪ್ ಸ್ಥಾನಗಳಲ್ಲಿ ಕೆಲವೊಂದು ಬದಲಾವಣೆಗಳು ಆಗಿವೆ. ಇದರಲ್ಲಿ ಕೆಲವು ಬದಲಾವಣೆಗಳು ಖಂಡಿತ ಅನಿರೀಕ್ಷಿತವಾಗಿದೆ. ಹೌದು ಹಾಗಾದರೆ ಏನು ಆ ಅನಿರೀಕ್ಷಿತ ತಿಳಿಯೋಣ ಬನ್ನಿ. ದಿನಕ್ಕೊಂದು ತಿರುವು, ವಾರಾಂತ್ಯದ ಎಪಿಸೋಡ್ ನಲ್ಲಿ ದೊಡ್ಡ ರಹಸ್ಯ ಇಟ್ಟು ಪ್ರೇಕ್ಷಕರನ್ನು ಕಾಯುವಂತೆ ಮಾಡುವ ಈ ಸೀರಿಯಲ್ ಗಳ ಮಾಯೆ ಜನರ ಮೇಲೆ ಕಳೆದ ವಾರ ಯಾವ ಮಟ್ಟಕ್ಕೆ ಇತ್ತು ಎನ್ನುವುದು ಟಿ ಆರ್ ಪಿ ಯಿಂದ ಹೊರ ಬಿದ್ದಿದೆ.

ಹಿರಿಯ ನಟಿ ಉಮಾಶ್ರೀ, ಜನಪ್ರಿಯ ನಟಿ ಮಂಜು ಭಾಷಿಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಪುಟ್ಟಕ್ಕನ ಮಕ್ಕಳ ಆರಂಭವಾದ ಮೊದಲನೇ ವಾರದಲ್ಲೇ ನಂಬರ್ ಒನ್ ಪಟ್ಟ ಅಲಂಕಿರಿಸಿದ್ದು, ತನ್ನ ಅದೇ ಗತ್ತು, ಗಮ್ಮತ್ತು ಈ ವಾರವೂ ಮುಂದುವರೆಸಿದ್ದು ನಂಬರ್ ಒನ್ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ. ಅಮೂಲ್ಯ, ವೇದಾಂತ್ ಪ್ರೇಮಕಥಾನಕ ಗಟ್ಟಿಮೇಳದಲ್ಲಿ ವೇದಾಂತ್ ನ ಅಸಲಿ ತಾಯಿ ಆಗಮನ ಕಥೆಗೆ ಹೊಸ ಟ್ವಿಸ್ಟ್ ನೀಡಿದೆ.

ಗಟ್ಟಿಮೇಳ ಪುಟ್ಟಕ್ಕನ ಮಕ್ಕಳು ಬಂದ ಮೇಲೆ ಮೊದಲನೇ ಸ್ಥಾನದಿಂದ ಒಂದು ಸ್ಥಾನ ಕೆಳಕ್ಕೆ ಇಳಿದಿದೆ. ಈ ವಾರವೂ ಸಹಾ ಗಟ್ಟಿಮೇಳ ಎರಡನೇ ಸ್ಥಾನದಲ್ಲಿ ಭದ್ರವಾಗಿದೆ. ಇನ್ನು ಎಜೆ, ಲೀಲಾ ನಡುವಿನ ಕೋಳಿ ಜಗಳದೊಂದಿಗೆ ಹಿಟ್ಲರ್ ಕಲ್ಯಾಣ ಈ ವಾರವೂ ಮೂರನೇ ಸ್ಥಾನದಲ್ಲಿ ಭದ್ರವಾಗಿದೆ. ದೀರ್ಘಕಾಲದ ವರೆಗೆ ಕನ್ನಡ ಕಿರುತೆರೆಯ ನಂಬರ್ ಒನ್ ಸೀರಿಯಲ್ ಎನ್ನುವ ಹೆಗ್ಗಳಿಕೆ ಪಡೆದಿದ್ದ ಜೊತೆ ಜೊತೆಯಲಿ ಈಗ ನಾಲ್ಕನೇ ಸ್ಥಾನದಲ್ಲಿ ಮುಂದುವರೆದಿದೆ.

ಇನ್ನು ಐದನೇ ಸ್ಥಾನದಲ್ಲಿ ಇದ್ದ, ಹಿಂದೊಮ್ಮೆ ನಂಬರ್ ಒನ್ ಆಗಿದ್ದ ಸತ್ಯ ಧಾರಾವಾಹಿಯು ಕಳೆದ ವಾರ ಟಾಪ್ ಐದರ ಸ್ಪರ್ಧೆ ಯಿಂದ ಹೊರ ಬಿದ್ದಿತ್ತು. ಈ ಜಾಗವನ್ನು ಹೊಸ ಧಾರಾವಾಹಿ ರಾಮಾಚಾರಿ ತನ್ನದಾಗಿದಿಕೊಂಡಿತ್ತು. ರಾಮಾಚಾರಿ ಟಾಪ್ ಐದನೇ ಸ್ಥಾನಕ್ಕೆ ಬಂದಿದ್ದು ನೋಡಿದ ಅಭಿಮಾನಿಗಳು ಈ ಧಾರಾವಾಹಿಗೆ ಟಾಪ್ ಒಂದರ ಸ್ಥಾನ ತಲುಪುವ ಸಾಮರ್ಥ್ಯ ಇದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು.

ಆದರೆ ಈಗ ಎಲ್ಲರ ಊಹೆಗಳು ತಲೆಕೆಳಗಾಗಿವೆ. ಒಂದೇ ವಾರದಲ್ಲಿ ರಾಮಾಚಾರಿ ಟಾಪ್ ರೇಸ್ ನಿಂದ ಹೊರ ಬಿದ್ದಿದೆ. ಪಾರು, ಆದಿಯ ಪ್ರೇಮ ಕಥೆಯಲ್ಲಿ, ಅನಿರೀಕ್ಷಿತ ತಿರುವುಗಳು ಕಂಡು ಆದಿ ಪಾರು ಮದುವೆ ನಡೆದಾಗಿದೆ. ಈ ಹೊರ ತಿರುವು ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದು, ಪಾರು ಈಗ ಐದನೇ ಸ್ಥಾನವನ್ನು ಆಕ್ರಮಿಸಿದೆ. ಈ ಮೂಲಕ ಪಾರು ರಾಮಾಚಾರಿಯ ಸ್ಥಾನವನ್ನು ತನ್ನದಾಗಿಸಿಕೊಂಡು, ಟಾಪ್ ಐದಕ್ಕೆ ಮತ್ತೆ ಎಂಟ್ರಿ ನೀಡಿದೆ.

Leave a Reply

Your email address will not be published.