ಅಯ್ಯೋ ಇದೇನಿದು ರಾಜ್ ಕುಂದ್ರಾ ಹೊಸ ವೇಷ?? ಇದು ಬೇಕಾಗಿತ್ತಾ?? ಎಂದು ನೆಟ್ಟಿಗರಿಂದ ಭರ್ಜರಿ ಟ್ರೋಲ್

Entertainment Featured-Articles News Viral Video

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ದಂಪತಿ ಕೆಲವೇ ದಿನಗಳ ಹಿಂದೆ ದೊಡ್ಡ ಸುದ್ದಿಯಾಗಿದ್ದರು. ಆ ಘಟನೆಯ ನಂತರ ರಾಜ್ ಕುಂದ್ರಾ ಅಷ್ಟಾಗಿ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಅದೂ ಅಲ್ಲದೇ ಅವರು ಕೆಲವು ದಿನಗಳ ಕಾಲ ಸೋಶಿಯಲ್ ಮೀಡಿಯಾಗಳಿಂದ ಸಹಾ ದೂರ ಉಳಿದಿದ್ದರು. ಎಲ್ಲಾ ವಿಚಾರಗಳು ಒಂದು ಹಂತದಲ್ಲಿ ಕೊನೆಯಾದರೂ, ರಾಜ್ ಕುಂದ್ರಾ ಮಾತ್ರ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದು ಮಾತ್ರ ನಿಜ. ಅಲ್ಲದೇ ನಟಿ ಶಿಲ್ಪಾ ಶೆಟ್ಟಿ ಕೂಡಾ ಕೊಂಚ ಕಾಲ ಮಾದ್ಯಮಗಳಿಂದ ದೂರ ಉಳಿಯುವ ಹಾಗೆ ಆಗಿದ್ದು ಸಹಾ ವಾಸ್ತವ.

ಈಗ ಬಹುದಿನಗಳ ನಂತರ ಶಿಲ್ಪಾಶೆಟ್ಟಿ ಮತ್ತು ರಾಜ್ ಕುಂದ್ರಾ ದಂಪತಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಈ ವೇಳೆ ರಾಜ್ ಕುಂದ್ರಾ ಸಂಪೂರ್ಣವಾಗಿ ತಮ್ಮ ಮುಖವನ್ನು ಮುಚ್ಚಿಕೊಂಡು ಓಡಾಡುತ್ತಿರುವ ವೀಡಿಯೋ ದೃಶ್ಯಗಳನ್ನು ನೋಡಿದ ನೆಟ್ಟಿಗರು ಮತ್ತೊಮ್ಮೆ ಅವರ ಕಾಲೆಳೆಯುತ್ತಿದ್ದಾರೆ. ಮತ್ತೊಮ್ಮೆ ರಾಜ್ ಕುಂದ್ರಾ ಅವರನ್ನು ಟ್ರೋಲ್ ಮಾಡಲು ಮುಂದಾಗಿದ್ದಾರೆ ಟ್ರೋಲಿಗರು. ಎಲ್ಲಕ್ಕಿಂತ ಆಸಕ್ತಿಕರ ವಿಚಾರ ಏನೆಂದರೆ ಸ್ವತಃ ಶಿಲ್ಪಾಶೆಟ್ಟಿ ಅವರೇ ಪತಿಯನ್ನು ನೋಡಿ ನಗುತ್ತಿದ್ದಾರೆ.

ರಾಜ್ ಕುಂದ್ರಾ ಭಾನುವಾರ ತಮ್ಮ ಪತ್ನಿ ಶಿಲ್ಪಾ ಶೆಟ್ಟಿ, ಶಿಲ್ಪಾ ಶೆಟ್ಟಿ ಅವರ ಸಹೋದರಿ ಶಮಿತಾ ಮತ್ತು ಅವರ ತಾಯಿ ಸುನಂದಾ ಶೆಟ್ಟಿ ಹಾಗೂ ತಮ್ಮ ತಾಯಿಯ ಜೊತೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ರಾಜ್ ಕುಂದ್ರಾ ಕಪ್ಪು ಬಣ್ಣದ ವಸ್ತ್ರವನ್ನು ಧರಿಸಿದ್ದರು ಮಾತ್ರವೇ ಅಲ್ಲದೇ ಕಪ್ಪು ಬಣ್ಣದ ಫೇಸ್ ಮಾಸ್ಕ್ ಅನ್ನು ಸಹಾ ಧರಿಸಿದ್ದರು. ಕಾರಿನಿಂದ ಇಳಿದು ಮನೆಯೊಳಗೆ ಹೋಗುತ್ತಿದ್ದ ವೇಳೆ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಹಾಗೂ ಅವರ ಕುಟುಂಬದ ಸದಸ್ಯರು ಕ್ಯಾಮೆರಾ ಕಣ್ಣುಗಳಿಗೆ ಸೆರೆಯಾಗಿದ್ದಾರೆ.

ಲಿಫ್ಟ್ ಬಳಿ ಬಂದಾಗ, ಶಿಲ್ಪಾ ಶೆಟ್ಟಿ ಅವರು ತಮ್ಮ ಪತಿಯನ್ನು ನೋಡಿ ಜೋರಾಗಿ ನಕ್ಕಿದ್ದಾರೆ. ಈ ವೀಡಿಯೋವನ್ನು ಬಾಲಿವುಡ್ ನ ಫ್ಯಾಷನ್ ಫೋಟೋ ಗ್ರಾಫರ್ ವೈರಲ್ ಭಯಾನಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವೀಡಿಯೋ ನೋಡಿದ ನೆಟ್ಟಿಗರು ಹೀಗೆ ಮುಖ ಮುಚ್ಚಿಕೊಂಡು ಓಡಾಡೋಕೆ ಲಾಯಕ್, ಅಂತ ಕೆಲಸ ಮಾಡೋದು ಯಾಕೆ? ಈಗ ಮುಖ ಮುಚ್ಚಿಕೊಂಡು ಓಡಾಡೋದು ಯಾಕೆ?, ಇದೇ ಲುಕ್ ನ ಯಾವಾಗ್ಲೂ ಫಾಲೋ ಮಾಡಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ ನೆಟ್ಟಿಗರು.

Leave a Reply

Your email address will not be published.