ಅಯ್ಯೋ ಇದೇನಾಯ್ತು? ಜನಪ್ರಿಯತೆ ಬೆನ್ನಲ್ಲೇ ಕಾಫಿ ನಾಡು ಚಂದುಗೆ ಇನ್ಸ್ಟಾಗ್ರಾಂ ನಲ್ಲೇ ಇಂತಾ ಸಮಸ್ಯೆನಾ?

Entertainment Featured-Articles Movies News

ಇತ್ತೀಚಿನ ದಿನಗಳಲ್ಲಿ ವೈರಲ್ ರೀಲ್ಸ್ ಮೂಲಕವೇ ಸೆಲೆಬ್ರಿಟಿಯ ರೇಂಜ್ ಗೆ ಸದ್ದು ಮಾಡಿದ ವ್ಯಕ್ತಿ ಯಾರು ಎಂದರೆ ಯಾವುದೇ ಅನುಮಾನ ಇಲ್ಲದೇ ಕಾಫಿ ನಾಡು ಚಂದು ಬಹಳ ಸುಲಭವಾಗಿ ಉತ್ತರ ನೀಡುತ್ತಾರೆ ಸೋಶಿಯಲ್ ಮೀಡಿಯಾ ಬಳಕೆದಾರರು. ಅಲ್ಪಾವಧಿಯಲ್ಲೇ ಸಖತ್ ಸದ್ದು ಮಾಡಿದ್ದಾರೆ ಕಾಫಿ ನಾಡು ಚಂದು. ಸೋಶಿಯಲ್ ಮೀಡಿಯಾದಲ್ಲಿ ಕಾಫಿ ನಾಡು ಚಂದು ಅವರನ್ನು ಫಾಲೋ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗಾಗಲೇ ಇನ್ಸ್ಟಾಗ್ರಾಂ ನಲ್ಲಿ ಕಾಫಿ ನಾಡು ಚಂದು ಅವರನ್ನು ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದು, ಸೆಲೆಬ್ರಿಟಿಗಳಿಂತಲೂ ಹೆಚ್ಚಿನ ಹಿಂಬಾಲಕರನ್ನು ಪಡೆದಿರುವುದು ವಿಶೇಷವಾಗಿದೆ.

ಹೀಗೆ ಇದ್ದಕ್ಕಿದ್ದ ಹಾಗೆ ಅಪಾರ ಅಭಿಮಾನಿಗಳನ್ನು ಪಡೆದು, ಜನಪ್ರಿಯತೆ ಪಡೆದುಕೊಂಡಿರುವ ಕಾಫಿ ನಾಡು ಚಂದು ಮೇಲೆ ಇದೀಗ ಹ್ಯಾಕರ್ ಗಳ ಕಣ್ಣು ಬಿದ್ದಂತೆ ಕಾಣುತ್ತಿದೆ. ಅದರ ಪರಿಣಾಮ ಎನ್ನುವಂತೆ ಕಾಫಿ ನಾಡು ಚಂದು ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ ಒಂದಷ್ಟು ಅಸಂಬದ್ಧ ಎನಿಸುವಂತಹ ಲಿಂಕ್ ಗಳನ್ನು ಶೇರ್ ಮಾಡಲಾಗಿದೆ. ಈ ಬೆಳವಣಿಗೆಯು ಕಾಫಿ ನಾಡು ಚಂದು ಅವರ ಇಮೇಜ್ ಗೆ ಸಮಸ್ಯೆ ತರುವ ಸಂಭವ ಸಹಾ ಇದೆ. ಕಾಫಿ ನಾಡು ಚಂದು ಒಂದಲ್ಲಾ ಒಂದು ವೀಡಿಯೋ ಅಪ್ಲೋಡ್ ಮಾಡುವ ಮೂಲಕ ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಲೇ ಇರುತ್ತಾರೆ. ಜನ್ಮದಿನದ ಶುಭಾಶಯವನ್ನು ತಮ್ಮದೇ ಸ್ಟೈಲ್ ನಲ್ಲಿ ಹೇಳುತ್ತಾ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.

ಆರಂಭದ ದಿನಗಳಲ್ಲಿ ಕಾಫಿ ನಾಡು ಚಂದು ಅವರನ್ನು ಫಾಲೋ ಮಾಡುವವರ ಸಂಖ್ಯೆ ಕಡಿಮೆಯಿತ್ತು. ಆದರೆ ದಿನಕಳೆದಂತೆ ಅವರನ್ನು ಫಾಲೋ ಮಾಡುವವರ ಸಂಖ್ಯೆ ಹೆಚ್ಚಾಗಿದೆ‌. ಆದರೆ ಈಗ ಇದ್ದಕ್ಕಿದ್ದ ಹಾಗೆ ಕಾಫಿ ನಾಡು ಚಂದು ಅವರ ಇನ್ಸ್ಟಾಗ್ರಾಂ ಖಾತೆ ಅನೇಕರಿಗೆ ಕಂಡಿಲ್ಲ. ಆದರೆ ಕಂಡವರಿಗೆ ಅದರಲ್ಲಿನ ಅಸಂಬದ್ಧ ಎನಿಸುವ ಲಿಂಕ್ ಗಳು ಅಚ್ಚರಿಯನ್ನು ಮತ್ತು ಗೊಂದಲವನ್ನು ಉಂಟು ಮಾಡಿದೆ. ಇದನ್ನು ನೋಡಿದ ನೆಟ್ಟಿಗರು ಇದೆಲ್ಲಾ ಹ್ಯಾಕರ್ ಗಳ ಕೈವಾಡ ಎನ್ನಲಾಗಿದ್ದು, ಈ ವಿಚಾರವಾಗಿ ಕಾಫಿ ನಾಡು ಚಂದು ಇನ್ನೂ ಸಹಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Leave a Reply

Your email address will not be published.