ಅಯ್ಯಯ್ಯೋ!! ವೇದಿಕೆ ಮೇಲೆ ಇದೇನು ಮಾಡಿದ್ರಿ ಸಲ್ಲು ಭಾಯ್: ಪೂಜಾ ಹೆಗ್ಡೆ ವಿಚಾರದಲ್ಲಿ ಟ್ರೋಲ್ ಆದ ಸಲ್ಮಾನ್ ಖಾನ್

Entertainment Featured-Articles News Viral Video

ಬಾಲಿವುಡ್‌ ನ ಸ್ಟಾರ್ ನಟರಲ್ಲಿ ಸಲ್ಮಾನ್ ಖಾನ್ ಒಬ್ಬರಾಗಿದ್ದು, ಅವರು ತಮ್ಮ ಸಿನಿಮಾಗಳಿಂದಾಗಿ ವಿಶ್ವದಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ನಟನಾಗಿದ್ದಾರೆ. ಆದ್ದರಿಂದಲೇ ವರ್ಷಕ್ಕೆ ಒಂದು ಸಲ ನಟ ಸಲ್ಮಾನ್ ಖಾನ್ ಅವರು ವಿಶ್ವದ ವಿವಿಧ ದೇಶಗಳಲ್ಲಿ ನೆಲೆಸಿರುವ ತಮ್ಮ ಅಭಿಮಾನಿಗಳಿಗೆ ಮನರಂಜನೆ ನೀಡುವ ಸಲುವಾಗಿ ತಮ್ಮದೇ ಆದ ಒಂದು ತಂಡವನ್ನು ರಚಿಸಿ, ಸಿನಿಮಾ ಸೆಲೆಬ್ರಿಟಿಗಳ ಜೊತೆಗೆ ತಮ್ಮ ಸಿನಿಮಾಗಳ ಸೂಪರ್ ಹಿಟ್ ಹಾಡುಗಳಿಗೆ ನೃತ್ಯ ಅಭ್ಯಾಸ ಮಾಡುತ್ತಾರೆ.

ಅನಂತರ ಅವುಗಳನ್ನು ವಿದೇಶಗಳಲ್ಲಿ ಶೋಗಳ ಮೂಲಕ ಪ್ರದರ್ಶಿಸಲು ದಬಂಗ್ ಟೂರ್ ಹೆಸರಿನಲ್ಲಿ ವಿದೇಶ ಪ್ರವಾಸ ಮಾಡುತ್ತಾರೆ. ಅಲ್ಲಿ ಅಭಿಮಾನಿಗಳು ನಿಗದಿತ ಶುಲ್ಕವನ್ನು ನೀಡಿ ಈ ಶೋನಲ್ಲಿ ಭಾಗವಹಿಸಿ, ಸೆಲೆಬ್ರಿಟಿಗಳ ಪರ್ಫಾರ್ಮೆನ್ಸ್ ನೋಡಲು ಅವಕಾಶ ಇರುತ್ತದೆ. ಹೀಗೆ ದಬಂಗ್ ಟೂರ್ ಹೋದಂತಹ ಸಂದರ್ಭದಲ್ಲಿ ಸಲ್ಮಾನ್ ಅವರ ತಂಡದಲ್ಲಿ ಜನಪ್ರಿಯ ನಟಿ ಪೂಜಾ ಹೆಗ್ಡೆ ಕೂಡಾ ಇದ್ದರು. ಈ ವೇಳೆ ವೇದಿಕೆ ಮೇಲೆ ಪೂಜಾ ಹೆಗ್ಡೆ ಜೊತೆ ಸಲ್ಮಾನ್ ಖಾನ್ ಒಂದು ಸೂಪರ್ ಹಿಟ್ ಹಾಡಿಗೆ ಹೆಜ್ಜೆಯನ್ನು ಹಾಕಿದ್ದರು.

ಆದರೆ ಈ ಡಾನ್ಸ್ ವೇಳೆಯಲ್ಲಿ ನಡೆದಂತಹ ಘಟನೆಯೊಂದರ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದಲ್ಲಿ ವೈರಲ್ ಆಗುತ್ತಿದೆ. ಇದು ಟ್ರೋಲಿಗರಿಗೆ ಭರ್ಜರಿ ಆಹಾರವಾಗಿದ್ದಾರೆ. ಅಲ್ಲದೇ ನಟ ಸಲ್ಮಾನ್ ಖಾನ್ ಅವರಿಗೆ ಇದು ಮುಜುಗರವನ್ನು ತರುವಂತಾಗಿದೆ. ಹೌದು, ಸ್ಟೇಜ್ ಪರ್ಫಾರ್ಮೆನ್ಸ್ ನೀಡುವ ಸಮಯದಲ್ಲಿ ಸಲ್ಮಾನ್ ಖಾನ್ ಮತ್ತು ಪೂಜಾ ಹೆಗ್ಡೆ ಸಲ್ಮಾನ್ ನಾಯಕನಾಗಿ ನಟಿಸಿದ್ದ ಕಿಕ್ ಸಿನಿಮಾದ ಸೂಪರ್ ಹಿಟ್ ಹಾಡಿಗೆ ಕುಣಿಯುತ್ತಿದ್ದರು.

ಕಿಕ್ ಸಿನಿಮಾಸ ಜುಮ್ಮೆ ಕಿ ರಾತ್ ಮೇ ಡಾನ್ಸ್ ಅದಾಗಿತ್ತು. ಸಿನಿಮಾದಲ್ಲಿ ಈ ಹಾಡಿನಲ್ಲಿ ಸಲ್ಮಾನ್ ಜೊತೆ ಜಾಕ್ವಿಲಿನಾ ಫರ್ನಾಂಡೀಸ್ ಹೆಜ್ಜೆ ಹಾಕಿದ್ದರು. ಅದರಲ್ಲಿ ಒಂದು ಕಡೆ ನಟಿಯ ಸ್ಕರ್ಟ್ ಅನ್ನು ಸಲ್ಮಾನ್ ಖಾನ್ ಹಲ್ಲಿನಲ್ಲಿ ಕಚ್ಚಿಕೊಂಡು ಸ್ಟೆಪ್ ಹಾಕುವ ದೃಶ್ಯವಿದೆ. ಅದೇ ಸ್ಟೆಪ್ಪನ್ನು ಸಲ್ಮಾನ್ ಖಾನ್ ಪೂಜಾ ಹೆಗ್ಡೆ ಜೊತೆ ವೇದಿಕೆಯ ಮೇಲೆ ಪುನರಾವರ್ತನೆ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಅದರಿಂದಲೇ ಈಗ ಸಲ್ಮಾನ್ ಖಾನ್ ಅವರು ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ.

ವೇದಿಕೆಯ ಮೇಲೆ ನೃತ್ಯಮಾಡುವಾಗ ಸಲ್ಮಾನ್ ಖಾನ್ ಮೂಲ ಹಾಡಿನಲ್ಲಿರುವ ಸ್ಟೆಪ್ ಅನ್ನು ಹಾಕುವ ಸಲುವಾಗಿ ಪೂಜಾ ಹೆಗಡೆ ಅವರ ಡ್ರೆಸ್ಸನ್ನು ಹಲ್ಲಿನಲ್ಲಿ ಕಚ್ಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೆ ನಟಿ ಬಾಡಿಕಾನ್ ಡ್ರೆಸ್ ಹಾಕಿದ್ದರಿಂದ ಅದು ಸಾಧ್ಯವಾಗಿಲ್ಲ, ಪೂಜಾ ಡಾನ್ಸ್ ಮಾಡುತ್ತಾ ಮುಂದೆ ಮುಂದೆ ಹೋದರೆ, ಹಾಗೆ ಹೋಗುತ್ತಿರುವ ಪೂಜಾ ಹೆಗ್ಡೆ ಹಿಂದೆ ಅವರ ಡ್ರೆಸ್ಸನ್ನು ಬಾಯಲ್ಲಿ ಹಿಡಿಯಲು ಸಲ್ಮಾನ್ ಖಾನ್ ಮಾಡಿದ ಪ್ರಯತ್ನಗಳು ಕಂಡಿದೆ. ಇದನ್ನು ನೋಡಿ ನೆಟ್ಟಿಗರಿಗೆ ಸಿಕ್ಕಾಪಟ್ಟೆ ನಗು ಬಂದಿದೆ. ಜನರು ವೈವಿಧ್ಯಮಯ ಕಾಮೆಂಟ್ ಗಳನ್ನು ಮಾಡಿ ವ್ಯಂಗ್ಯ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *