ಅಮ್ಮನ ಮೇಲೆ ಅಮಿತವಾದ ಪ್ರೀತಿಯಿದ್ದ ಮಕ್ಕಳಿಗಾಗಿ ಅಕೆಯ ಮಂದಿರ ನಿರ್ಮಾಣ ಮಾಡಿದ ಪತಿ

Entertainment Featured-Articles News
83 Views

ಮಧ್ಯ ಪ್ರದೇಶದ ಶಾಜಾಪುರ ಜಿಲ್ಲಾ ಕೇಂದ್ರದಿಂದ‌ ಮೂರು ಕಿಮೀ ದೂರದಲ್ಲಿರುವ ಸಾಂಪ್ ಖೇಡಾ ಎನ್ನುವ ಗ್ರಾಮದಲ್ಲಿನ ಮಂದಿರ ಇದೀಗ ಚರ್ಚೆಯ ವಿಷಯವಾಗಿದೆ. ಈ ಪ್ರದೇಶದಲ್ಲಿ ಈ ಹೊಸ ಮಂದಿರ ಬಹಳ ವಿಶೇಷವಾಗಿದೆ. ಇದಕ್ಕೆ ಪ್ರಮುಖ ಕಾರಣ ಅಲ್ಲಿನ ಜನರು ಇಂತಹ ಮಂದಿರವೊಂದನ್ನು ಸುತ್ತ ಮುತ್ತಲೂ ಎಲ್ಲೂ ನೋಡಿಲ್ಲ. ಅಂತಹ ವಿಶೇಷವಾದ ಮಂದಿರ ಇದಾಗಿದೆ. ಹೌದು ಈ ಮಂದಿರ ಏಕೆ ಜನರಿಗೆ ವಿಶೇಷ ಎನಿಸಿದೆ ಎಂದರೆ ಈ ಮಂದಿರದಲ್ಲಿ ದೇವರ ರೂಪದಲ್ಲಿ ಒಬ್ಬ ಮಹಿಳೆಯ ಪ್ರತಿಮೆಯನ್ನು ಇರಿಸಲಾಗಿದೆ. ಆ ಮಹಿಳೆಯ ನಿಧನದ ನಂತರ ಆಕೆಯ ಕುಟುಂಬ ಆಕೆಯನ್ನು ದೇವರಂತೆ ಕಾಣುತ್ತಿದ್ದಾರೆ.

ಸಾಂಪ್ ಖೇಡಾ ಗ್ರಾಮದ ಬಂಜಾರಾ ಸಮುದಾಯಕ್ಕೆ ಸೇರಿದ ನಾರಾಯಣ ಸಿಂಹ ರಾಠೋಡ್ ಅವರು ತಮ್ಮ ಪತ್ನಿ ಹಾಗೂ ಮಕ್ಕಳ ಜೊತೆ ಗ್ರಾಮದಲ್ಲಿ ವಾಸವಾಗಿದ್ದರು. ನಾರಾಯಣ ಸಿಂಹ ಅವರ ಪತ್ನಿ ಗೀತಾಬಾಯಿ ಹೆಚ್ಚು ಧಾರ್ಮಿಕ ವಿಚಾರಗಳ, ಆಚರಣೆಗಳ ಮಹಿಳೆಯಾಗಿದ್ದರು. ಪೂಜೆ, ಪುನಸ್ಕಾರಗಳಲ್ಲಿ ಆಕೆ ಹೆಚ್ಚು ಸಮಯ ಕಳೆಯುತ್ತಿದ್ದರು. ಗಂಡು ಮಕ್ಕಳು ಆಕೆಯನ್ನು ದೇವತೆ ಎನ್ನುವಂತೆ ಗೌರವಿಸಿ, ಆದರಿಸುತ್ತಿದ್ದರು.

ಸುಖ, ಸಂತೋಷವಿದ್ದ ಕುಟುಂಬದಲ್ಲಿ ಕೊರೊನಾ ಎರಡನೇ ಅಲೆಯ ಕಾಲದಲ್ಲಿ ಗೀತಾಬಾಯಿ ಅವರ ಆರೋಗ್ಯ ಏರುಪೇರಾಯಿತು. ಕುಟುಂಬ ಲಕ್ಷ ಲಕ್ಷ ಹಣ ಖರ್ಚು ಮಾಡಿದರೂ ಪ್ರಯೋಜನವಾಗಲಿಲ್ಲ. ಗೀತಾಬಾಯಿ ಅವರು 27 ಏಪ್ರಿಲ್ 2021 ರಂದು ನಿಧನರಾದರು. ಸದಾ ನೆರಳಿನಂತೆ ಜೊತೆಗಿದ್ದ ತಾಯಿಯ ಅಗಲಿಕೆಯನ್ನು ಮಕ್ಕಳಿಂದ ಸಹಿಸಲಾಗಲಿಲ್ಲ. ಅವರು ತಂದೆಯೊಡನೆ ಮಾತನಾಡಿದ, ಅಮ್ಮನಿಗಾಗಿ ಮಂದಿರ ನಿರ್ಮಾಣ ಮಾಡಲು ನಿರ್ಧಾರ ಮಾಡಿದರು.

ಗೀತಾಬಾಯಿ ಅವರ ಮಗ ಲಕ್ಕಿ, ಅಮ್ಮನ ನಿಧನದ ನಂತರ ಕುಟುಂಬದಲ್ಲಿ ಒಂದು ಶೋಕ ತುಂಬಿ ಹೋಗಿತ್ತು. ಅದಕ್ಕೆ ಆಕೆ ಸದಾ ನಮ್ಮೊಡನೆ ಇರಬೇಕೆಂದು ಮಂದಿರ ನಿರ್ಮಾಣ ಮಾಡಲು ತೀರ್ಮಾನಿಸಿ, ರಾಜಸ್ಥಾನದ ಅಲ್ವಾರ್ ನ ಶಿಲ್ಪಕಾರರಿಗೆ ಅಮ್ಮನ ಮೂರ್ತಿ ಕೆತ್ತುವ ಕೆಲಸ ನೀಡಿದೆವು. ಕೆಲವೇ ದಿನಗಳಲ್ಲಿ ಮೂರ್ತಿ ಸಿದ್ಧವಾಗಿ ನಮ್ಮ ಮನೆಯನ್ನು ಸೇರಿತು.

ನಂತರ ಮನೆಯ ಮುಂದೆಯೇ ಮಂದಿರ ನಿರ್ಮಾಣ ಮಾಡಿ, ಅಮ್ಮನ ವಿಗ್ರಹ ಅಲ್ಲಿ ಪ್ರತಿಷ್ಠಾಪನೆ ಮಾಡಿದ್ದೇವೆ‌. ಅಮ್ಮನ ವಿಗ್ರಹ ಮಾತನಾಡುವುದಿಲ್ಲ ಅಷ್ಟೇ. ಆದರೆ ಆಕೆ ಈಗ ಸದಾ ನಮ್ಮೊಂದಿಗೆ ಇದ್ದಾಳೆ ಎನ್ನುವ ಭಾವನೆಯನ್ನು ನಮಗೆ ಸದಾ ಮೂಡಿಸುತ್ತಿದೆ. ಪ್ರತಿದಿನ ಮನೆಯ ಅನ್ಯ ಸದಸ್ಯರು ಇಲ್ಲಿ ಪೂಜೆಯನ್ನು ಮಾಡುತ್ತಾರೆ ಎಂದು ಹೇಳಿದ್ದಾರೆ. ನಾರಾಯಣ ಸಿಂಹ ರಾಠೋಡ್ ಅವರ ಪತ್ನಿಯ ಈ ಮಂದಿರ ಈಗ ಜನರ ಗಮನವನ್ನು ಸೆಳೆದಿದೆ.

Leave a Reply

Your email address will not be published. Required fields are marked *