ಅಮ್ಮನ ಮೇಲಿನ ಪ್ರೀತಿಗೆ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಮಾಡಿದ ಕೆಲಸಕ್ಕೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ

Written by Soma Shekar

Published on:

---Join Our Channel---

ಬಾಲಿವುಡ್ ನಟಿ ಜಾಹ್ನವಿ ಕಪೂರ್ , ಭಾರತೀಯ ಸಿನಿಮಾ ರಂಗದ ದಂತಕಥೆ ದಿವಂಗತ ಶ್ರೀದೇವಿ ಅವರ ಮಗಳು ಎನ್ನುವ ವಿಷಯ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ನಟಿ ಜಾಹ್ನವಿ ಬಾಲಿವುಡ್ ನಲ್ಲಿ ಬಹು ಬೇಡಿಕೆಯ ನಟಿಯಾಗಿದ್ದಾರೆ. ಆದರೆ ದುರಾದೃಷ್ಟವಶಾತ್ ಜಾಹ್ನವಿ ಮೊದಲ ಸಿನಿಮಾ ಬಿಡುಗಡೆಗೆ ಮೊದಲೇ ಅವರ ತಾಯಿ, ಹಿರಿಯ ನಟಿ ಶ್ರೀದೇವಿ ಇಹಲೋಕವನ್ನು ತ್ಯಜಿಸಿದ್ದರು. ಜಾಹ್ನವಿ ಗೆ ಅವರ ತಾಯಿ ಶ್ರೀದೇವಿ ಎಂದರೆ ಅಮಿತವಾದ ಪ್ರೀತಿ. ಇನ್ಸ್ಟಾಗ್ರಾಂ ನಲ್ಲಿ ಆ್ಯಕ್ಟೀವ್ ಆಗಿರುವ ಜಾಹ್ನವಿ ಸುಂದರವಾದ ಫೋಟೋ ಗಳನ್ನು ಶೇರ್ ಮಾಡುತ್ತಿರುತ್ತಾರೆ.

ಜಾಹ್ನವಿ ಇತ್ತೀಚಿಗೆ ಪ್ರವಾಸ ಹೋಗಿದ್ದ ಕಡೆ ತೆಗೆದಿದ್ದ ಸುಂದರವಾದ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಖುಷಿ ನೀಡಿದ್ದರು. ಅದರ ನಡುವೆಯೇ ಈಗ ಹೊಸದೊಂದು ವಿಶೇಷ ಫೋಟೋ ಎಲ್ಲರ ಗಮನವನ್ನು ಸೆಳೆದಿದೆ. ಹೌದು, ಜಾಹ್ನವಿ ತಮ್ಮ ಕೈ ಮೇಲೆ ಹೊಸ ದೊಂದು ಟ್ಯಾಟೂ ಹಾಕಿಸಿಕೊಂಡಿದ್ದು, ಈ ಫೋಟೋ ಗಮನ ಸೆಳೆದಿರುವುದು ಮಾತ್ರವೇ ಅಲ್ಲದೇ ಆ ಟ್ಯಾಟೂ ಬಹಳ ವಿಶೇಷ ಕೂಡಾ ಆಗಿದೆ.

ಹಾಗಾದರೆ ಈ ಟ್ಯಾಟೂವಿನಲ್ಲಿ ಅಂತಹ ವಿಶೇಷತೆ ಏನಿದೆ?? ಎನ್ನುವುದಾದರೆ, ಜಾಹ್ನವಿ ಅವರ ಈ ಹೊಸ ಟ್ಯಾಟೂ ಅವರ ತಾಯಿ ನಟಿ ಶ್ರೇದೇವಿ ಅವರ ಕೈ ಬರಹವಾಗಿದೆ. ತಮ್ಮ ತಾಯಿಯ ಕೈ ಬರಹವನ್ನು ತನ್ನ ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡು, ಅಮ್ಮನನ್ನು ಸದಾ ತನ್ನೊಂದಿಗೆ ಇರುವಂತೆ ಮಾಡಿದ್ದಾರೆ ಜಾಹ್ನವಿ ಕಪೂರ್. ಈ ವಿಶೇಷ ಟ್ಯಾಟೂವಿನಲ್ಲಿ “ಐ ಲವ್ ಯೂ ಲಬ್ಬೂ” ಎನ್ನುವ ಪದಗಳನ್ನು ನಾವು ಗಮನಿಸಬಹುದಾಗಿದೆ.

ನಟಿ ಶ್ರೀದೇವಿ ಬದುಕಿದ್ದಾಗ ತಮ್ಮ ಮುದ್ದು ಮಗಳನ್ನು ಪ್ರೀತಿಯಿಂದ ಲಬ್ಬು ಎಂದು ಕರೆಯುತ್ತಿದ್ದರು. ಶ್ರೀದೇವಿ ಅವರ ಮೂರನೇ ವರ್ಷದ ಪುಣ್ಯ ಸ್ಮರಣೆಯ ದಿನ ಜಾಹ್ನವಿ ತಮ್ಮ ಅಮ್ಮನ ಕೈ ಬರಹದ ಬಗ್ಗೆ ವಿವರಣೆಯನ್ನು ನೀಡಿದ್ದರು. ಇದಲ್ಲದೇ ಟ್ಯಾಟೂ ಹಾಕಿಸಿಕೊಂಡ ವೀಡಿಯೋ ತುಣುಕನ್ನು ಸಹಾ ಶೇರ್ ಮಾಡಿಕೊಂಡಿದ್ದರು. ನೋವಾದಾಗ ಗೋವಿಂದನನ್ನು ಸ್ಮರಿಸಿದ್ದರು ಜಾಹ್ನವಿ.

ಜಾಹ್ನವಿ ತಾಯಿಯ ಮೇಲಿನ ಪ್ರೀತಿಯಿಂದ ತನ್ನ ಅಮ್ಮನ ಕೈ ಬರಹವನ್ನು ತನ್ನ ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿರುವುದನ್ನು ನೋಡಿ ಅವರ ಅಭಿಮಾನಿಗಳು ಹಾಗೂ ನಟಿ ಶ್ರೀ ದೇವಿ ಅವರ ಅಭಿಮಾನಿಗಳ ಸಹಾ ಅಪಾರವಾದ ಮೆಚ್ಚುಗೆಯನ್ನು ಸೂಚಿಸಿ, ಕಾಮೆಂಟ್ ಗಳನ್ನು ಮಾಡುತ್ತಾ ಈ ಕಾರ್ಯಕ್ಕೆ ಮೆಚ್ಚುಗೆಗಳನ್ನು ಸೂಚಿಸಿದ್ದಾರೆ.

Leave a Comment